ನವದೆಹಲಿ:ಜೂನ್​ 18ರಂದು ಭೋಪಾಲ್​ನಿಂದ ಆಗ್ರಾಗೆ ಚಲಿಸುತ್ತಿದ್ದ ವಂದೇ ಭಾರತ ಎಕ್ಸ್​ಪ್ರೆಸ್​ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಗೆ ತಮಗೆ ನೀಡಲಾದ ಆಹಾರದಲ್ಲಿ ಜಿರಳೆ ಪತ್ತೆಯಾದ ಘಟನೆ ಭಾರೀ ಅಚ್ಚರಿ ಮೂಡಿಸಿದ್ದು, ಊಟವನ್ನು ಕೈಬಿಟ್ಟು, ಅದರ ಫೋಟೋವನ್ನು ತೆಗೆದು, ರೈಲ್ವೆ ಇಲಾಖೆಯನ್ನು ತರಾಟೆಗೆ ತೆಗೆದುಕೊಳ್ಳುವಂತೆ ಮಾಡಿತು. ಈ ವಿಷಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ:ವಿದ್ವಾನ್ ಬಾಂಬೆ ವಿ.ಆನಂದ್, ವಿದ್ವಾನ್ ವೇದಜ್ಞ ನರಸಿಂಹರಿಂದ ದ್ವಂದ್ವ ವಯೊಲಿನ್ ಕಾರ್ಯಕ್ರಮ
ವಿದಿತ್ ವರ್ಷ್ನಿ ಎಂಬುವವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಈ ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, “ನಾವು ಭೋಪಾಲ್‌ನಿಂದ ಆಗ್ರಾಗೆ ಪ್ರಯಾಣಿಸುತ್ತಿದ್ದಾಗ ವಂದೇ ಭಾರತ ಎಕ್ಸ್‌ಪ್ರೆಸ್‌ನಲ್ಲಿ ನಮ್ಮ ಚಿಕ್ಕಪ್ಪ ಮತ್ತು ಚಿಕ್ಕಮ್ಮಗೆ ನೀಡಿದ ಆಹಾರದಲ್ಲಿ ಸತ್ತ ಜಿರಳೆ ಪತ್ತೆಯಾಯಿತು. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಆಹಾರ ಮಾರಾಟಗಾರರಿಗೆ ಐಆರ್​ಸಿಟಿಸಿ ಎಚ್ಚರಿಕೆ ರವಾನಿಸಬೇಕಿದೆ. ರೈಲ್ವೆ ಇಲಾಖೆಯ ಅಧಿಕಾರಿಗಳು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಫೋಟೋ ಹಂಚಿಕೊಳ್ಳುವ ಮೂಲಕ ಆಗ್ರಹಿಸಿದ್ದರು.
ವರ್ಷ್ನಿಯವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC), “ಈ ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತೇವೆ. ಈಗಾಗಲೇ ಸೇವಾ ಪೂರೈಕೆದಾರರಿಗೆ ಸೂಕ್ತ ದಂಡ ವಿಧಿಸಿದ್ದೇವೆ. ಮುಂದೆ ಇಂತಹ ತಪ್ಪುಗಳು ಮರುಕಳಿಸುವುದಿಲ್ಲ” ಎಂದು ಇಲಾಖೆ ಪ್ರಯಾಣಿಕರ ದೂರಿಗೆ ಸ್ಪಂದಿಸಿದೆ,(ಏಜೆನ್ಸೀಸ್).
ನಾಯಕನಾಗಿ ನೀನು ಮಾಡಿದ್ದೇನೂ ಇಲ್ಲ! ಬಾಬರ್ ಆಜಂ ನಿವೃತ್ತಿಗೆ ಒತ್ತಾಯಿಸಿದ ಪಾಕ್​ ಮಾಜಿ ಕ್ರಿಕೆಟಿಗ

ಚಿತ್ರರಂಗದಲ್ಲಿ ‘ಸಾರಥಿ’ಗಿರುತ್ತ ಉಳಿವು​? ಮುಂದಿನ ಚಿತ್ರಗಳ ಕಥೆಯೇನು? ಹೀಗಿದೆ ವರದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
