ಉತ್ತರಕಾಶಿ:ಭಾನುವಾರ ಬೆಳಗ್ಗೆ 11 ಗಂಟೆಗೆ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗಕ್ಕೆ ಭೇಟಿ ನೀಡಲಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಸುರಂಗದಲ್ಲಿ ನಡೆಸುತ್ತಿರುವ ರಕ್ಷಣಾ ಕಾರ್ಯಾಚರಣೆಗಳನ್ನು ಪರಿಶೀಲಿಸಲಿದ್ದಾರೆ.
ಇದನ್ನೂ ಓದಿ:BBKS10: ಶಾಕಿಂಗ್ ಡಬಲ್​​ ಎಲಿಮಿನೇಷನ್;​ ಮನೆಯಿಂದ ಮೊದಲು ಇಶಾನಿ ಔಟ್​!
ನವೆಂಬರ್ 12 ರಂದು ಉತ್ತರಕಾಶಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸಿಲ್ಕ್ಯಾರಾ ಸುರಂಗದ ಒಂದು ಭಾಗ ಕುಸಿದ ಪರಿಣಾಮ ಸ್ಥಳದಲ್ಲಿದ್ದ 41 ಕಾರ್ಮಿಕರು ಸುರಂಗದೊಳಗೆ ಸಿಲುಕಿಕೊಂಡು ಇಂದಿಗೆ ಏಳು ದಿನಗಳೇ ಕಳೆದಿವೆ. ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯನ್ನು ಶುಕ್ರವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಐದನೇ ಪೈಪ್ ಅನ್ನು ಮಧ್ಯಾಹ್ನ 2:45ರ ಸುಮಾರಿಗೆ ಇರಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಈ ಅಡಚಣೆಯ ಹೊರತಾಗಿಯೂ, ಕೊರೆಯುವ ಕೆಲಸವು ಸ್ಥಗಿತಗೊಂಡಿದ್ದರೂ, ಶನಿವಾರ ಬೆಳಗ್ಗೆ ಪ್ರಯತ್ನಗಳು ಪುನರಾರಂಭಗೊಂಡವು. ಎಲ್ಲಾ ಆಯಾಮದಲ್ಲೂ ಯೋಚನೆ ಮಾಡುತ್ತಿರುವ ರಕ್ಷಣಾ ಪಡೆ, ಸಮತಲ ಕೊರೆಯುವಿಕೆಯು ಯಶಸ್ವಿಯಾಗದಿದ್ದರೆ ಸುರಂಗದ ಮೇಲಿನ ಭಾಗದಿಂದ ಲಂಬವಾಗಿ ಕೊರೆಯುವ ಸಾಧ್ಯತೆ ಬಗ್ಗೆ ಕೂಡ ಪರಿಶೀಲನೆ ನಡೆಸುತ್ತಿದೆ. ಲಂಬ ಕೊರೆಯುವಿಕೆಯನ್ನು ಬಳಸಿಕೊಂಡು, ಅಧಿಕಾರಿಗಳು ಪರ್ವತದ ಮೇಲಿನಿಂದ ಕಾರ್ಮಿಕರನ್ನು ತಲುಪಲು ಪ್ರಯತ್ನಿಸುತ್ತಾರೆ ಎಂದು ತಂಡ ತಿಳಿಸಿದೆ.
ಇದನ್ನೂ ಓದಿ:ಉದ್ದೀಪನ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ನೀರಜ್​ ಯಾದವ್​; ಏಷ್ಯನ್​ ಪ್ಯಾರಾ ಗೇಮ್ಸ್​ನಲ್ಲಿ ಗೆದ್ದ 2 ಚಿನ್ನ ಕೈತಪ್ಪುವ ಭೀತಿ!
ಬಾರ್ಡರ್ ರೋಡ್ಸ್ ಆರ್ಗನೈಸೇಶನ್​ನ (BRO) ಅಧಿಕಾರಿಯೊಬ್ಬರು ಮಾತನಾಡಿ, “ಸುರಂಗದ ಮೇಲ್ಭಾಗದಲ್ಲಿ ಒಂದು ಬಿಂದುವನ್ನು ಗುರುತಿಸಲಾಗಿದೆ. ಅಲ್ಲಿಂದ ಲಂಬ ಕೊರೆಯುವಿಕೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು” ಎಂದರು.
“ಈ ಟ್ರ್ಯಾಕ್ ಸುಮಾರು 1,000 ರಿಂದ 1,100 ಮೀಟರ್ ಉದ್ದವಿದ್ದು, ಲೆಕ್ಕಾಚಾರದಂತೆ ಭಾನುವಾರ ಮಧ್ಯಾಹ್ನದ ವೇಳೆಗೆ ಇದು ಸಿದ್ಧವಾಗಬೇಕು” ಎಂದು ಹೇಳಿದ್ದಾರೆ. ಸದ್ಯ ಉತ್ತರಾಖಂಡ್ ಆಡಳಿತವು ಸಿಲುಕಿದ ಕಾರ್ಮಿಕರ ಕುಟುಂಬದ ಎಲ್ಲ ಸದಸ್ಯರಿಗೆ ವಸತಿ ಮತ್ತು ಆಹಾರದ ವ್ಯವಸ್ಥೆಯನ್ನು ಪೂರೈಸಿದೆ,(ಏಜೆನ್ಸೀಸ್).
ಭಾರತದ ವಿಶ್ವಕಪ್​ ಗೆಲುವಿಗೆ ಗಣ್ಯರು, ತಾರೆಯರಿಂದ ಶುಭ ಹಾರೈಕೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
