ನವದೆಹಲಿ:ಭಾರತೀಯ ರಲ್ವೇಯು  ವಂದೇ ಭಾರತ್ ರೈಲುಗಳೊಂದಿಗೆ ವೇಗದ ಪ್ರಯಾಣವನ್ನು ನೀಡುವ ಮೂಲಕ ಸೌಲಭ್ಯಗಳ ವಿಷಯದಲ್ಲಿ ಮತ್ತೊಂದು ಹೆಜ್ಜೆ ಇಡಲಿದೆ. ಸ್ಲೀಪರ್ ಕೋಚ್‌ಗಳೊಂದಿಗೆ ವಂದೇ ಭಾರತ್ ಪರಿಕಲ್ಪನೆಯ ರೈಲುಗಳು 2024ರಲ್ಲಿ ಹೊರತರಲಾಗುತ್ತಿದೆ.
ಈ ಹೊಸ ರೈಲುಗಳ ಫೋಟೋಗಳನ್ನು ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಹಂಚಿಕೊಂಡಿದ್ದಾರೆ. ಎಲ್ಲವೂ ಸರಿಯಾಗಿ ನಡೆದರೆ ಮುಂದಿನ ಮಾರ್ಚ್‌ನಲ್ಲಿ ಈ ರೈಲು ಓಡಬಹುದು.
ಈ ಸ್ಲೀಪರ್ ಕೋಚ್‌ಗಳನ್ನು ಭಾರತೀಯ ರೈಲ್ವೆ ವಿಕಾಸ್ ನಿಗಮ್ ಲಿಮಿಟೆಡ್ ಮತ್ತು ರಷ್ಯಾದ ಟಿಎಂಎಚ್ ಗ್ರೂಪ್ ಜಂಟಿಯಾಗಿ ತಯಾರಿಸಿವೆ.ಒಟ್ಟು 200 ರೈಲುಗಳ ಪೈಕಿ 120 ರೈಲುಗಳನ್ನು ರಷ್ಯಾದ ಕಂಪನಿ ತಯಾರಿಸಲಿದೆ.ಉಳಿದ 80 ರೈಲುಗಳನ್ನು ಟಿಟಾಗರ್ ವ್ಯಾಗನ್ಸ್ ಮತ್ತು ಬಿಎಚ್‌ಇಎಲ್ ಒಳಗೊಂಡ ಒಕ್ಕೂಟದಿಂದ ತಯಾರಿಸಲಾಗುವುದು.ಈ ಹೊಸ ಸ್ಲೀಪರ್ ವಂದೇ ಭಾರತ್ ರೈಲುಗಳು ಅಸ್ತಿತ್ವದಲ್ಲಿರುವ ರಾಜಧಾನಿ ಎಕ್ಸ್‌ಪ್ರೆಸ್ ಅನ್ನು ಬದಲಾಯಿಸಲಿವೆ.
Concept train – Vande Bharat (sleeper version)
Coming soon… early 2024pic.twitter.com/OPuGzB4pAk
— Ashwini Vaishnaw (@AshwiniVaishnaw)October 3, 2023

ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಲೀಪರ್ ಕೋಚ್‌ ವಿಶೇಷತೆ:ಈ ಸ್ಲೀಪರ್ ವಂದೇ ಭಾರತ್ ರೈಲುಗಳು34 ಸೀಟುಗಳನ್ನು ಸಿಬ್ಬಂದಿಗೆ ಮೀಸಲಿಡಲಾಗಿದೆ.ಅಂದರೆ ಒಟ್ಟು 887 ಮಂದಿ ಪ್ರಯಾಣಿಸಬಹುದು.ಪ್ರತಿ ಕೋಚ್ ಮೂರು ಶೌಚಾಲಯಗಳನ್ನು ಹೊಂದಿದೆ.ಈ ರೈಲು 16 ವಿಶಾಲವಾದ ಕೋಚ್‌ಗಳನ್ನು ಹೊಂದಿದೆ. ಗಂಟೆಗೆ 160 ಕಿಮೀ ವೇಗದಲ್ಲಿ ಚಲಿಸುತ್ತದೆ.ವಂದೇ ಭಾರತ್ ಸ್ಲೀಪರ್ ಆವೃತ್ತಿಯ 400 ರೈಲುಗಳಿಗೆ ಸರ್ಕಾರ ಟೆಂಡರ್ ಆಹ್ವಾನಿಸಿದೆ.ಈ ನಡುವೆ ಕೇಂದ್ರ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಶೇರ್ ಮಾಡಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + nine =
Remember me
