ಅಹಮದಾಬಾದ್​:ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅಹಮದಾಬಾದ್​ ಭೇಟಿ ಹಿನ್ನೆಲೆಯಲ್ಲಿ ಕೊಳೆಗೇರಿಗಳು ಕಾಣಿಸದಂತೆ ಬೃಹತ್​ ಗೋಡೆಯನ್ನು ನಿರ್ಮಿಸಿರುವ ಗುಜರಾತ್​ ಸರ್ಕಾರದ ಕ್ರಮ ಚರ್ಚೆಗೆ ಗುರಿಯಾಗಿತ್ತು. ಇದೀಗ ಸುಮಾರು 45 ಕೊಳೆಗೇರಿ ನಿವಾಸಿಗಳಿಗೆ ಸ್ಥಳಾಂತರ ಮಾಡುವಂತೆ ನೋಟಿಸ್​ ನೀಡಿರುವುದು ಭಾರಿ ಟೀಕೆಗೆ ಗುರಿಯಾಗಿದೆ.
ಗುಜರಾತಿನ ಅಹಮದಾಬಾದ್​ನ ಮೊಟೇರಾದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ವಿಶ್ವದ ಬಹುದೊಡ್ಡ ಕ್ರಿಕೆಟ್​ ಕ್ರೀಡಾಂಗಣವನ್ನು ಫೆ.24ರಂದು ಟ್ರಂಪ್​ ಉದ್ಘಾಟನೆ ಮಾಡಲಿದ್ದಾರೆ. ಟ್ರಂಪ್​ ಜತೆ ಪತ್ನಿ ಮೆಲಾನಿಯಾ ಟ್ರಂಪ್​ ಕೂಡ ಆಗಮಿಸಲಿದ್ದು, ಸ್ಮರಣೀಯ ಸ್ವಾಗತ ಕೋರಲು ಕೇಂದ್ರ ಸರ್ಕಾರದ ಭಾರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅಂದು ನಡೆಯುವ ಕಾರ್ಯಕ್ರಮಕ್ಕೆ “ಹೌಡಿ ಮೋದಿ” ರೀತಿಯಲ್ಲಿ “ನಮಸ್ತೆ ಟ್ರಂಪ್”​ ಎಂದೂ ಹೆಸರಿಡಲಾಗಿದೆ.
ಫೆ. 24ರಂದು ಸರ್ದಾರ್​ ವಲ್ಲಭಾಯ್​ ಪಟೇಲ್​ ವಿಮಾನ ನಿಲ್ದಾಣದಿಂದ ಕ್ರಿಕೆಟ್​ ಕ್ರೀಡಾಂಗಣಕ್ಕೆ ಸಾಗುವ ಮಾರ್ಗದುದ್ದಕ್ಕೂ ಮೆರವಣಿಗೆ ಮೂಲಕ ಟ್ರಂಪ್​ ದಂಪತಿಗೆ ಅದ್ಧೂರಿ ಸ್ವಾಗತ ಮಾಡಲಾಗುತ್ತದೆ. ಇದೇ ಮಾರ್ಗದ ಮಧ್ಯೆ ದೇವ್​ ಸರಣ್​ ಹೆಸರಿನ ಕೊಳಗೇರಿ ಪ್ರದೇಶವಿದ್ದು, ಅದು ಕಾಣದಂತೆ ಈಗಾಗಲೇ ಗುಜರಾತ್​ ಸರ್ಕಾರ ತಡೆಗೋಡೆಯನ್ನು ನಿರ್ಮಿಸಿರುವುದು ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಇದರ ಬೆನ್ನಲ್ಲೇ ಇದೀಗ ಅಲ್ಲಿನ ನಿವಾಸಿಗಳಿಗೆ ಸ್ಥಳಾಂತರ ಮಾಡುವಂತೆ ನೋಟಿ ಸ್​ ನೀಡಿರುವುದು ಮತ್ತೊಂದು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.
ಸುಮಾರು 2 ದಶಕಗಳಿಂದ ವಾಸಿಸುತ್ತಿರುವ ಕೊಳಗೇರಿಯನ್ನು ಟ್ರಂಪ್​ ಕಾರ್ಯಕ್ರಮಕ್ಕಾಗಿ 7 ದಿನದೊಳಗೆ ತ್ಯಜಿಸುವಂತೆ ಸರ್ಕಾರ ಹೇಳಿರುವುದಾಗಿ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಸ್ಥಳಾಂತರಕ್ಕೂ ಮುಂದಿನ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅಹಮದಾಬಾದ್​ ಮುನ್ಸಿಪಲ್ ಕಾರ್ಪೊರೇಷನ್(ಎಎಂಸಿ)​ ಅಧಿಕಾರಿಗಳು ತಿಳಿಸಿದ್ದಾರೆ.​
ಮಾಧ್ಯಮದವರೊಂದಿಗೆ ಮಾತನಾಡಿರುವ ಕೊಳಗೇರಿ ನಿವಾಸಿಯೊಬ್ಬರು, ಎಎಂಸಿ ಅಧಿಕಾರಿಗಳು ನಮ್ಮ ಬಳಿ ಬಂದು ಆದಷ್ಟು ಬೇಗ ಸ್ಥಳಾಂತರ ಮಾಡುವಂತೆ ನೋಟಿಸ್​ ನೀಡಿದರು. ಮೊಟೇರಾ ಕ್ರೀಡಾಂಗಣದ ಉದ್ಘಾಟನೆಗೆ ಟ್ರಂಪ್​ ಬರುತ್ತಿರುವ ಹಿನ್ನೆಲೆಯಲ್ಲಿ ಸ್ಥಳವನ್ನು ಖಾಲಿ ಮಾಡುವಂತೆ ಸೂಚಿಸಿದರು ಎಂದು ಆರೋಪಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
