ನವದೆಹಲಿ:ಜಾಗತಿಕವಾಗಿ ಜನರನ್ನು ಹಿಂಡಿಹಿಪ್ಪೆ ಮಾಡುತ್ತಿರುವ ಹಾಗೂ ವಾಣಿಜ್ಯ, ಆರ್ಥಿಕ ಚಟುವಟಿಕೆಯನ್ನು ನಿಶ್ಶಬ್ದಗೊಳಿಸಿರುವ ಕೋವಿಡ್-19 ಸೋಂಕಿಗೆ ಔಷಧ ಅಭಿವೃದ್ಧಿ ಪಡಿಸುವ ಸಂಶೋಧನಾ ಕಾರ್ಯ ವಿವಿಧ ದೇಶಗಳ ಸರ್ಕಾರಿ ಮತ್ತು ಖಾಸಗಿಯ ನೂರಾರು ಪ್ರಯೋಗಾಲಯಗಳಲ್ಲಿ ಅವಿರತವಾಗಿ ನಡೆಯುತ್ತಿದೆ. ಕೋಟ್ಯಂತರ ರೂಪಾಯಿಗಳು ಈ ಸಂಶೋಧನಾ ಕಾರ್ಯಕ್ಕೆ ವ್ಯಯವಾಗುತ್ತಿದೆ. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಅವರ ಪತ್ನಿ ಮಿಲಿಂದಾ ಸ್ಥಾಪಿಸಿರುವ ಪ್ರತಿಷ್ಠಾನ ಸೇರಿದಂತೆ ಅನೇಕರು ಈ ಕೋವಿಡ್-19 ಲಸಿಕೆ ಅಭಿವೃದ್ಧಿಗೆ ಉದಾತ್ತವಾಗಿ ಧನಸಹಾಯ ಮಾಡಿದ್ದಾರೆ. ಬಹುತೇಕ ದೇಶಗಳಲ್ಲಿ ಮಾನವರ ಮೇಲೆ ಪ್ರಯೋಗಿಸುವ ಕ್ಲಿನಿಕಲ್ ಪರೀಕ್ಷೆ ವೇಗವಾಗಿ ಸಾಗಿದೆ. ಈ ಕ್ಲಿನಿಕಲ್ ಟ್ರಯಲ್ ಯಶಸ್ಸಿನ ಆಧಾರದ ಮೇಲೆ ಲಸಿಕೆಯ ಬಳಕೆಗೆ ಮಾನ್ಯತೆ ದೊರೆಯಲಿದೆ. ಈ ಕಾರ್ಯ ಪೂರ್ಣಗೊಳ್ಳಲು ಕನಿಷ್ಠವೆಂದರೂ ನಾಲ್ಕೈದು ತಿಂಗಳಾದರೂ ಬೇಕಾಗಬಹುದು. ಅಮೆರಿಕ, ಬ್ರಿಟನ್, ಚೀನಾ, ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯಾ, ಇಟಲಿ, ಇಸ್ರೇಲ್, ಭಾರತದ ಹಲವಾರು ಪ್ರಯೋಗಾಲಯಗಳು ಅಥವಾ ಔಷಧ ತಯಾರಿಕಾ ಸಂಸ್ಥೆಗಳು ಕ್ಲಿನಿಕಲ್ ಪರೀಕ್ಷೆ ನಡೆಸುತ್ತಿವೆ. ಅನೇಕ ಬಹುರಾಷ್ಟ್ರೀಯ ಸಂಸ್ಥೆಗಳೂ ಈ ಪ್ರಯತ್ನದಲ್ಲಿದ್ದು, ಪರೀಕ್ಷೆ ಯಶಸ್ವಿಯಾಗಿ ನಿರೀಕ್ಷಿಸುತ್ತಿವೆ. ಜತೆಗೆ ವಿವಿಧ ದೇಶಗಳ ಘಟಕಗಳಲ್ಲಿ ಲಸಿಕೆ ಉತ್ಪಾದನೆಗೆ ದೊಡ್ಡ ಯೋಜನೆಯನ್ನೂ ಸಿದ್ಧಪಡಿಸಿಕೊಂಡಿವೆ.
