ರಾಘವ ಶರ್ಮ ನಿಡ್ಲೆ ನವದೆಹಲಿ
ಒಂದು ಮಾತನಾಡಿ, ಮತ್ತೊಂದು ರೀತಿಯಲ್ಲಿ ನಡೆದುಕೊಳ್ಳುವುದು ಚೀನಾದ ಹುಟ್ಟುಗುಣ. ಇದಕ್ಕೆ ಇತಿಹಾಸವೇ ಸಾಕ್ಷಿ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಸೇರಿ ಭಾರತವನ್ನಾಳಿದ ಅನೇಕರಿಗೆ ಈ ಅನುಭವವಿದೆ. ಹೀಗಾಗಿಯೇ, ಚೀನಾ ವರ್ತನೆಯನ್ನು ಎಂದಿಗೂ ಅನುಮಾನದಿಂದಲೇ ನೋಡಬೇಕು ಎಂದು ರಕ್ಷಣಾ ತಜ್ಞರೂ ಹೇಳುವುದು. ಮೊನ್ನೆ ಲಡಾಖ್ ನಲ್ಲಿರುವ ಗಲ್ವಾನ್ ನದಿ ಬಳಿ ಇರುವ ಭಾರತ-ಚೀನಾ ಗಡಿ ವಾಸ್ತವ ನಿಯಂತ್ರಣ ರೇಖೆ (ಎಲ್​ಎಸಿ)ಪ್ರದೇಶದಲ್ಲಿ ಉಭಯ ಸೇನೆಗಳ ನಡುವಿನ ಸಂಘರ್ಷಕ್ಕೆ ಪ್ರೇರೇಪಿಸಿದ್ದು ಚೀನಾದ ಈ ನರಿ ಬುದ್ಧಿಯೇ. ಗಲ್ವಾನ್ ನದಿ ದಂಡೆಯಲ್ಲಿನ ಭಾರತದ ನೆಲದಲ್ಲಿ ಚೀನಾ ತನ್ನ ಸೇನಾ ವೀಕ್ಷಣಾ ಗೋಪುರ (ಅಬ್ಸರ್ವೆಷನ್ ಪೋಸ್ಟ್) ನಿರ್ಮಾಣ ಮಾಡಿ ತಂಟೆ ತೆಗೆದಿದ್ದರಿಂದಲೇ ಬಿಹಾರ ರೆಜಿಮೆಂಟ್ ಸೇನಾನಿಗಳು ಎದುರಾಳಿ ಸೈನಿಕರ ಮೇಲೆ ಮುಗಿಬಿದ್ದಿದ್ದರು. ಸುಮಾರು 300-400 ಯೋಧರ ಮಧ್ಯೆ ಹೊಡೆದಾಟದಲ್ಲಿ, ಕರ್ನಲ್ ಸಂತೋಷ್ ಬಾಬು ಸೇರಿ ಧೀರ ಸೇನಾನಿಗಳನ್ನು ಭಾರತ ಕಳೆದುಕೊಂಡರೆ, ಚೀನಾದ 50ಕ್ಕಿಂತಲೂ ಯೋಧರನ್ನು ಭಾರತದ ಸೈನಿಕರು ಹತ್ಯೆಗೈದರು. ವಾಸ್ತವದಲ್ಲಿ, ಈ ಗಲಾಟೆ ಸಂಭವಿಸುವ ಕೆಲ ದಿನಗಳ ಮುನ್ನ ಭಾರತದೊಂದಿಗೆ ನಡೆಸಿದ್ದ ಮಾತುಕತೆಯಂತೆ ಸೇನಾ ಶಿಬಿರ ತೆಗೆದುಹಾಕಿತ್ತು. ಅಚ್ಚರಿ ಎಂದರೆ, ಜೂನ್ 14ರಂದು ಅದೇ ಜಾಗದಲ್ಲಿ ಮತ್ತೆ ಚೀನಾ ಸೇನಾ ಶಿಬಿರ ತಲೆ ಎತ್ತಿ ನಿಂತಿತ್ತು. ಒಮ್ಮೆ ನೆಲಸಮಗೊಂಡಿದ್ದ ಪೋಸ್ಟ್​ನ್ನು ಮರು ನಿರ್ಮಾಣ ಮಾಡಿದ್ದು, ಚೀನಾದ ಕುತಂತ್ರ ಯುದ್ಧತಂತ್ರದ ಮುಂದುವರಿದ ಭಾಗವಾಗಿತ್ತು ಎಂಬುದು ಗಮನಾರ್ಹ.
