ಲಖನೌ:ಹೆತ್ತ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರೆ, ಕರೊನಾ ಇದ್ದಿರಬಹುದು ಎಂದು ಅನುಮಾನ ಪಟ್ಟ ಮಗ ಆಕೆಯನ್ನು ತನ್ನ ಅಕ್ಕನ ಮನೆ ಬಾಗಿಲಲ್ಲಿ ಮಲಗಿಸಿ ಬಂದಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಮಗಳೂ ಕೂಡ ಅಮ್ಮನನ್ನು ಒಳಗೆ ಕರೆದುಕೊಂಡು ಬರದೆ, ಆಕೆಯನ್ನು ರಸ್ತೆಯಲ್ಲೇ ಮಲಗಿಸಿರುವುದಾಗಿ ವರದಿಯಾಗಿದೆ.
ವಯಸ್ಸಾಗಿದ್ದ ಆಕೆ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಆಕೆಗೆ ಕರೊನಾ ಇದ್ದಿರಬಹುದು ಎನ್ನುವ ಅನುಮಾನ ಬಂದ ಹಿನ್ನೆಲೆಯಲ್ಲಿ ಆಕೆಯನ್ನು ಕರೆದುಕೊಂಡು ಹೋದ ಮಗ, ಅಕ್ಕನ ಮನೆ ಬಾಗಿಲಲ್ಲಿ ಮಲಗಿಸಿ ವಾಪಾಸಾಗಿದ್ದಾನೆ. ತಾಯಿ ರಸ್ತೆ ಬದಿ ಮಲಗಿರುವುದು ಕಂಡರೂ ಮನ ಕರಗದ ಮಗಳು ಕೂಡ ಹಾಗೆಯೇ ಬಾಗಿಲು ಹಾಕಿಕೊಂಡಿದ್ದಾಳೆ. ಈ ದೃಶ್ಯವನ್ನು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಅದು ವೈರಲ್ ಆಗಿದೆ.
ವೈರಲ್​ ವಿಡಿಯೋ ಗಮನಿಸಿದ ಪೊಲೀಸರು ಆಕೆ ಮಲಗಿದ್ದ ಸ್ಥಳಕ್ಕೆ ತೆರಳಿ, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಎರಡು ದಿನ ಉಸಿರಾಡುತ್ತಿದ್ದ ಆಕೆ ಆಮೇಲೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಆಸ್ಪತ್ರೆ ಸೇರಿದ ನಂತರ ಆಕೆಗೆ ಕರೊನಾ ಪರೀಕ್ಷೆ ಮಾಡಿಸಿದಾಗ ಆಕೆಯಲ್ಲಿ ಸೋಂಕಿರುವುದು ದೃಢವಾಗಿದೆ. ತಾಯಿ ಸತ್ತು ಗಂಟೆಗಳು ಉರುಳಿದರೂ ಆಕೆಯ ಶವವನ್ನು ತೆಗೆದುಕೊಂಡು ಹೋಗಲು ಕುಟುಂಬಸ್ಥರು ಬಂದಿಲ್ಲ ಎಂದು ತಿಳಿಸಲಾಗಿದೆ. (ಏಜೆನ್ಸೀಸ್)
ಊಟ ವೇಸ್ಟ್ ಮಾಡುವುದರಿಂದಲೂ ತಾಪಮಾನ ಏರಿಕೆಯಾಗುತ್ತೆ! ಹೇಗೆ? ಏನು? ಇಲ್ಲಿದೆ ಮಾಹಿತಿ..

ಚೆನ್ನೈ ವಿರುದ್ಧ ಸೋತ ಬೆನ್ನಲ್ಲೇ ಆರ್​ಸಿಬಿ ಅಭಿಮಾನಗಳಿಗೆ ಮತ್ತೊಂದು ಶಾಕ್! ಈ ಇಬ್ಬರು ಆಟಗಾರರು ತಂಡದಿಂದ ಔಟ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
