ಡೆಹ್ರಡೂನ್​:ಇತ್ತೀಚೆಗೆ ವಿಶ್ವವಿದ್ಯಾಲಯವೊಂದರ ಕನ್ವೋಕೇಷನ್​ ದಿನದ ಫೋಟೋಗಳು ವೈರಲ್​ ಆಗಿದ್ದವು. ಉತ್ತರಾಂಚಲ್​ ವಿಶ್ವವಿದ್ಯಾಲಯವು ಅದರ ಕನ್ವೋಕೇಷನ್​ ದಿನಕ್ಕೆ ವಿದ್ಯಾರ್ಥಿಗಳಿಗೆ ಕಪ್ಪು ಕೋಟು, ಕಪ್ಪು ಹ್ಯಾಟ್​ನ ಬದಲಾಗಿ ಕೇಸರಿ ಶಾಲು ಧರಿಸುವಂತೆ ಹೇಳಿತ್ತು ಎಂದು ಫೋಟೋದ ಜತೆ ಮಾಹಿತಿ ಹಂಚಲಾಗಿತ್ತು. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ಇದೀಗ ತಿಳಿದುಬಂದಿದೆ.
ವೈರಲ್​ ಆದ ಫೋಟೋಗಳು ಉತ್ತರಾಂಚಲ್​ ವಿಶ್ವವಿದ್ಯಾಲಯದ್ದೇ. ಆದರೆ ಆ ಫೋಟೋ ಈ ವರ್ಷದ್ದಲ್ಲ. ಕಳೆದ ವರ್ಷ ಫೆಬ್ರವರಿ 29ರಂದು ವಿಶ್ವವಿದ್ಯಾಲಯದಲ್ಲಿ ನಡೆದ ಕಾನ್ವೋಕೇಷನ್​ ದಿನದ ಫೋಟೋಗಳವು. ಆ ಫೋಟೋಗಳನ್ನು ವಿವಿ ತನ್ನ ಟ್ವಿಟ್ಟರ್​ ಖಾತೆಯಲ್ಲೂ ಹಂಚಿಕೊಂಡಿದೆ. ಆದರೆ ಅಲ್ಲಿ ಕೇವಲ ಕೇಸರಿ ಶಾಲನ್ನು ಧರಿಸಿದ ವಿದ್ಯಾರ್ಥಿಗಳು ಮಾತ್ರವಲ್ಲ, ನೀಲಿ, ಮೆರೂನ್​ ಬಣ್ಣದ ಶಾಲುಗಳನ್ನೂ ಧರಿಸಿದ್ದಾರೆ.
ವಿವಿಯ ವಿದ್ಯಾರ್ಥಿಗಳು ಕಾನ್ವೋಕೇಷನ್​ಗೆ ಆ ರೀತಿಯ ಡ್ರೆಸ್​ ಹಾಕಿದ್ದರು. ಆದರೆ ಕೇಸರಿ ಅಥವಾ ಯಾವುದೇ ಬಣ್ಣವನ್ನು ಹಾಕಬೇಕು ಎಂದು ಆದೇಶವಿರಲಿಲ್ಲ. ಆಯಾ ವಿಭಾಗದವರು ಬಣ್ಣ ನಿರ್ಧರಿಸಿಕೊಂಡು ಬಂದಿದ್ದರು ಎಂದು ವಿವಿ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)
Grand Celebration of First Convocation Ceremony at Uttaranchal University 59 Gold Medals, 16 Doctorate (Ph.D.) and 2668 received Degrees.https://t.co/oHOnvUeLHR#UttaranchalUniversity#GrandCelebration#FirstConvocationCeremony#GoldMedals#Doctorate#Degreespic.twitter.com/Vo29kN9ac7
— Uttaranchal University Dehradun Official (@UUDehradun)February 29, 2020

8 ವರ್ಷದ ಬಾಲಕಿಯನ್ನು ರೇಪ್​ ಮಾಡಿ ಬಾವಿಗೆ ಎಸೆದ ಪಾಪಿ!

‘ಪ್ರಧಾನಿಯವರ ವೀಸಾ ರದ್ದಾಗಬೇಕು!’ ಮೋದಿ ವಿರುದ್ಧ ಗುಡುಗಿದ ದೀದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