ಮೂರು ಬಾರಿ ಮುಖಾಮುಖಿ:ಜೂನ್ 15ರ ರಾತ್ರಿ ಮೂರು ಬಾರಿ ಭಾರತ-ಚೀನಾ ಸೇನೆ ಮುಖಾಮುಖಿಯಾಗಿ. ಕಲ್ಲು, ಮುಳ್ಳುತಂತಿ ಸುತ್ತಿದ ರಾಡ್​ಗಳು ಸೇರಿದಂತೆ ಹಲವು ಅಸ್ತ್ರಗಳಿಂದ ಸಜ್ಜಾಗಿ ನಿಂತಿದ್ದ ಸುಮಾರು 350 ಚೀನೀಯರು, ಭಾರತದ ಸೇನೆ ಮೇಲೆ ಎಗ್ಗಿಲ್ಲದೆ ದಾಳಿ ನಡೆಸಿದ್ದರು. ಮೊದಲಿಗೆ ಚೀನಿಯರು ಹವಾಲ್ದಾರ್ ಪಳನಿಯವರನ್ನು ಹತ್ಯೆಗೈದರು ಎನ್ನಲಾಗಿದೆ. ಇದರಿಂದ ಮತ್ತಷ್ಟು ವ್ಯಗ್ರಗೊಂಡಿದ್ದ ಬಿಹಾರ ರೆಜಿಮೆಂಟ್ ಸೈನಿಕರು, ಚೀನಿಯರ ಮೇಲೆ ಉಗ್ರ ರೀತಿಯಲ್ಲಿ ದಾಳಿಗೈದರು. ಎತ್ತರದ ಪ್ರದೇಶದಿಂದ ಚೀನಾ ಸೇನೇ ಎಸೆಯುತ್ತಿದ್ದ ದೊಡ್ಡ ದೊಡ್ಡ ಕಲ್ಲುಗಳನ್ನೂ ಲೆಕ್ಕಿಸದೆ ಮುನ್ನುಗ್ಗಿದರು. ಏತನ್ಮಧ್ಯೆ, ಚೀನಿಯರು ಎಸೆದ ಕಲ್ಲೊಂದು ಹಣೆಗೆ ಬಡಿದ ಪರಿಣಾಮ, ಸಂತೋಷ್ ಬಾಬು ಹೋರಾಡುತ್ತಲೇ ಗಲ್ವಾನ್ ನದಿಗೆ ಬಿದ್ದರು. ಭಾರತದ ಕಡೆಯಿಂದ ಅಂದಾಜು 100 ಸೈನಿಕರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರೆ, 350ಕ್ಕೂ ಹೆಚ್ಚು ಚೀನಿಯರು ಸ್ಥಳದಲ್ಲಿದ್ದರು. ಆದಾಗ್ಯೂ, ಬಿಹಾರದ ಪಡೆ ಪ್ಯಾಟ್ರೋಲಿಂಗ್ ಪಾಯಿಂಟ್ 14ರಲ್ಲಿ ಚೀನಾ ಶಿಬಿರವನ್ನು ಕಿತ್ತುಹಾಕುವಲ್ಲಿ ಯಶಸ್ವಿಯಾಗಿತ್ತು. ಚೀನೀಯರು ಭಾರತೀಯ ಸೇನಾನಿಗಳನ್ನು ಪ್ರಚೋದಿಸಿ ದಾಳಿ ನಡೆಸಲೆಂದೇ ಶಿಬಿರವನ್ನು ಮರು ನಿರ್ಮಾಣ ಮಾಡಿದ್ದರು ಮತ್ತು ವ್ಯವಸ್ಥಿತವಾಗಿ ಹೆಚ್ಚುವರಿ ಸೇನೆಯನ್ನು ಪಕ್ಕದಲ್ಲೇ ನಿಯೋಜಿಸಿಕೊಂಡಿದ್ದರು!
