ಮುಂಬೈ: ಕೋವಿಡ್ ಲಸಿಕೆಗೆ ಸಂಬಂಧಿಸಿದ ಬೌದ್ಧಿಕ ಆಸ್ತಿ ಹಕ್ಕು ನಿಯಮವನ್ನು ಸಡಿಲಿಸಲು ಅಮೆರಿಕ ನಿರ್ಧರಿಸಿರುವುದರಿಂದ ಭಾರತದಂಥ ಅಭಿವೃದ್ಧಿಶೀಲ ದೇಶಗಳಿಗೆ ಪೇಟೆಂಟ್ ಆಗಿರುವ ವ್ಯಾಕ್ಸಿನ್ ಉತ್ಪಾದಿಸಲು ಸಹಾಯವಾಗಲಿದೆ.
ದೇಶದಲ್ಲಿ ಈಗ ಲಭ್ಯವಿಲ್ಲದ ವಿದೇಶಿ ಲಸಿಕೆ ಉತ್ಪಾದನೆಗೂ ಸಹಾಯವಾಗಲಿದೆ. ಒಟ್ಟಿನಲ್ಲಿ ಕೋವಿಡ್ ಸೋಂಕಿನ ವಿರುದ್ಧದ ಸಮರದಲ್ಲಿ ದೇಶಕ್ಕೆ ಈ ಮಹತ್ವದ ನಿರ್ಧಾರ ದೊಡ್ಡ ಮಟ್ಟದಲ್ಲಿ ಪ್ರಾಣ ವಾಯುವಾಗಿ ಹೊರಹೊಮ್ಮಲಿದೆ. ಆದರೆ, ಇದು ಸಾಕಾರವಾಗಲು ಭಾರತ ಹಲವು ತಿಂಗಳು ಕಾಯಬೇಕಾಗಬಹುದು. ಏಂದರೆ ಕಚ್ಚಾ ಸಾಮಗ್ರಿಗಳ ಕೊರತೆ, ಉತ್ಪಾದನಾ ವಲಯದಲ್ಲಿ ಮೂಲ ಸೌರ್ಕಯದ ಕೊರತೆಯನ್ನು ಭಾರತ ಮೊದಲು ನಿವಾರಣೆ ಮಾಡಿಕೊಂಡು, ವಿದೇಶಿ ಲಸಿಕೆಯ ಉತ್ಪಾದನೆಗೆ ತೊಡಗಬೇಕಾಗುತ್ತದೆ.
ಬ್ರಿಟನ್​ನ ಅಸ್ಟ್ರಾಜೆನಿಕಾ, ಅಮೆರಿಕದ ಜಾನ್ಸನ್ ಆಂಡ್ ಜಾನ್ಸನ್, ಫೈಜರ್, ಮಾಡರ್ನಾ ಮತ್ತು ನೊವಾವ್ಯಾಕ್ಸ್, ರಷ್ಯಾದ ಗಮಾಲೆಯಾ ಸೆಂಟರ್ ಹಾಗೂ ದೇಶೀಯ ಸಂಸ್ಥೆ ಭಾರತ್ ಬಯೋಟೆಕ್ ಇದರಲ್ಲಿ ಸೇರಿವೆ. ಲಸಿಕೆಗಳ ಸೂತ್ರಕ್ಕೆ ಸಂಬಂಧಿಸಿರುವ ರಕ್ಷಣಾ ಕ್ರಮಗಳನ್ನು ತಾತ್ಕಾಲಿಕವಾಗಿ ಸಡಿಲಿಸುವ ವಿಚಾರದಲ್ಲಿ ತಾನು ವಿಶ್ವ ವಾಣಿಜ್ಯ ಸಂಸ್ಥೆಯ (ಡಬ್ಲ್ಯುಟಿಒ) ಸಂಧಾನಗಳಲ್ಲಿ ಕೂಡ ಭಾಗವಹಿಸುವುದಾಗಿ ಅಮೆರಿಕ ಪ್ರಕಟಿಸಿರುವುದು ಮಹತ್ವದ ವಿದ್ಯಮಾನವಾಗಿದೆ.
