ಶ್ರೀನಗರ:ಜಮ್ಮುಮತ್ತು ಕಾಶ್ಮೀರದ ರೇಸಿ ಜಿಲ್ಲೆಯ ತ್ರಿಕೂಟ ಬೆಟ್ಟದಲ್ಲಿರುವ ಮಾತಾ ವೈಷ್ಣೋದೇವಿ ಭಕ್ತರಿಗೆ ಒಂದು ಸಿಹಿ ಸುದ್ದಿ. ಶೀಘ್ರವೇ ಭಕ್ತರು ಮೊಬೈಲ್ ಆ್ಯಪ್ ಮೂಲಕ ದೇವಿಯ ನೇರ ದರ್ಶನವನ್ನು ಪಡೆಯಬಹುದು. ಇದಕ್ಕಾಗಿ “ಹವನ” ಎಂಬ ಹೆಸರಿನ ಆ್ಯಪ್ ಸಿದ್ಧವಾಗುತ್ತಿದ್ದು, ಅಕ್ಟೋಬರ್ 17ರಂದು ನವರಾತ್ರಿಯ ಮೊದಲ ದಿನ ಲೋಕಾರ್ಪಣೆಗೊಳ್ಳಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಕರೊನಾ ವೈರಸ್ ಸೋಂಕು ಕಾರಣ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರುವುದನ್ನು ತಪ್ಪಿಸಲಾಗುತ್ತಿದೆ. ಹೀಗಿದ್ದಾಗ್ಯು, ಮನೆಯಿಂದಲೇ ಭಕ್ತರು ದರ್ಶನಪಡೆಯಲು ಅನುಕೂಲವಾಗುವಂತೆ ಈ ಆ್ಯಪನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಏತನ್ಮಧ್ಯೆ, ಮಾತಾ ವೈಷ್ಣೋದೇವಿಯ ಪೂಜಾ ಪ್ರಸಾದವನ್ನು ಮನೆ ಬಾಗಿಲಿಗೇ ತಲುಪಿಸುವ ವ್ಯವಸ್ಥೆಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಸೋಮವಾರ ಚಾಲನೆ ನೀಡಿದ್ದಾರೆ.
ಇದನ್ನೂ ಓದಿ:Web Exclusive: ಶುಶ್ರೂಷಾಧಿಕಾರಿಗಳ ಕೂಗು ಕೇಳುತ್ತಿಲ್ಲ: ಸರ್ಕಾರ ವಿರುದ್ಧ ನರ್ಸ್​ಗಳ ಸಮರ
ಸದ್ಯ ದೇವಿಯ ಆರತಿ ಪೂಜೆಯನ್ನು ಧಾರ್ಮಿಕ ಚಾನೆಲ್​ನಲ್ಲಿ ನೇರ ಪ್ರಸಾರದ ಮೂಲಕ ಪ್ರಸಾರ ಮಾಡಲಾಗುತ್ತಿದೆ. ಆದಾಗ್ಯೂ, ಮೊಬೈಲ್ ಆ್ಯಪ್ ಇದ್ದರೆ ಅದರ ಮೂಲಕ ಭಕ್ತರ ಕೈಗಳಲ್ಲೇ ದೇವಿಯ ದರ್ಶನವಾಗುತ್ತದೆ ಎಂಬ ಕಾರಣಕ್ಕೆ ಅದನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. (ಏಜೆನ್ಸೀಸ್)
ರೇಖಾ ಚಿತ್ರ ಸಿದ್ದಪಡಿಸಿ ಬಾಂಬ್ ತಂದಿಟ್ಟವನೇ ಉಗ್ರ ಶೋಯೆಬ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 3 =
Remember me