ಬ್ಯಾಟ್ಸ್ ಅಲ್ಲ, ಬ್ಯಾಟ್​ವುನ್ ಗಳು!:ಬಿಹಾರ ರೆಜಿಮೆಂಟ್ ಸೈನಿಕರ ಧೈರ್ಯ-ಶೌರ್ಯ ಕೊಂಡಾಡುವ ವೀಡಿಯೊವೊಂದನ್ನು ಭಾರತೀಯ ಸೇನೆ ಟ್ವೀಟ್ ಮಾಡಿದೆ. 21 ವರ್ಷಗಳ ಹಿಂದೆ ಕಾರ್ಗಿಲ್ ಯುದ್ಧದಲ್ಲಿ ರೆಜಿಮೆಂಟ್ ಸೈನಿಕರು ನೀಡಿದ್ದ ಕೊಡುಗೆ ನೆನಪಿಸಿಕೊಂಡಿದ್ದು, 1857 ರಿಂದ 1999 ರವರೆಗೆ ರೆಜಿಮೆಂಟ್ ತೆಗೆದುಕೊಂಡ ಅತ್ಯಂತ ಕಠಿಣ ಕಾರ್ಯಾಚರಣೆಗಳ ಮೇಲೆ ಬೆಳಕು ಚೆಲ್ಲಿದೆ. ಬಿಹಾರ ರೆಜಿಮೆಂಟ್​ನ 1ನೇ ಬೆಟಾಲಿಯನ್ ಕಾರ್ಗಿಲ್​ನಲ್ಲಿ ಪಾಕಿಸ್ತಾನದ ಸೈನ್ಯದಿಂದ ಆಯಕಟ್ಟಿನ ಭೂಪ್ರದೇಶ ವಶಪಡಿಸಿಕೊಂಡಿತ್ತು. ಇದು 21 ವರ್ಷಗಳ ಹಿಂದೆ ಅದೇ ತಿಂಗಳು. ಕಾರ್ಗಿಲ್ ನಲ್ಲಿ ಒಳನುಸುಳಿದವರಿಗೆ ಬಿಹಾರ ರೆಜಿಮೆಂಟ್ ರಕ್ತಸಿಕ್ತ ಉತ್ತರ ನೀಡಿತ್ತು. ಅವರು ಧೈರ್ಯದಿಂದ ಮುನ್ನುಗ್ಗಿದ್ದರು ಮತ್ತು ವೈಭವದಿಂದ ಹಿಂತಿರುಗಿದರು. ಅವರು ಬ್ಯಾಟ್ ಗಳಲ್ಲ, ಬ್ಯಾಟ್ ಮನ್ ಗಳು. ಪ್ರತಿ ಸೋಮವಾರದ ಬಳಿಕ ಮಂಗಳವಾರ ಬಂದೇ ಬರುತ್ತದೆ. ಬಜರಂಗ್ ಬಲೀ ಕೀ ಜೈ ಎಂದು ನಾರ್ಥರ್ನ್ ಕಮಾಂಡ್ ಟ್ವೀಟ್ ಮಾಡಿರುವ ವಿಡಿಯೋದಲ್ಲಿ ಮೇಜರ್ ಅಖಿಲ್ ಪ್ರತಾಪ್ ನೀಡಿರುವ ವಿವರಣೆ ಎಂಥವರನ್ನೂ ಬಡಿದೆಬ್ಬಿಸುವಂತಿದೆ.
