ನವದೆಹಲಿ:ಕರೊನಾ ಲಸಿಕೆಯ ತುರ್ತು ಬಳಕೆಗೆ ಶೀಘ್ರದಲ್ಲೇ ಅನುಮತಿ ಸಿಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ದೇಶಾದ್ಯಂತ ವ್ಯಾಕ್ಸಿನೇಷನ್ ಪ್ರಕ್ರಿಯಲ್ಲಿ ಯಾವುದೇ ಲೋಪವಾಗದಂತೆ ತಡೆಯಲು ಎರಡು ದಿನಗಳ ಕಾಲ ವ್ಯಾಕ್ಸಿನೇಷನ್​ನ ‘ಡ್ರೖೆ ರನ್’ ನಡೆಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಪಂಜಾಬ್, ಗುಜರಾತ್, ಅಸ್ಸಾಂ ಮತ್ತು ಆಂಧ್ರಪ್ರದೇಶಗಳಲ್ಲಿ ಡಿಸೆಂಬರ್ 28 ಮತ್ತು 29ರಂದು ಈ ಪ್ರಕ್ರಿಯೆ ನಡೆಯಲಿದೆ. ಪ್ರತಿ ರಾಜ್ಯದ 2 ಜಿಲ್ಲೆಗಳ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಭವನ, ಸಾರ್ವಜನಿಕ ಆರೋಗ್ಯ ಕೇಂದ್ರಗಳು, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ವ್ಯವಸ್ಥೆ ಮತ್ತು ಖಾಸಗಿ ಆಸ್ಪತ್ರೆಗಳ ಸೌಲಭ್ಯಗಳು ಈ ಪ್ರಕ್ರಿಯೆಯಲ್ಲಿ ಭಾಗಿಯಾಗಲಿವೆ.
ಲಸಿಕೆಗಳನ್ನು ಕೋಲ್ಡ್ ಸ್ಟೋರೇಜ್​ಗಳ ಮೂಲಕ ನಿಗದಿಪಡಿಸಲಾಗಿರುವ ಕೇಂದ್ರಗಳಿಗೆ ಸರಬರಾಜು ಮಾಡಿ, ಬಳಿಕ ಕೋವಿನ್ ಅಪ್ಲಿಕೇಷನ್​ನಲ್ಲಿ ನೋಂದಾಯಿಸಿಕೊಂಡಿರುವವರಿಗೆ ನಿಯಮಗಳ ಪ್ರಕಾರ ಲಸಿಕೆಯ ಡೋಸ್ ನೀಡುವವರೆಗಿನ ಸಂಪೂರ್ಣ ಪ್ರಕ್ರಿಯೆ ತಾಲೀಮಿನಲ್ಲಿ ನಡೆಯಲಿದೆ. ಈ ಮೂಲಕ ದೇಶಾದ್ಯಂತ ನಡೆಸಲಾಗುವ ಬೃಹತ್ ವ್ಯಾಕ್ಸಿನೇಷನ್ ಪ್ರಕ್ರಿಯೆಯಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ಪತ್ತೆ ಮಾಡಲಾಗುತ್ತದೆ. ಈ ಪ್ರಕ್ರಿಯೆಗಾಗಿ ವ್ಯಾಕ್ಸಿನೇಷನ್ ಪ್ರಕ್ರಿಯೆಯಲ್ಲಿ ಭಾಗಿಯಾಗುವ ವೈದ್ಯಕೀಯ ಅಧಿಕಾರಿಗಳು, ವ್ಯಾಕ್ಸಿನೇಟರ್​ಗಳು, ಕೋಲ್ಡ್ ಚೈನ್ ನಿರ್ವಾಹಕರು, ಮೇಲ್ವಿಚಾರಕರು, ಡೇಟಾ ವ್ಯವಸ್ಥಾಪಕರು ಮತ್ತು ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರು ಸೇರಿ 7 ಸಾವಿರ ಮಂದಿಗೆ 2,360 ತರಗತಿಗಳನ್ನು ನಡೆಸಿ ತರಬೇತಿ ನೀಡಲಾಗಿದೆ.
ಭಾರತ್ ಬಯೋಟೆಕ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಲಸಿಕೆ ಗಮನಾರ್ಹ ಸಾಧನೆ ಮಾಡಿದ್ದು, ಜಾಗತಿಕ ಮಟ್ಟದಲ್ಲಿ ಗಮನಸೆಳೆದಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ. ಲಸಿಕೆಯ ಈವರೆಗಿನ ಪ್ರಯೋಗಗಳ ದತ್ತಾಂಶವು ಪ್ರಭಾವಶಾಲಿ ಮತ್ತು ಸುರಕ್ಷಿತ ಎಂಬುದನ್ನು ತೋರಿಸಿದೆ ಎಂದು ಐಸಿಎಂಆರ್ ಟ್ವೀಟ್​ನಲ್ಲಿ ತಿಳಿಸಿದೆ. ದೇಶದ 22 ಕಡೆಗಳಲ್ಲಿ ಸದ್ಯ ಮೂರನೇ ಹಂತದ ಪ್ರಯೋಗ ನಡೆಯುತ್ತಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.
