ನವದೆಹಲಿ:ಉದಯಪುರ ಮತ್ತು ಆಗ್ರಾ ನಡುವೆ ಹೊಸದಾಗಿ ಪ್ರಾರಂಭಿಸಲಾದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ರೈಲ್ವೇ ನೌಕರರ ಗುಂಪೊಂದು ನುಗ್ಗಿ ರೈಲಿನ ಚಾಲಕ, ಸಹ-ಚಾಲಕ ಮತ್ತು ಗಾರ್ಡ್‌ನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಕುರಿತಾದ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗಿದೆ.
ಇದನ್ನೂ ಓದಿ:‘ದೇವರ’ ಅಡ್ವಾನ್ಸ್ ಬುಕ್ಕಿಂಗ್..ಅಮೆರಿಕದಲ್ಲಿ ಬರೆಯುತ್ತಿದೆ ದಾಖಲೆ!
ಉದಯಪುರ ಮತ್ತು ಆಗ್ರಾ ನಡುವೆ ಸೆಪ್ಟೆಂಬರ್ 2 ರಂದು ಪರಿಚಯಿಸಲಾದ ರೈಲು ವಿವಾದದ ಕೇಂದ್ರವಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಕಾರ್ಯಾಚರಣೆ ಬಗ್ಗೆ ವಿವಾದ ಪ್ರಾರಂಭವಾಗಿದ್ದು, ವಿವಿಧ ವಿಭಾಗಗಳಿಗೆ ಸೇರಿದ ನೌಕರರು ಸಿಟ್ಟಿಗೆದ್ದಿದ್ದರು. ಇದನ್ನು ಚಾಲಕ, ಗಾರ್ಡ್​ಗಳನ್ನು ಪ್ರಶ್ನಿಸಲು ಬಂದಾಗ ಅವರು ಬಾಗಿಲುಗಳನ್ನು ಬಂದ್​ ಮಾಡಿಕೊಂಡಿದ್ದರು. ಆಗ ವಾಗ್ವಾದವಾಗಿ ಬಲವಂತವಾಗಿ ಬಾಗಿಲು ಮುರಿದು ಒಳನುಗ್ಗಿದ ನೌಕರರು ರೈಲಿನ ಚಾಲಕ, ಸಹ-ಚಾಲಕ ಮತ್ತು ಗಾರ್ಡ್‌ನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರ ಜೊತೆಗೆ ಗಾರ್ಡ್ ರೂಮಿನ ಡೋರ್ ಲಾಕ್ ಗೆ ಹಾನಿ ಮಾಡಿ ಕ್ಯಾಬಿನ್ ನಲ್ಲಿದ್ದ ಗಾಜುಗಳನ್ನು ಒಡೆದು ಹಾಕಿದ್ದಾರೆ. ಈ ಸಂದರ್ಭದಲ್ಲಿ ಲೋಕೊ ಪೈಲಟ್‌ಗೆ ಗಾಯವಾಗಿದೆ.
ये मारामारी ट्रेन में बैठने के लिए पैसेंजर की नहीं है। ये लोको पायलट हैं, जो वंदेभारत एक्सप्रेस ट्रेन चलाने के लिए आपस में युद्ध कर रहे हैं।
आगरा से उदयपुर के बीच ट्रेन अभी शुरू हुई है। पश्चिम–मध्य रेलवे, उत्तर–पश्चिम, उत्तर रेलवे ने अपने अपने स्टाफ को ट्रेन चलाने का आदेश दे रखा…pic.twitter.com/oAgYdxNHa7
— Sachin Gupta (@SachinGuptaUP)September 7, 2024

ವಿವಾದ ಬಿಗಡಾಯಿಸಿದ ಕಾರಣ ಇದೀಗ ಈ ಸಮಸ್ಯೆಯನ್ನು ರೈಲ್ವೆ ಮಂಡಳಿಯ ಗಮನಕ್ಕೆ ತರಲಾಗಿದೆ. ರೈಲು-ಪಶ್ಚಿಮ ಸೆಂಟ್ರಲ್ ರೈಲ್ವೆ, ವಾಯುವ್ಯ ರೈಲ್ವೆ ಮತ್ತು ಉತ್ತರ ರೈಲ್ವೆ-ನಿರ್ವಹಣೆಯಲ್ಲಿ ತೊಡಗಿರುವ ವಿವಿಧ ರೈಲ್ವೆ ವಿಭಾಗಗಳ ನಡುವಿನ ಸಂಘರ್ಷವು ಸುಗಮ ಸೇವೆಯ ಮೇಲೆ ಪರಿಣಾಮ ಬೀರುತ್ತಿದೆ. ಈ ಆಂತರಿಕ ಸಂಘರ್ಷಗಳಿಂದಾಗಿ ಈ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಹಲವು ಬಾರಿ ವಿಳಂಬವಾಗಿದೆ ಎಂದು ವರದಿಯಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಚಾರಗೊಂಡಿದ್ದು, ರೈಲ್ವೇ ಅಧಿಕಾರಿಗಳು ದಾಂಧಲೆ ನಡೆಸಿದವರ ಮೇಲೆ ಶಿಸ್ತು ಕ್ರಮ ಜರುಗಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಸೋದರಳಿಯನಿಂದಲೇ ಲೈಂಗಿಕ ಕಿರುಕುಳ.. ದೂರು ನೀಡಿದ್ದಕ್ಕೆ ಮಹಿಳೆಗೆ ತಲೆ ಬೋಳಿಸಿ, ಥಳಿಸಿದರು!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:3 + seven =
Remember me
