ವಡೋದರಾ:ಈಗಿನ ಮಕ್ಕಳು ಹೈ ಸ್ಕೂಲ್ ಮೆಟ್ಟಿಲು ಹತ್ತಿದಾಕ್ಷಣ ಬೈಕ್ ಅಥವಾ ಸ್ಕೂಟರ್ ಬೇಕು ಎಂದು ಹಠ ಹಿಡಿದು ಬಿಡುತ್ತಾರೆ. ಅದೇ ರೀತಿ ಹಠ ಹಿಡಿದ ತಮ್ಮನ ಸಮಾಧಾನ ಮಾಡಲೆಂದು ಅಣ್ಣ ಮಾಡಿದ ಕೆಲಸ ಇದೀಗ ಪೂರ್ತಿ ದೇಶದಲ್ಲೇ ಸುದ್ದಿಯಾಗುವಂತಾಗಿದೆ.
ಗುಜರಾತ್​ನ ವಡೋದರ ಮೂಲಕ ವಿವೇಕ್ (25)ನ ತಮ್ಮ ಎಸ್​ಎಸ್​ಎಲ್​ಸಿ ಓದುತ್ತಿದ್ದನಂತೆ. ಲಾಕ್​ಡೌನ್ ಸಮಯದಲ್ಲಿ ಕೆಲಸವೂ ಸಿಗದೆ ವಿವೇಕ್ ಮನೆಯಲ್ಲೇ ಕುಳತಿದ್ದ. ಆ ವೇಳೆ ಆತನ ತಮ್ಮ ಟ್ಯೂಷನ್​ಗೆ ಹೋಗಿ ಬರಲು ಸ್ಕೂಟರ್ ಬೇಕೆಂದು ಹಠ ಹಿಡಿದನಂತೆ. ಆದರೆ ಆತನಿಗೆ 18 ವರ್ಷ ವಯಸ್ಸಾಗಿರಲಿಲ್ಲವಾದ್ದರಿಂದ ಸ್ಕೂಟರ್ ಕೊಡಿಸಲು ಕುಟುಂಬ ಹಿಂದೇಟು ಹಾಕಿದೆ. ಆಗ ತಮ್ಮ ಬೇಸರಗೊಂಡಿದ್ದನ್ನು ಕಂಡು ತಾನೂ ಬೇಸರಗೊಂಡ ವಿವೇಕ್​ ಹೊಸ ಪ್ಲಾನ್ ಒಂದನ್ನು ಮಾಡಿದ್ದಾನೆ.
ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ಓದಿದ್ದ ವಿವೇಕ್ ತಾನು ಕೊನೆಯ ವರ್ಷದ ಇಂಜಿನಿಯರಿಂಗ್ ಅಭ್ಯಾಸ ಮಾಡುವಾಗ ಎಲೆಕ್ಟ್ರಿಕ್ ಸ್ಕೂಟರ್ ಪ್ರಾಜೆಕ್ಟ್ ಮಾಡಿದ್ದನಂತೆ. ಅದೇ ಟೆಕ್ನಾಲಜಿಯನ್ನು ಮನೆಯಲ್ಲಿ ಮೂಲೆ ಸೇರಿದ್ದ ಸೈಕಲ್​ಗೆ ಅಳವಡಿಸಲು ಮುಂದಾಗಿದ್ದಾನೆ. ಸತತ ಪ್ರಯತ್ನ ಮಾಡಿ ತಮ್ಮನ ಮಾಮೂಲಿ ಸೈಕಲ್​ ಅನ್ನು ಎಲೆಕ್ಟ್ರಿಕ್ ಸೈಕಲ್ ಆಗಿ ಪರಿವರ್ತಿಸಿದ್ದಾನೆ. ಆ ವಿಶೇಷ ಸೈಕಲ್​ ಅನ್ನು ತಮ್ಮ ಖುಷಿಯಿಂದ ಟ್ಯೂಷನ್​ಗೆ ತೆಗೆದುಕೊಂಡು ಹೋಗುತ್ತಿದ್ದನಂತೆ. ಅದನ್ನು ಗಮನಿಸಿದ ಆತನ ಅನೇಕ ಸ್ನೇಹಿತರೂ ಕೂಡ ವಿವೇಕ್​ ಬಳಿ ಸೈಕಲ್​ಗೆ ಆರ್ಡರ್ ಕೊಟ್ಟು ಮಾಡಿಸಿಕೊಂಡಿದ್ದಾರಂತೆ.
ಬೇಡಿಕೆ ಹೆಚ್ಚಾದ ನಂತರ ವಿವೇಕ್ ತನ್ನ ಸೈಕಲ್​ಗೆ ODO bikes ಎನ್ನುವ ಹೆಸರಿಟ್ಟಿದ್ದಾನೆ. ದುಬೈನಲ್ಲಿ ಆತನ ಸೈಕಲ್​ ಡೆಮೋ ಕೂಡ ಕೊಡಲಾಗಿದೆಯಂತೆ. ಇದೀಗ ಆನ್​ಲೈನ್​ ಆ್ಯಪ್​ಗಳಾದ ಅಮೇಜಾನ್, ಫ್ಲಿಪ್​ಕಾರ್ಟ್ಗಳಲ್ಲೂ ಈ ಸೈಕಲ್ ಲಭ್ಯವಿದೆ. (ಏಜೆನ್ಸೀಸ್)
2 ತಿಂಗಳ ಹಸುಗೂಸನ್ನು ಸೆಕ್ಯೂರಿಟಿಗಾರ್ಡ್ ಮನೆ ಮುಂದಿಟ್ಟು ಪರಾರಿ!

ಬಾಲಿವುಡ್ ನಟಿ ತಾಪ್ಸಿ ಪನ್ನು ಬಾಯ್​ಫ್ರೆಂಡ್​ಗೆ ಇಂದು ಜನ್ಮದಿನದ ಸಂಭ್ರಮ; ಹೇಗಿತ್ತು ಬರ್ತ್​ಡೇ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:sixteen − 10 =
Remember me
