ನವದೆಹಲಿ:ರಷ್ಯಾ ಅಭಿವೃದ್ಧಿಪಡಿಸಿರುವ ಕರೊನಾ ವೈರಸ್​ ನಿಗ್ರಹ ಲಸಿಕೆಯನ್ನು ಭಾರತದಲ್ಲೂ ಪರಿಗಣಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಖಚಿತ ಪಡಿಸಿದೆ. ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಹಾಗೂ ಕೋವಿಡ್​ ಲಸಿಕೆ ಕುರಿತ ಕಾರ್ಯಪಡೆ ಮುಖ್ಯಸ್ಥರು ಆಗಿರುವ ಡಾ. ವಿ.ಕೆ. ಪೌಲ್​ ಈ ವಿಷಯ ಸ್ಪಷ್ಟಪಡಿಸಿದ್ದಾರೆ.
ರಷ್ಯಾ ಉತ್ಪಾದಿಸಿರುವ ಸ್ಪುಟ್ನಿಕ್​-ವಿ ಲಸಿಕೆಯನ್ನು ಭಾರತದಲ್ಲಿ ಪರಿಗಣಿಸಲಾಗುತ್ತದೆ. ಈ ನಿಟ್ಟಿನಲ್ಲಿ ರಷ್ಯಾ ಸರ್ಕಾರವು ಭಾರತವನ್ನು ಸಂಪರ್ಕಿಸಿದೆ ಎಂದು ಪೌಲ್​ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ;ಕರೊನಾ ಮರು ಸೋಂಕು; ತಿಂಗಳ ಬಳಿಕ ಮತ್ತೆ ಕೋವಿಡ್​; ಬೆಂಗಳೂರಿನಲ್ಲಿ ಪತ್ತೆಯಾಯ್ತು ಮೊದಲ ಪ್ರಕರಣ…!
ಮುಖ್ಯವಾಗಿ ಎರಡು ವಿಷಯಗಳಿಗೆ ಸಂಬಂಧಿಸಿದಂತೆ ಭಾತದ ನೆರವು ಕೋರಿದೆ. ನಮ್ಮಲ್ಲಿರುವ ಔಷಧ ಕಂಪನಿಗಳ ಮೂಲಕ ಲಸಿಕೆ ಉತ್ಪಾದನೆ ಮಾಡುವುದು ಹಾಗೂ ಭಾರತದಲ್ಲಿ ಈ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್​ ಟ್ರಯಲ್​ಗೆ ( ಮಾನವರ ಮೇಲೆ ಪ್ರಯೋಗ) ಅವಕಾಶ ಕೋರಿದೆ ಎಂದು ಪೌಲ್​ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಈ ಕೋರಿಕೆಯನ್ನು ಅತ್ಯಂತ ಮಹತ್ವದ್ದೆಂದು ಪರಿಗಣಿಸಿದೆ. ರಷ್ಯಾವನ್ನು ಭಾರತ ಅತ್ಯಂತ ವಿಶೇಷ ಸ್ನೇಹಪೂರ್ವಕ ರಾಷ್ಟ್ರವೆಂದು ಪರಿಗಣಿಸುತ್ತದೆ. ಎರಡೂ ಕಡೆಯಿಂದಲೂ ಈ ನಿಟ್ಟಿನಲ್ಲಿ ಮಹತ್ವದ ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದ್ದಾರೆ.ಮೂರನೇ ಹಂತದ ಪ್ರಯೋಗ ನಡೆಯುತ್ತಿರುವ ಹೊರತಾಗಿಯೂ ರಷ್ಯಾ ತನ್ನ ಪ್ರಜೆಗಳಿಗೆ ಸಾರ್ವತ್ರಿಕವಾಗಿ ಈ ಲಸಿಕೆಯನ್ನು ನೀಡಲು ಸಜ್ಜಾಗಿದೆ. ಇದೇ ವಾರ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಿದೆ.
ಇದನ್ನೂ ಓದಿ;ಇದೇ ವಾರ ಸಾರ್ವತ್ರಿಕ ಬಳಕೆಗೆ ಸಿಗಲಿದೆ ರಷ್ಯಾ ಲಸಿಕೆ; ಸ್ಪುಟ್ನಿಕ್​-ವಿಗೆ ಸಿಕ್ತು ಆರೋಗ್ಯ ಇಲಾಖೆ ಸಮ್ಮತಿ
ಹೈದರಾಬಾದ್​ನ ಕೋವಾಕ್ಸಿನ್​, ಝೈಡಸ್​ ಕ್ಯಾಡಿಲಾದ ಲಸಿಕೆ, ಪುಣೆಯ ಕೋವಿಶೀಲ್ಡ್​ ಸೇರಿ ಭಾರತದಲ್ಲಿ ವರ್ಷಾಂತ್ಯಕ್ಕೆ ನಾಲ್ಕು ಲಸಿಕೆಗಳು ಸಿಗೋದು ಪಕ್ಕಾ ಅದಂತಾಗಲಿದೆ.
ಎದೆಹಾಲಿಗೆ ಮುಗಿಬಿದ್ದ ಪುರುಷರು; ತೂಕ ಇಳಿಕೆ, ಶಕ್ತಿ ವರ್ಧನೆ ಕಾರಣ..! ತಜ್ಞರು ಹೇಳೋದೇನು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × 1 =
Remember me