ಬ್ರಿಟನ್​ನಲ್ಲಿನ ರೂಪಾಂತರಿ ವೈರಸ್ ಪಸರಿಸುವಿಕೆ ಹೆಚ್ಚು ಆತಂಕ ಮೂಡಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯಗಳು ನವೆಂಬರ್ 25ರಿಂದ ಡಿಸೆಂಬರ್ 23ರನಡುವೆ ಬ್ರಿಟನ್​ನಿಂದ ಭಾರತದಕ್ಕೆ ಬಂದಿರುವ ಪ್ರಯಾಣಿಕರನ್ನು ಪತ್ತೆ ಮಾಡುತ್ತಿವೆ. ಈವರೆಗೆ ಸುಮಾರು 6 ಸಾವಿರ ಮಂದಿಯನ್ನು ಪತ್ತೆ ಮಾಡಲಾಗಿದ್ದು, ಅವರಲ್ಲಿ ರೋಗಲಕ್ಷಣ ಹೊಂದಿರುವ ಮತ್ತು ಶಂಕಿತರನ್ನು ಪ್ರತ್ಯೇಕವಾಗಿರಿಸಲಾಗಿದೆ. ತಮಿಳುನಾಡಿನಲ್ಲಿ 2,724, ಕೇರಳದಲ್ಲಿ 2,116, ಕರ್ನಾಟಕದಲ್ಲಿ 2,127, ತೆಲಂಗಾಣದಲ್ಲಿ 1,200 ಹಾಗೂ ಆಂಧ್ರಪ್ರದೇಶದಲ್ಲಿ 68 ಮಂದಿಯನ್ನು ಪತ್ತೆ ಮಾಡಲಾಗಿದೆ. ಇತ್ತೀಚೆಗೆ ಬಂದ ವಿಮಾನಗಳಲ್ಲಿನ ಎಲ್ಲ ಪ್ರಯಾಣಿಕರಲ್ಲಿ ಪಾಸಿಟಿವ್ ವರದಿ ಬಂದವರನ್ನು ಕ್ವಾರಂಟೈನ್ ಮಾಡಲಾಗಿದೆ. ಇವರಿಗೆ ರೂಪಾಂತರಿ ಕರೊನಾ ವೈರಸ್ ತಗುಲಿದೆಯೇ ಎಂದು ತಿಳಿಯಲು ಮಾದರಿಗಳನ್ನು ಉನ್ನತ ಪರೀಕ್ಷೆಗೆ ರವಾನಿಸಲಾಗಿದೆ.
ಫೈಜರ್, ಸ್ಪುಟ್ನಿಕ್, ಬಯೋಟೆಕ್ ಸೇರಿದಂತೆ ಕರೊನಾ ವಿರುದ್ಧ ಲಸಿಕೆ ತಯಾರಿಸುತ್ತಿರುವ ಹಲವು ಕಂಪನಿಗಳನ್ನು ಸೈಬರ್ ವಂಚಕರು ಗುರಿಯಾಗಿಸಿಕೊಂಡಿದ್ದು, ಲಸಿಕೆ ತಯಾರಿಕೆಯ ಮಾಹಿತಿ ಕದ್ದು, ನಕಲಿ ಲಸಿಕೆ ತಯಾರಿಸಲು ಯತ್ನಿಸುತ್ತಿದ್ದಾರೆ. ಜತೆಗೆ ಒಂದು ಕಂಪನಿಯ ಮಾಹಿತಿಯನ್ನು ಮತ್ತೊಂದು ಕಂಪನಿಗೆ ಮಾರುವ ಯೋಜನೆ ಹೊಂದಿದ್ದಾರೆ ಎನ್ನಲಾಗಿದೆ. ಕಳೆದ ಕೆಲ ತಿಂಗಳುಗಳಲ್ಲಿ ಭಾರತವೊಂದರಲ್ಲಿ ಲಸಿಕೆ ಅಭಿವೃದ್ಧಿ ಪಡಿಸುತ್ತಿರುವ ಕಂಪನಿಗಳ ಮೇಲೆ 80 ಲಕ್ಷಕ್ಕೂ ಅಧಿಕ ಬಾರಿ ಸೈಬರ್ ದಾಳಿ ಪ್ರಯತ್ನಗಳು ನಡೆದಿವೆ ಎಂದು ತಿಳಿದುಬಂದಿದೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 10 =
Remember me
