ನವದೆಹಲಿ:ಮುಂಬೈ ಸೆಂಟ್ರಲ್ ವಿಭಾಗದಿಂದ ಸಂಚರಿಸುವ ವಂದೇ ಭಾರತ್ ಎಕ್ಸ್​​ಪ್ರೆಸ್​ ರೈಲು, ಅತುಲ್ ಎಂಬ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ. ರೈಲು ಮುಂಬೈನಿಂದ ಗಾಂಧಿನಗರಕ್ಕೆ ಸಂಚರಿಸುತ್ತಿತ್ತು. ಈ ವೇಳೆ ದನಕರುಗಳು ಹಳಿಯಲ್ಲಿ ಅಡ್ಡ ಬಂದುದರಿಂದ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.
ಅಪಘಾತದಿಂದ ಡ್ರೈವರ್​ಕೋಚ್​ನ ಮುಂಭಾಗಕ್ಕೆ ಹಾನಿಯಾಗಿದೆ. ಆದಷ್ಟು ಬೇಗ ಇದನ್ನು ಸರಿಪಡಿಸಲಾಗುವುದು. ಅಪಘಾತ ನಡೆದ 15 ನಿಮಿಷಗಳ ನಂತರ,ರೈಲು ಮತ್ತೆ ಗಾಂಧಿನಗರಕ್ಕೆ ಪ್ರಯಾಣ ಬೆಳೆಸಿದೆ. ಸುಗಮ ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ ಎಂದು ಭಾರತೀಯ ರೈಲ್ವೇ ತಿಳಿಸಿದೆ.
ಈ ಹಿಂದೆಯೂ ವಂದೇ ಭಾರತ್​ ಎಕ್ಸ್​ಪ್ರೆಸ್​​ ರೈಲಿಗೆ ಎಮ್ಮೆಯ ಹಿಂಡು ಡಿಕ್ಕಿಯಾಗಿ, ರೈಲಿಗೆ ಹಾನಿಯಾಗಿತ್ತು. ಹೀಗಾಗಿ ರೈಲ್ವೇ ಅಧಿಕಾರಿಗಳು ಈ ಭಾಗದ ರೈತರಲ್ಲಿ ‘ನಿಮ್ಮ ದನಕರುಗಳನ್ನು ರೈಲ್ವೇ ಹಳಿ ಪ್ರದೇಶದಲ್ಲಿ ಮೇಯಲು ಬಿಡಬೇಡಿ’ ಎಂದು ಮನವಿ ಮಾಡಿದ್ದರು. ಆದರೆ ಇದೀಗ ಮತ್ತೊಮ್ಮೆ ಸಾಕುಪ್ರಾಣಿಗಳ ಕಾರಣದಿಂದ ರೈಲಿಗೆ ಹಾನಿಯಾಗಿದೆ.(ಏಜೆನ್ಸೀಸ್)
A cattle runover incident occurred with passing Vande Bharat train today near Atul in Mumbai Central division at 8.17 am. The train was on its journey from Mumbai Central to Gandhinagar. Following the incident, the train was detained for about 15 minutes: Indian Railwayspic.twitter.com/b6UoP3XrVe— ANI (@ANI)October 29, 2022
A cattle runover incident occurred with passing Vande Bharat train today near Atul in Mumbai Central division at 8.17 am. The train was on its journey from Mumbai Central to Gandhinagar. Following the incident, the train was detained for about 15 minutes: Indian Railwayspic.twitter.com/b6UoP3XrVe
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 10 =
Remember me