ವೀರತ್ವದ ಮತ್ತೊಂದು ಹೆಸರು:ಭಾರತ ನೌಕಾಸೇನೆ ಅತಿದೊಡ್ಡ ಹಡಗು ಮತ್ತು ಅದರ ಏಕೈಕ ವಿಮಾನ ವಾಹಕ ನೌಕೆ ಐಎನ್​ಎಸ್ ವಿಕ್ರಮಾದಿತ್ಯ ಬಿಹಾರ ರೆಜಿಮೆಂಟ್ ವ್ಯಾಪ್ತಿಯಲ್ಲಿದೆ. ಭಾರತೀಯ ಸೇನೆಯ ಉಳಿದೆಲ್ಲಾ ರೆಜಿಮೆಂಟ್​ಗಳಿಗೆ ಹೋಲಿಸಿದರೆ ಬಿಹಾರ ರೆಜಿಮೆಂಟ್ ಅತ್ಯಧಿಕ ರಾಷ್ಟ್ರೀಯ ರೈಫಲ್ಸ್ ಬೆಟಾಲಿಯನ್ ಹೊಂದಿದೆ. ಹಿಂದೆ ಈಸ್ಟ್ ಇಂಡಿಯಾ ಕಂಪನಿ ಕೂಡ ಸೇನೆಯಲ್ಲಿ ಬಿಹಾರಿಗಳನ್ನು ಹೆಚ್ಚು ನೆಚ್ಚಿಕೊಂಡಿತ್ತೆನ್ನಲಾಗಿದೆ. 1758ರಲ್ಲಿ ಲಾರ್ಡ್ ರಾಬರ್ಟ್ ಕ್ಲೈವ್ ಅವಧಿಯಲ್ಲಿ ರೂಪುಗೊಂಡಿದ್ದ 34ನೇ ಸಿಪಾಯಿ ಬೆಟಾಲಿಯನ್​ಗೆ ಬಿಹಾರದ ಭೋಜ್ಪುರ್, ಮುಗೇರ್, ಶಹಾಬಾದ್ ಜಿಲ್ಲೆಯಿಂದಲೇ ನೇಮಕ ಮಾಡಿಕೊಳ್ಳಲಾಗಿತ್ತು. ಬಕ್ಸಾರ್, ಕರ್ನಾಟಿಕ್ ಮತ್ತು ಮರಾಠಾ ಯುದ್ಧಗಳ ವಿಜಯಗಳಲ್ಲಿ ಹಾಗೂ ಸಾಗರೋತ್ತರ ಹೋರಾಟಗಳಲ್ಲೂ ಈ ರೆಜಿಮೆಂಟ್ ಪ್ರಮುಖ ಪಾತ್ರ ವಹಿಸಿದೆ. 1857ರಲ್ಲಿ ನಡೆದ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ, ಗ್ರೀಸ್​ನಿಂದ ಮಾಡಿದ್ದ ಕಾಟಿರ್Åಜ್​ಗಳ ವಿರುದ್ಧ ದಂಗೆ ಎದ್ದ ಮೊದಲ ಸೈನಿಕರೂ ಇವರೇ. 1857ರ ನಂತರ, ಬ್ರಿಟಿಷರು ಬಿಹಾರಿಗಳನ್ನು ಸೈನ್ಯಕ್ಕೆ ಸೇರಲು ಪೋ›ತ್ಸಾಹಿಸಲಿಲ್ಲ. 1948-49ರಲ್ಲಿ ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನದ ಆಕ್ರಮಣಕ್ಕೆ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಬಿಹಾರ ಬೆಟಾಲಿಯನ್​ಗಳು ಇದ್ದವು. 1965ರ ಇಂಡೋ-ಪಾಕಿಸ್ತಾನಿ ಯುದ್ಧದ ಸಮಯದಲ್ಲಿ, ಬೆಡೋರಿ ಪ್ರದೇಶವನ್ನು 7 ಬಿಹಾರ ರೆಜಿಮೆಂಟ್ ವಶಪಡಿಸಿಕೊಂಡಿದ್ದರಿಂದಾಗಿ, ಹಾಜಿ ಪಿರ್​ಪಾಸ್​ನ್ನು ವಶಪಡಿಸಿಕೊಳ್ಳುವುದು ಸುಲಭವಾಗಿತ್ತು. ಹೀಗೆ, ಹತ್ತು ಹಲವು ವೀರಗಾಥೆಗಳಿಗೆ ರೆಜಿಮೆಂಟ್ ಸಾಕ್ಷಿಯಾಗಿದೆ.