ಅಮೆರಿಕದ ಪೆನ್​ಸಲ್ವೇನಿಯಾದ ಬಯೋಟೆಕ್ ಸಂಸ್ಥೆಯೊಂದು ಅಭಿವೃದ್ಧಿ ಪಡಿಸಿರುವ ‘ಇನೋವಿಯೊ’ ಲಸಿಕೆಯ ಪ್ರಯೋಗಕ್ಕೆ ಒಳಗಾಗುವ 40 ಜನರ ಗುಂಪಿನ ಮೇಲೆ ಪರೀಕ್ಷೆ ನಡೆಸಿದೆ. ಮೆಸಾಚುಸೆಟಸ್​ನ ಬಯೋಟೆಕ್ ಸಂಸ್ಥೆಯೊಂದು ಮಾನವರ ಮೇಲಿನ ಪರೀಕ್ಷೆಯ ಮೊದಲ ಹಂತವನ್ನು ಪೂರೈಸಿದೆ. ಕನ್ಸಾಸ್ ನಗರದ ವೈದ್ಯರು ಹೈಡ್ರೋಕ್ಲೋರೊಕ್ವೀನ್ (ಎಚ್​ಸಿ) ಮತ್ತು ಅಜಿತ್ರೋಮೈಸಿನ್ (ಎಝುಡ್)ಸಂಯುಕ್ತವನ್ನು ಕೋವಿಡ್-19 ರೋಗ ಗುಣಪಡಿಸಲು ಪರೀಕ್ಷಾರ್ಥವಾಗಿ ಬಳಸಿದ್ದಾರೆ.
ಇಸ್ರೇಲ್​ನ ಜೈವಿಕ ಸಂಶೋಧನಾ ಸಂಸ್ಥೆಯು (ಐಐಬಿಆರ್) ಏಕಕ್ಲೋನೀಯ ಪ್ರತಿಕಾಯಗಳ ಅಭಿವೃದ್ಧಿ ಕಾರ್ಯ ಸಾಗಿದೆ. ಈ ಔಷಧವು ರೋಗಿಯ ದೇಹ ಪ್ರವೇಶಿಸಿದೊಡನೆ ರೋಗಕಾರಕ ಅಂಶವನ್ನು ಹುಡುಕಿ ಅದರ ವಿರುದ್ಧ ಹೋರಾಡುತ್ತದೆ. ಮಾನವರ ಮೇಲೆ ಪರೀಕ್ಷಾರ್ಥ ಪ್ರಯೋಗವು ಯಶಸ್ವಿಯ ಹಾದಿಯಲ್ಲಿದ್ದು, ಪೇಟೆಂಟ್ ಪಡೆದುಕೊಳ್ಳಲು ಐಐಬಿಆರ್ ಈಗಾಗಲೇ ಸಿದ್ಧತೆ ನಡೆಸಿದೆ.
ಬ್ರಿಟನ್ ಆಕ್ಸ್​ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿ ಪಡಿಸಿರುವ ಲಸಿಕೆ ಕ್ಲಿನಿಕಲ್ ಟ್ರಯಲ್ ಹಂತದಲ್ಲಿದೆ. ಈವರೆಗೆ 320 ಜನರ ಮೇಲೆ ಪ್ರಯೋಗಿಸಲಾಗಿದ್ದು, ಸುರಕ್ಷಿತವಾಗಿದೆ. ಈ ಲಸಿಕೆಯ ಅಡ್ಡಪರಿಣಾಮದ ಬಗ್ಗೆ ಅಧ್ಯಯನ ನಡೆಯುತ್ತಿದೆ. ವೈರಸ್​ಗಳಲ್ಲಿ ಉಪಶಮನಕಾರಿ ಮತ್ತು ಹಾನಿಕಾರವೆಂಬ ಎರಡು ವರ್ಗಗಳಿರುತ್ತವೆ. ಹಾನಿಕಾರಕ ವೈರಸ್​ಗಳನ್ನು ಪ್ರತಿರೋಧಿಸಲು ಉಪಶಮನಕಾರಿ ಅಂಶವಿರುವ ಗುಣಾತ್ಮಕ ವೈರಸ್​ಗಳನ್ನು ಬಳಸಲಾಗುತ್ತದೆ. ಚಿಂಪಾಂಜಿಗಳಲ್ಲಿ ಶೀತ ಜ್ವರನ್ನು ಶಮನ ಮಾಡಿದ ಉಪಶಮನಕಾರಿ ವೈರಸ್ ಅನ್ನು ಆಕ್ಸ್​ಫರ್ಡ್ ವಿವಿ ಸಂಶೋಧಕರು ಕುಲಾಂತರಿಸಿ ಕೋವಿಡ್-19ಗೆ ಲಸಿಕೆಯನ್ನಾಗಿ ಅಭಿವೃದ್ಧಿ ಪಡಿಸಿದ್ದಾರೆ.
ಇದನ್ನೂ ಓದಿ:ಈ ಬಾರಿ ಸಂಸತ್ತಿನ ಮಳೆಗಾಲದ ಅಧಿವೇಶನ ನಡೆಯುವುದೇ?
