ನವದೆಹಲಿ:ವಂದೇ ಭಾರತ್​ ರೈಲುಗಳ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸುವ ಸಂಬಂಧ “ಯಾತ್ರಿ ಸೇವಾ ಅನುಬಂಧ’ ಎನ್ನುವ ಅಭಿಯಾನವೊಂದನ್ನು ಭಾರತೀಯ ರೈಲ್ವೆ ಆರಂಭಿಸಿದೆ. ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲಗಳನ್ನು ಕಲ್ಪಿಸುವುದು ಈ ಅಭಿಯಾನದ ಉದ್ದೇಶವಾಗಿದೆ.
ಮೌಲ್ಯವರ್ಧಿತ ಸೇವೆಗಳ ವೆಚ್ಚ ಕಡಿತ ಸಹಿತ ಹಲವು ಸೌಲಭ್ಯಗಳು ಪ್ರಯಾಣಿಕರಿಗೆ ಸಿಗಲಿವೆ. ವಂದೇ ಭಾರತ್​ ರೈಲುಗಳ ಪೈಕಿ ಆರು ರೈಲುಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿದ್ದು ಅದು ಯಶಸ್ವಿಯಾದರೆ ಮುಂದೆ ಎಲ್ಲ ವಂದೇ ಭಾರತ್​ ರೈಲುಗಳಲ್ಲಿ ಅದನ್ನು ವಿಸ್ತರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಈ ಅಭಿಯಾನದ ಅನ್ವಯ, ವಂದೇ ಭಾರತ್​ ರೈಲಿನ ಪ್ರಯಾಣಿಕರಿಗೆ ಆಹಾರ, ಪಾನೀಯಗಳಲ್ಲಿ ಹಲವು ಆಯ್ಕೆಗಳು ಸಿಗಲಿವೆ. ಅಲ್ಲದೆ ಸಾಕಷ್ಟು ಮೌಲ್ಯವರ್ಧಿತ ಸೇವೆಗಳೂ ಲಭ್ಯವಾಗಲಿವೆ. ಖಾಸಗಿ ಸಂಸ್ಥೆಗಳು ಕಡಿಮೆ ವೆಚ್ಚದಲ್ಲಿ ಆಹಾರ ಹಾಗೂ ಪಾನೀಯ ಒದಗಿಸಲಿವೆ. ಮಾಹಿತಿ-ಮನರಂಜನೆ ವ್ಯವಸ್ಥೆ, ಪ್ರಯಾಣಿಕ ಸ್ನೇಹಿ ಅನುಕೂಲಗಳ ಸಹಿತ ಇತರ ಅನೇಕ ಸೌಲಭ್ಯಗಳನ್ನು ಕೂಡ ಪ್ರಯಾಣಿಕರಿಗೆ ಒದಗಿಸಲಾಗುತ್ತದೆ. ರೈಲಿನ ಸ್ವಚ್ಛತಾ ವೆಚ್ಚ ತಗ್ಗಿಸಲೂ ಕಾರ್ಯತಂತ್ರ ರೂಪಿಸಲಾಗಿದ್ದು ಅದರ ನೇರ ಲಾಭ ಪ್ರಯಾಣಿಕರಿಗೆ ಸಿಗಲಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twenty − eight =
Remember me
