ಡೆಹ್ರಾಡೂನ್:ಉತ್ತರಾಖಂಡದಲ್ಲಿ ಮೂರು ದಿನಗಳಿಂದ ಕುಂಭದ್ರೋಣ ಮಳೆ ಸುರಿಯುತ್ತಿದ್ದು, ಪ್ರವಾಹ, ಭೂಕುಸಿತ, ಮನೆ ಕುಸಿತದ ಕಾರಣ 41 ಮಂದಿ ಸಾವನ್ನಪ್ಪಿದ್ದಾರೆ. 12 ಕಣ್ಮರೆಯಾಗಿದ್ದಾರೆ. ಅವಶೇಷದಡಿ ಹಲವರು ಸಿಲುಕಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಸರ್ಕಾರ ಆತಂಕ ವ್ಯಕ್ತಪಡಿಸಿದೆ. ಪ್ರವಾಹದ ಕಾರಣ ಸೇತುವೆಗಳು, ಮನೆಗಳು, ಕಟ್ಟಡಗಳು, ರಸ್ತೆಗಳು ಕೊಚ್ಚಿಹೋಗಿವೆ. ಸಾವಿರಾರು ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ರಾಜ್ಯದಲ್ಲಿ ಭಾರಿ ಮಳೆ ಮುಂದುವರಿಯುವ ಮುನ್ಸೂಚನೆ ನೀಡಿರುವ ಭಾರತೀಯ ಹವಾಮಾನ ಇಲಾಖೆ (ಐಎಂಡಿ), ರೆಡ್ ಅಲರ್ಟ್ ಘೊಷಿಸಿದೆ. ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಜತೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿಯಲ್ಲಿ ಮಾತನಾಡಿದ್ದು, ರಾಜ್ಯದ ಅತಿವೃಷ್ಟಿ ಸನ್ನಿವೇಶದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಕೇಂದ್ರದಿಂದ ಅಗತ್ಯ ನೆರವಿನ ಭರವಸೆ ನೀಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡ ಉತ್ತರಾಖಂಡದ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಮಳೆಯಿಂದಾಗಿ ಪೌರಿ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನೇಪಾಳ ಮೂಲದ ಮೂವರು ಕಾರ್ವಿುಕರು ಸೋಮವಾರ ಸಾವನ್ನಪ್ಪಿದ್ದು, ಇವರು ಹೋಟೆಲ್ ನಿರ್ಮಾಣ ಕಾಮಗಾರಿಯಲ್ಲಿ ದುಡಿಯುತ್ತಿದ್ದರು. ಚಂಪಾವತ್ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕೊಚ್ಚಿ ಹೋದ ಕಾರಣ ಇಬ್ಬರು ಮರಣಿಸಿದ್ದರು.
4 ಲಕ್ಷ ರೂ. ಪರಿಹಾರ ಘೋಷಣೆ:ಮಳೆಯ ಕಾರಣ ಸಾವನ್ನಪ್ಪಿದವರ ಕುಟುಂಬಕ್ಕೆ ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರವನ್ನು ಸಿಎಂ ಪುಷ್ಕರ್ ಸಿಂಗ್ ಧಾಮಿ ಘೋಷಿಸಿದ್ದಾರೆ. ಮನೆ ಕಳೆದುಕೊಂಡವರಿಗೆ 1.90 ಲಕ್ಷ ರೂಪಾಯಿ ಪರಿಹಾರ ಕೊಡಲಾಗುವುದು ಎಂದು ಹೇಳಿದ್ದಾರೆ. ಶಿಕ್ಷಣ ಸಚಿವ ಧನಸಿಂಗ್ ರಾವತ್ ಜತೆ ಧಾಮಿ ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ಕೇರಳದಲ್ಲಿ ಡ್ಯಾಂಗಳು ಭರ್ತಿ:ಕೇರಳದಲ್ಲಿ ಮಳೆ ಕಡಿಮೆ ಆಗಿದೆ. ಆದರೆ, ರಾಜ್ಯದ 78 ಅಣೆಕಟ್ಟೆಗಳು ಭರ್ತಿಯಾಗಿದ್ದು, ನೀರು ಹೊರಬಿಡಲಾಗುತ್ತಿದೆ. ಇದರಿಂದ ನದಿ ಕೆಳಪಾತ್ರದಲ್ಲಿ ಪ್ರವಾಹ ಹೆಚ್ಚಿದೆ. ಇಡುಕ್ಕಿ ಜಲಾಶಯದ ಎರಡನೇ ಗೇಟ್ ಕೂಡ ತೆರೆಯಲಾಗಿದೆ ಎಂದು ಈ ಡ್ಯಾಂ ನಿರ್ವಹಿಸುವ ರಾಜ್ಯ ವಿದ್ಯುತ್ ಮಂಡಳಿ ಹೇಳಿದೆ. ಎರ್ನಾಕುಲಂ ಜಿಲ್ಲೆಯ ಇಡಮಲಯಾರ್ ಮತ್ತು ಪಟ್ಟಣಂತಿಟ್ಟ ಜಿಲ್ಲೆಯ ಪಂಪಾ ಡ್ಯಾಂಗಳಿಂದಲೂ ನೀರು ಬಿಡಲಾಗಿದೆ. ಕಾಕ್ಕಿ ಮತ್ತು ಶೋಲಯಾರ್ ಅಣೆಕಟ್ಟೆಗಳ ಗೇಟ್ ಕೂಡ ತೆರೆಯಲಾಗಿದೆ.ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ರಾಜ್ಯ ಸರ್ಕಾರ ಸೂಚಿಸಿದೆ.