ಬೀಜಿಂಗ್ ಮೂಲದ ಸಿನೋವಾಕ್ ಬಯೋಟೆಕ್ ಕಂಪನಿ, ವುಹಾನ್ ಜೈವಿಕ ಉತ್ಪನ್ನಗಳ ಸಂಸ್ಥೆ (ಡಬ್ಲೂ್ಯಐಬಿಪಿ) ಕರೊನಾಗೆ ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿವೆ. ಚೀನಾ ಮಿಲಿಟರಿ ವೈದ್ಯಕೀಯ ವಿಜ್ಞಾನಗಳ ಅಕಾಡೆಮಿ ಮತ್ತು ಹಾಂಕಾಂಗ್​ನಲ್ಲಿ ಜೈವಿಕ ತಂತ್ರಜ್ಞಾನ ಸಂಸ್ಥೆ ಕ್ಯಾನ್​ಸಿನೊ ಬಯೋ ಅಭಿವೃದ್ಧಿಪಡಿಸಿದ ಕರೊನಾ ವೈರಸ್ ಲಸಿಕೆಗಳ ಕ್ಲಿನಿಕಲ್ ಪರೀಕ್ಷೆಗೆ ಮಾರ್ಚ್​ನಲ್ಲಿ ಆರಂಭವಾಗಿದೆ. ಹಾಂಕಾಂಗ್ ವಿವಿ ಸಂಶೋಧಕರು ಕರೊನಾ ಸೋಂಕಿಗೆ ಮೂರು ಔಷಧ ಸಂಯುಕ್ತವನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ಔಷಧ ಸಂಯುಕ್ತವು ರೋಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ದಿನವನ್ನು ತಗ್ಗಿಸಿದೆ. ಹಾಂಕಾಂಗ್​ನ ಆರು ಸಾರ್ವಜನಿಕ ಆಸ್ಪತ್ರೆಯ 127 ರೋಗಿಗಳು ಈ ಪರೀಕ್ಷೆಗೆ ಒಳಗಾಗಿದ್ದಾರೆ. ವೈರಾಣು ಪ್ರತಿಬಂಧಕ ಪ್ರೋಟೀನ್ ಉತ್ಪಾದಿಸುವಂತಹ ಬೀಟಾ- 1ಬಿ, ವೈರಾಣು ತಡೆಯುವ ಲೋಪಿನಾವಿರ್-ರಿಟನೊವಿರ್, ರಿಬಾ ವಿರನ್ ಈ ಔಷಧ ಸಂಯುಕ್ತಗಳಾಗಿವೆ.
ಕೋವಿಡ್-19ಗೆ ನಿಖರವಾದ ಔಷಧ ಇನ್ನೂ ಸಿದ್ಧವಾಗಿಲ್ಲ. ಆದರೆ, ಮಲೇರಿಯಾಗೆ ಬಳಸುವ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಯನ್ನು ಸದ್ಯ ಬಳಸಲಾಗುತ್ತಿದೆ. ಹೀಗಾಗಿ ಭಾರತದಲ್ಲಿ ಉತ್ಪಾದಿಸಲಾಗುತ್ತಿರುವ ಈ ಮಾತ್ರೆಗೆ ಜಾಗತಿಕ ಬೇಡಿಕೆ ಬಂದಿದೆ. ಭಾರತ ಕೂಡ ಅಮೆರಿಕ ಸೇರಿ ಹಲವು ರಾಷ್ಟ್ರಗಳಿಗೆ ಹೈಡ್ರಾಕ್ಸಿಕ್ಲೋರೊಕ್ವಿನ್ ರಫ್ತು ಮಾಡಿದೆ. ರೋಗ ನಿರೋಧಕ ಶಕ್ತಿ ವೃದ್ಧಿಸುವಂತಹ ಗುಣವನ್ನು ಹೆಚ್ಚಿಸಿ ಸೋಂಕಿಗೆ ಪ್ರತಿಬಂಧಕವಾಗುವಂತಹ ಅಂಶವಿರುವ ಆಯುರ್ವೆದ ಮೂಲಿಕೆ ಅಶ್ವಗಂಧದ ಪರೀಕ್ಷೆಯನ್ನು ನಡೆಸಲು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಒಪ್ಪಿಗೆ ನೀಡಿದೆ. ಭಾರತದಲ್ಲಿ ಪ್ಲಾಸ್ಮಾ ಥೆರಪಿ ಕೂಡ ಪರೀಕ್ಷಾ ಹಂತದಲ್ಲಿ ಇದೆ. ಕೋವಿಡ್-19ನಿಂದ ಗುಣಮುಖನಾದ ರೋಗಿ ರಕ್ತದ ಪ್ಲಾಸ್ಮಾ ಪಡೆದು ಅದನ್ನು ಸೋಂಕಿತ ರೋಗಿಯ ಮೇಲೆ ಪರೀಕ್ಷಿಸು ವುದು ಈ ಥೆರಪಿಯ ವಿಧಾನ. ಇದಲ್ಲದೆ ಅನೇಕ ಖಾಸಗಿ ಪ್ರಯೋಗಾ ಲಯಗಳು ಐಸಿಎಂಆರ್ ಜತೆಗೆ ಔಷಧ ಅಭಿವೃದ್ಧಿಯಲ್ಲಿ ತೊಡಗಿವೆ.
