ಉತ್ತರಪ್ರದೇಶ:ವಿವಾಹಿತ ದಲಿತ ಮಹಿಳೆಯೊಂದಿಗೆ ಫೇಸ್​ಬುಕ್​​ನಲ್ಲಿ ಸ್ನೇಹ ಬೆಳೆಸಿ, ಆಕೆಯನ್ನು ಮದುವೆಯಾಗಿ ನಂತರ ಮತಾಂತರಗೊಳಿಸಿದ ವ್ಯಕ್ತಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ:ಪ್ರತಿಭಾವಂತ ವಿದ್ಯಾರ್ಥಿಯ 4 ವರ್ಷದ ವಿದ್ಯಾಭ್ಯಾಸದ ಖರ್ಚನ್ನು ವಹಿಸಿಕೊಂಡ ಕೆ.ಎಲ್. ರಾಹುಲ್
ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯ ಮಿಶ್ರೌಲಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾನೂನುಬಾಹಿರ ಧಾರ್ಮಿಕ ಮತಾಂತರದ ಪ್ರಕರಣ ಮುನ್ನೆಲೆಗೆ ಬಂದಿದೆ. ದಲಿತ ಕುಟುಂಬಕ್ಕೆ ಸೇರಿದ ಮಹಿಳೆಯೊಂದಿಗೆ ಫೇಸ್​ಬುಕ್​ನಲ್ಲಿ ಸ್ನೇಹ ಬೆಳೆಸಿ, ಆಕೆಯನ್ನು ಮದುವೆಯಾಗಿ ತದನಂತರ ಇಸ್ಲಾಂಗೆ ಮತಾಂತರಗೊಳಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಸದ್ಯ ಆರೋಪಿಯೊಟ್ಟಿಗೆ 5 ಜನರನ್ನು ಬಂಧಿಸಿರುವ ಪೊಲೀಸರು, ಐಪಿಸಿ ಸೆಕ್ಷನ್ 504 ಮತ್ತು 506, ಎಸ್‌ಸಿ / ಎಸ್‌ಟಿ ಕಾಯ್ದೆ ಮತ್ತು ಉತ್ತರ ಪ್ರದೇಶದ ಮತಾಂತರ ವಿರೋಧಿ ಕಾನೂನಿನ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ:ಸಿಗರೇಟ್ ಸೇದಬೇಡ ಎಂದಿದ್ದಕ್ಕೆ ಕತ್ತರಿಯಿಂದ 9 ಬಾರಿ ಇರಿದ ಯುವಕ
ಮಹಿಳೆಯ ಮೊದಲ ಪತಿ ಶೈಲೇಶ್ ಕುಮಾರ್ ಮತ್ತು ಅವರ ಕುಟುಂಬದವರು ನೀಡಿದ ದೂರಿನ ಅನ್ವಯ ಪೊಲೀಸರು ಚುರುಕು ತನಿಖೆ ಕೈಗೊಂಡಿದ್ದಾರೆ. ಈ ವರ್ಷದ ಮೇ 31ರ ರಾತ್ರಿ ಮಹಿಳೆ ಮನೆಯಿಂದ ಓಡಿ ಹೋಗಿದ್ದಾಳೆ. ಓಡಿ ಹೋಗುವ ಮುನ್ನ ಮನೆಯಲ್ಲಿದ್ದ 55,000 ರೂ. ನಗದು ಮತ್ತು ಚಿನ್ನಾಭರಣಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾಳೆ.
ಘಟನೆ ನಡೆದು ಎರಡು ದಿನಗಳ ಬಳಿಕ ಮಾಹಿತಿ ಕಲೆಹಾಕಿದ ಪೊಲೀಸರು, ಜಿಲ್ಲೆಯ ಸಿಸ್ವಾನ್ ಗ್ರಾಮದ ಸಜಾವುಲ್ಲಾ ಎಂಬಾತ ಶೈಲೇಶ್ ಪತ್ನಿಯೊಂದಿಗೆ ಫೇಸ್ ಬುಕ್ ನಲ್ಲಿ ಸ್ನೇಹ ಬೆಳೆಸಿ, ತನ್ನ ಸಹಚರರೊಂದಿಗೆ ಮುಂಬೈಗೆ ಕರೆದೊಯ್ದಿದ್ದ ಎಂಬುದನ್ನು ಸ್ಪಷ್ಟಪಡಿಸಿಕೊಂಡಿದ್ದಾರೆ. ಮುಂಬೈನಲ್ಲಿ ಆತ ಧಾರ್ಮಿಕ ಮತಾಂತರವನ್ನು ನಡೆಸಿದ್ದಾನೆ ಮತ್ತು ಮಹಿಳೆಯ ಹೆಸರನ್ನು ಲಕ್ಷ್ಮಿಯಿಂದ ಮುಸ್ಕಾನ್ ಎಂದು ಬದಲಾಯಿಸಿದ್ದಾನೆ.
ಇದನ್ನೂ ಓದಿ:Video Viral | ತನಗೆ ಕಚ್ಚಿದ ಹಾವು ಯಾವುದೆಂದು ವೈದ್ಯರಿಗೆ ತೋರಿಸಲು ಈತ ಮಾಡಿದ್ದೇನು ನೋಡಿ..
ಯುವತಿಯ ಸಂಬಂಧಿಕರು ಮುಂಬೈ ತಲುಪಿ, ಎರಡೂ ಕಡೆಯವರಿಗೆ ಸಮಾಲೋಚನೆ ನಡೆಸಿದ ಬಳಿಕ ಆಕೆಯನ್ನು ತಮ್ಮ ಮನೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ,(ಏಜೆನ್ಸೀಸ್).
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + sixteen =
Remember me
