ನವದೆಹಲಿ:ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಸರ್ಕಾರ ವೈಷ್ಣೋದೇವಿ ಸೇರಿ ಎಲ್ಲ ಧಾರ್ಮಿಕ ಕ್ಷೇತ್ರಗಳನ್ನು ತೆರೆಯಲು ಮಾರ್ಗಸೂಚಿಗಳನ್ನು ಹೊರಡಿಸಿದೆ.ತ್ರಿಕೂಟ ಪರ್ವತದ ಕಾಟ್ರಾದಲ್ಲಿರುವ ಶ್ರೀಮಾತಾ ವೈಷ್ಣೋದೇವಿ ದೇಗುಲಕ್ಕೆ ಆಗಸ್ಟ್​ 16ರಿಂದ ಭೇಟಿ ನೀಡಬಹುದು. ಪ್ರತಿದಿನ ಐದು ಸಾವಿರ ಜನರು ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಸೆಪ್ಟೆಂಬರ್​ 30ರವರೆಗೂ ಈ ನಿರ್ಬಂಧ ಇರಲಿದೆ.
ದೇಗುಲಕ್ಕೆ ಭೇಟಿ ನೀಡುವ ಎಲ್ಲ ಭಕ್ತರು ತಮ್ಮ ಬಳಿಯಿರುವ ಸ್ಮಾರ್ಟ್​ಫೋನ್​ನಲ್ಲಿ ಕೋವಿಡ್​ ಮುಂಜಾಗ್ರತೆ ವಹಿಸಲು ಆರೋಗ್ಯಸೇತು ಆ್ಯಪ್​ ಇನ್​ಸ್ಟಾಲ್​ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
ಇದನ್ನೂ ಓದಿ;88 ಸಾವಿರಕ್ಕೂ ಅಧಿಕ ಬಿಎಸ್ಸೆನೆಲ್​ ನೌಕರರು ಮನೆಗೆ ಹೋಗ್ತಾರೆ; ಸಂಸ್ಥೆ ಖಾಸಗೀಕರಣ ಮಾಡ್ತಾರೆ …!
ಬೇರೆ ರಾಜ್ಯಗಳಿಂದ ಬರುವ ಯಾತ್ರಿಕರಿಗೆ ಕೋವಿಡ್​ ಆ್ಯಂಟಿಜೆನ್​ ಟೆಸ್ಟ್​ ಕಡ್ಡಾಯವಾಗಿದೆ. ಈ ಪರೀಕ್ಷೆಯಲ್ಲಿ ನೆಗೆಟಿವ್​ ಫಲಿತಾಂಶ ಬಂದರೆ ಮಾತ್ರ ಕಾಟ್ರಾದಿಂದ ಮುಂದೆ ಸಾಗಬಹುದು.
ದರ್ಶನಕ್ಕೆ ಭಕ್ತರು ಆನ್​ಲೈನ್​ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಜಮ್ಮು ಕಾಶ್ಮೀರ ಹೊರತುಪಡಿಸಿ ಹೊರ ರಾಜ್ಯದ 500 ಜನರಿಗಷ್ಟೇ ಪ್ರತಿದಿನ ಭೇಟಿ ನೀಡಬಹುದು. ದರ್ಶನದ ಬಳಿಕ ಭವನದಲ್ಲಿ ಉಳಿದುಕೊಳ್ಳಲು ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 13 =
Remember me