1
ಭಾರತದ ಪ್ರಸ್ತಾವನೆ ಪ್ರಕಾರ ಲಸಿಕೆಯಂತೆ ಔಷಧಗಳು ಮತ್ತು ಇತರ ವೈದ್ಯಕೀಯ ಉಪಕರಣಗಳಿಗೆ ಕೂಡ ಐಪಿ ನಿರ್ಬಂಧ ಸಡಿಲಿಕೆ ಇರಬೇಕೆನ್ನುವುದು ಹಲವರ ಆಗ್ರಹ.
2
ಐಪಿ ಸಡಿಲಿಕೆ ಪ್ರಸ್ತಾವನೆಗೆ ಡಬ್ಲ್ಯುಟಿಒನಲ್ಲಿ ಅಮೆರಿಕ ಬೆಂಬಲ ನೀಡಿದರೆ ಕೋವಿಡ್ ಔಷಧಗಳ ಉತ್ಪಾದನೆಯಲ್ಲಿ ಪ್ರಗತಿ ಯಾಗಬಹುದು. ಲಸಿಕೆ ಉತ್ಪಾದನೆ ಆರಂಭಕ್ಕೆ ಇನ್ನಷ್ಟು ಸಮಯ ಬೇಕಾಗಬಹುದು.
3
ಲಸಿಕೆ ಮೇಲಿನ ಬೌದ್ಧಿಕ ಆಸ್ತಿ ಹಂಚಿಕೆಯ ಅಮೆರಿಕದ ನಿರ್ಧಾರದ ನಂತರ ಐರೋಪ್ಯ ಒಕ್ಕೂಟ ಮತ್ತು ನ್ಯೂಜಿಲೆಂಡ್​ಗಳು ಇದೇ ಹಾದಿಯಲ್ಲಿ ಚರ್ಚೆ ನಡೆಸುತ್ತಿವೆ.
ಸಂಶೋಧಕರಿಗೆ ಆತಂಕ
ಅಮೆರಿಕದ ನಿರ್ಧಾರದಿಂದಾಗಿ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ (ಐಪಿ) ಹಕ್ಕನ್ನು ಇತರರೊಂದಿಗೆ ಹಂಚಿಕೊಳ್ಳುವ ಒತ್ತಡಕ್ಕೆ ಸಂಶೋಧಕರು ಒಳಗಾಗಲಿದ್ದಾರೆ. ಇದರಿಂದಾಗಿ ಲೈಸೆನ್ಸ್ ಇಲ್ಲದ ವ್ಯಾಕ್ಸಿನ್ ಕಂಪನಿಗಳು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯವಾಗುತ್ತದೆ. ಐಪಿ ಅಡೆತಡೆ ನಿವಾರಣೆಯಾಗಿರುವುದರಿಂದ ಬಯೋಟೆಕ್ ಕಂಪನಿಗಳು ಮತ್ತು ಬಯೋಲಾಜಿಕ್ಸ್​ಗಳನ್ನು ತಯಾರಿಸುವವರು ಭಾರತದಲ್ಲಿ ಲಸಿಕೆ ಉತ್ಪಾದನೆ ಹೆಚ್ಚಿಸಲು ಸಹಾಯವಾಗುತ್ತದೆ. ಆಸ್ಟ್ರಾಜೆನಿಕಾ ಮತ್ತು ನೊವಾವ್ಯಾಕ್ಸ್ ತಮ್ಮ ಲಸಿಕೆಗಳ ಉತ್ಪಾದನೆಗೆ ಪುಣೆಯ ಭಾರತೀಯ ಸೆರಂ ಸಂಸ್ಥೆಗೆ (ಎಸ್​ಐಐ) ಲೈಸೆನ್ಸ್ ನೀಡಿವೆ. ಜಾನ್ಸನ್ ಆಂಡ್ ಜಾನ್ಸನ್ ಕಂಪನಿಯು ಬಯೋ ಇ ಜೊತೆ ಹಾಗೂ ರಷ್ಯನ್ ಡೈರೆಕ್ಟ್ ಇನ್​ವೆಸ್ಟ್​ಮೆಂಟ್ ಫಂಡ್ (ಆರ್​ಡಿಐಎಫ್) ಭಾರತ್ ಬಯೋಟೆಕ್ ಸಹಿತ ಭಾರತದ ಆರು ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − fourteen =
Remember me