ನೈನಿತಾಲ್​ಗೆ ಸಂಪರ್ಕ ಕಡಿತ:ಉತ್ತರಾಖಂಡ ಪ್ರಸಿದ್ಧ ಗಿರಿಧಾಮ ನೈನಿತಾಲ್​ನಲ್ಲಿ ಮೇಘಸ್ಪೋಟ ಸಂಭವಿಸಿ ಭಾರಿ ಮಳೆ ಸುರಿದಿದೆ. ಇದರಿಂದ ನೈನಿತಾಲ್​ನ ಮೂರೂ ರಸ್ತೆ ಮಾರ್ಗಗಳ ಸಂಪರ್ಕ ಕಡಿತವಾಗಿದೆ. ನೈನಿತಾಲ್​ನ ಸರೋವರ ಕೋಡಿ ಬಿದ್ದಿದ್ದು, ಇದರಿಂದ ನೈನಿತಾಲ್ ರಸ್ತೆಗಳಲ್ಲಿ ನೀರು ನಿಂತಿದೆ. ನೈನಿತಾಲ್ ಜಿಲ್ಲೆಯಲ್ಲೇ 13 ಮಂದಿ ಸಾವನ್ನಪ್ಪಿದ್ದಾರೆ. ಹಲ್ದಾ್ವನಿ ಜಿಲ್ಲೆ ಗೌಲಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಸೇತುವೆ ಕೊಚ್ಚಿಕೊಂಡು ಹೋಗಿದೆ. ರಾಮನಗರ ಮತ್ತು ರಾಣಿಖೇತ್ ಮಾರ್ಗದಲ್ಲಿ ಭೂಕುಸಿತ ಉಂಟಾಗಿದ್ದು, ಲೆಮನ್ ಟ್ರೀ ರೆಸಾರ್ಟ್​ಗೆ ಕೋಸಿ ನದಿ ನೀರು ನುಗ್ಗಿದ್ದು, ಅಲ್ಲಿರುವ 100 ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಮೋಲಿ ಜಿಲ್ಲೆಯ ಯಾತ್ರಾಕ್ಷೇತ್ರ ಬದರಿನಾಥಕ್ಕೆ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿದು ಹೋಗಿದೆ. ಯಾತ್ರಾರ್ಥಿಗಳು ಎಲ್ಲೆಲ್ಲಿ ಇದ್ದರೂ ಅಲ್ಲೆ ಇರುವಂತೆ ಸ್ಥಳೀಯ ಆಡಳಿತ ಸೂಚಿಸಿದೆ. ಭಾರಿ ಮಳೆಯ ಕಾರಣ ಚಾರ್​ಧಾಮ್ ಯಾತ್ರೆಯನ್ನು ಸೋಮವಾರವೇ ಸ್ಥಗಿತಗೊಳಿಸಲಾಗಿದೆ.
ಕನ್ನಡಿಗರ ರಕ್ಷಣೆಗೆ ಸಹಾಯವಾಣಿ:ಉತ್ತರಾಖಂಡದಲ್ಲಿ ಸಿಲುಕಿಕೊಂಡಿರುವ ಕರ್ನಾಟಕದ ಯಾತ್ರಿಕರು, ಪ್ರವಾಸಿಗರಿಗೆ ಸಹಾಯವಾಣಿ ಸ್ಥಾಪಿಸಲಾಗಿದೆ. 080 – 1070 (ಟೋಲ್ ಫ್ರೀ) ಮತ್ತು 080 – 2234 0676ಗೆ ಸಂಪರ್ಕ ಮಾಡಬಹುದು.
ಹತ್ತು ತಿಂಗಳ ಮಗು ಅನುಮಾನಾಸ್ಪದ ಸಾವು; ತಾಯಿ-ತಂದೆಯಿಂದ ಪರಸ್ಪರ ಕೊಲೆ ಆರೋಪ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 3 =
Remember me
