ನವದೆಹಲಿ : ಮತ ಕೇಳಲು ಹೋಗುವ ರೀತಿಯಲ್ಲಿ ಜನರ ಮನೆಗಳಿಗೆ ತೆರಳಿ ಕರೊನಾ ಲಸಿಕೆ ಪಡೆಯಲು ಸ್ಲಾಟ್​ಗಳನ್ನು ಒದಗಿಸುವುದು. ನಂತರ ನಿಗದಿತ ಮತಗಟ್ಟೆಗಳಲ್ಲೇ ಲಸಿಕೆ ನೀಡುವುದು – ಇದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಹೊಸ ಯೋಜನೆ. ಇದಕ್ಕೆ ಅವರು ನೀಡಿರುವ ಹೆಸರು – ‘ಜಹಾ ವೋಟ್​, ವಹಾ ವ್ಯಾಕ್ಸಿನ್’ ಅರ್ಥಾತ್ ವೋಟ್​ ಎಲ್ಲೋ, ಅಲ್ಲೇ ವ್ಯಾಕ್ಸಿನ್!
ರಾಜಧಾನಿಯಲ್ಲಿ 45 ವರ್ಷ ಮೇಲ್ಪಟ್ಟವರಲ್ಲಿ ಎಷ್ಟೋ ಜನರು ಇನ್ನೂ ಲಸಿಕೆ ಪಡೆದಿಲ್ಲ. ಅಂಥ ಜನರಿಗೆ ಅನುಕೂಲವಾಗಲು ಮನೆಯ ಹತ್ತಿರವಿರುವ ಮತಗಟ್ಟೆಗಳಿಗೆ ಭೇಟಿ ನೀಡಿ ಲಸಿಕೆ ಪಡೆಯಲು ಪ್ರೇರೇಪಿಸಲಾಗುವುದು. ಲಸಿಕೆ ಸ್ಟಾಕ್​ ಲಭ್ಯವಿದ್ದಲ್ಲಿ ನಾಲ್ಕು ವಾರಗಳಲ್ಲಿ ಇಡೀ ದೆಹಲಿಯ 280 ವಾರ್ಡ್​ಗಳಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕಾಕರಣ ಪೂರೈಸಲಾಗುವುದು ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಇಂದಿನಿಂದ 70 ವಾರ್ಡ್​ಗಳಲ್ಲಿ ಬೂತ್​ ಮಟ್ಟದ ಅಧಿಕಾರಿಗಳ ತಂಡ ಮನೆಗಳಿಗೆ ಭೇಟಿ ನೀಡಿ ಲಸಿಕೆ ಪಡೆಯಲು ಮನವೊಲಿಸಲಿದೆ ಎಂದಿರುವ ಕೇಜ್ರಿವಾಲ್, ದೆಹಲಿಯಲ್ಲಿ 45 ವರ್ಷ ಮೇಲ್ಪಟ್ಟವರು 57 ಲಕ್ಷ ಜನರಿದ್ದಾರೆ. ಅವರಲ್ಲಿ ಈಗಾಗಲೇ 27 ಲಕ್ಷ ಜನ ಮೊದಲನೇ ಡೋಸ್​ ಪಡೆದಿದ್ದಾರೆ ಎಂದಿದ್ದಾರೆ.(ಏಜೆನ್ಸೀಸ್)
ಬ್ಯಾಕ್​ಪ್ಯಾಕಲ್ಲಿ ವಿದೇಶಕ್ಕೆ ಹ್ಯಾಶಿಶ್​ ಆಯಿಲ್ ಸಾಗಣೆ ! ಇಬ್ಬರ ಬಂಧನ

VIDEO| ಮನೆ ಬಾಗಿಲಿಗೆ ಹೋಗಿ ಕರೆದರೂ ಕರೊನಾ ವ್ಯಾಕ್ಸಿನ್​ ಪಡೆಯಲು ಸೋಲಿಗರು ಹಿಂದೇಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − three =
Remember me