ಇದನ್ನೂ ಓದಿ:ಇನ್ಮೇಲೆ ವಿಮಾನ ಪ್ರಯಾಣಿಕರು ಯಾವ್ಯಾವ ನಿಯಮ ಪಾಲಿಸಬೇಕು? ಕೇಂದ್ರದಿಂದ ಹೊಸ ಮಾರ್ಗಸೂಚಿ
ಇಟಲಿಯ ಲಾಜಾರೊ ಸ್ಪಲ್ಲಾಂಜಾನಿ ನ್ಯಾಷನಲ್ ಸಾಂಕ್ರಾಮಿಕ ರೋಗ ಇನ್​ಸ್ಟಿಟ್ಯೂಟ್ ಅಭಿವೃದ್ಧಿ ಪಡಿಸಿರುವ ಲಸಿಕೆಯನ್ನು ಇಲಿಗಳ ಮೇಲೆ ಪ್ರಯೋಗಿಸಿದ್ದು, ಹೆಚ್ಚಿನ ಪ್ರತಿಕಾಯ ಉತ್ಪಾದನೆಯಾಗಿದೆ. ಹೀಗಾಗಿ ಈ ಲಸಿಕೆಗಳು ಮಾನವನ ಮೇಲೆ ಪರೀಕ್ಷಾರ್ಥ ಪ್ರಯೋಗಕ್ಕೆ ಸೂಕ್ತವಾಗಿದೆ. ಬೇಸಿಗೆಯ ನಂತರ ಇದನ್ನು ಆರಂಭಿಸಲಾಗುವುದು ಎಂದು ಸಂಶೋಧಕರು ಹೇಳಿದ್ದಾರೆ. ್ಝಸ್ಟ್ರೇಲಿಯಾದ ಕ್ವೀನ್ಸ್​ಲ್ಯಾಂಡ್ ವಿಶ್ವವಿದ್ಯಾಲಯದ ಸಂಶೋಧಕರು ಸುಮಾರು 10 ಸಾವಿರಕ್ಕೂ ಹೆಚ್ಚು ಸಂಯುಕ್ತಗಳಿಂದ ಆರು ಔಷಧಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ್ಝರ್ಮನಿಯ ಬಯೋಎನ್​ಟೆಕ್ ಸೆ ಮತ್ತು ಅಮೆರಿಕದ ಫಿಜರ್ ಕಂಪನಿಯು ಬಿಎನ್​ಟಿ 162 ಹೆಸರಿನ ಔಷಧವನ್ನು ಅಭಿವೃದ್ಧಿ ಪಡಿಸಿ ಏಪ್ರಿಲ್ ಮೂರನೇ ವಾರದಿಂದ ಮಾನವರ ಮೇಲಿನ ಪರೀಕ್ಷೆಯನ್ನು ಆರಂಭಿಸಿವೆ. ್ಝ್ರಾನ್ಸ್​ನ ಪಾಶ್ಚರ್ ವೈರಾಲಜಿ ಸಂಸ್ಥೆಯು ದಡಾರಕ್ಕೆ ಬಳಸುವ ಔಷಧವನ್ನು ಸುಧಾರಿಸಿ ಕೋವಿಡ್-19ಗೆ ಅಭಿವೃದ್ಧಿ ಪಡಿಸಿದೆ. ಈ ಔಷಧವು ಪ್ರತಿಕಾಯಗಳ ಸಂಖ್ಯೆ ಹೆಚ್ಚಿಸಿ ಕರೊನಾ ಸೋಂಕಿನ ವಿರುದ್ಧ ಹೋರಾಡುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ.
80 ವರ್ಷ ಮೇಲ್ಪಟ್ಟವರು ವಿಮಾನದಲ್ಲಿ ಸಂಚರಿಸುವಂತಿಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 15 =
Remember me