ಚೀನಾ ಉದ್ದೇಶ ಏನಿತ್ತು?:ಗಲ್ವಾನ್ ಕಣಿವೆಯಿರುವ ಎಲ್​ಎಸಿಯ ವೀಕ್ಷಣಾ ಗೋಪುರ ಬಳಿ ನಿಯೋಜನೆಗೊಂಡಿದ್ದ ಚೀನಾ ಸೇನಾ ಘಟಕ ಸಾಮಾನ್ಯದ ಘಟಕವಾಗಿರಲಿಲ್ಲ. ಈ ಹಿಂದಿನ ಸೇನಾ ಮಾತುಕತೆಗಳ ಸಂದರ್ಭದಲ್ಲಿ ಹಾಜರಿದ್ದ ಸೈನಿಕರ ಬದಲು ಮತ್ತೊಂದು ಕೇಂದ್ರದಲ್ಲಿದ್ದ ಸೈನಿಕರಲ್ಲಿದ್ದರು. ಗಲ್ವಾನ್ ಕಣಿವೆಯಲ್ಲಿ ಬಿಹಾರ ರೆಜಿಮೆಂಟ್ ಕಳೆದೆರಡು ವರ್ಷಗಳಿಂದ ನಿಯೋಜನೆಗೊಂಡಿದ್ದು, ಅಲ್ಲಿನ ಅಸಹನೀಯ ಹವಾಮಾನಕ್ಕೂ ಒಗ್ಗಿಕೊಂಡಿದೆ. ಎದುರಾಳಿ ಚೀನಾ ಸೇನಾ ಘಟಕದೊಂದಿಗೂ ನಿರಂತರ ಸಂಪರ್ಕದಲ್ಲಿದ್ದುದರಿಂದ, ಎದುರಾಳಿಗಳ ಬಗ್ಗೆಯೂ ತಕ್ಕಮಟ್ಟಿಗೆ ಮಾಹಿತಿ ಸಂಗ್ರಹಿಸಿಕೊಂಡಿತ್ತು. ಆದರೆ, ಜೂನ್ 15ರ ರಾತ್ರಿ ಚೀನಾ ಸೇನಾನಿಗಳ ಅನಿರೀಕ್ಷಿತ ಆಕ್ರಮಣಕಾರಿ ವರ್ತನೆ ಭಾರತೀಯ ಸೇನೆಯನ್ನು ಅಚ್ಚರಿಗೊಳಿಸಿತ್ತು. ಗಲ್ವಾನ್ ಕಣಿವೆಯಲ್ಲಿ ಭಾರತದ ವಿರುದ್ಧ ವಿನಾಶಕಾರಿ ರೀತಿಯಲ್ಲಿ ದಾಳಿ ಮಾಡಲೆಂದೇ ಚೀನಾ ಬೇರೆಡೆ ನಿಯೋಜನೆಗೊಂಡಿದ್ದ ಸೇನಾಳುಗಳನ್ನು ಮರು ನಿರ್ವಣಗೊಂಡಿದ್ದ ಗಲ್ವಾನ್ ವೀಕ್ಷಣಾ ಪೋಸ್ಟ್ ನಲ್ಲಿ ನಿಯೋಜಿಸಿತ್ತೆನ್ನಲಾಗಿದೆ. ಭಾರತೀಯ ಸೈನಿಕರನ್ನು ಬಗ್ಗುಬಡಿದು, ಭಾರತದ ಕ್ರಾಸ್​ಒವರ್ ಪಾಯಿಂಟ್​ಗಳು, ಟ್ಯಾಂಕ್, ರಸ್ತೆ, ಹಾಗೂ ಗಲ್ವಾನ್​ನಲ್ಲಿರುವ ಸೇತುವೆಗಳನ್ನು ವಶಪಡಿಸಿಕೊಳ್ಳುವ ಉದ್ದೇಶ ಚೀನಾದ್ದಾಗಿತ್ತು ಎನ್ನುವುದು ಭಾರತೀಯ ಸೇನಾ ಮೂಲಗಳ ವಿಶ್ಲೇಷಣೆ. ಆದರೆ, ಬಿಹಾರ ರೆಜಿಮೆಂಟ್ ಸಾಹಸ ಚೀನಾ ಕುತಂತ್ರದ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿತ್ತು.
ಚೀನಾ ಗುರಿಯಾಗಿಸಿ ಕ್ಷಿಪಣಿ ಸಜ್ಜುಗೊಳಿಸಿರುವ ಜಪಾನ್​; ಯಾವುದರ ಮುನ್ಸೂಚನೆ ಇದು…?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
