ನವದೆಹಲಿ:ವಾರಾಣಸಿಯ ಮಹಿಳಾ ಕರಕುಶಲಕರ್ಮಿಗಳು ರಕ್ಷಾಬಂಧನ ಹಬ್ಬಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಾಸ್ತವ ಗಡಿರೇಖೆ ಬಳಿಯ ಗಲ್ವಾನ್​ ಕಣಿವೆಯಲ್ಲಿನ ಯೋಧರಿಗಾಗಿ ಮರದ ರಾಖಿಗಳನ್ನು ಸಿದ್ಧಪಡಿಸಿ ರವಾನಿಸಿದ್ದಾರೆ. ವಾರಾಣಸಿಯನ್ನು ಪ್ರತಿನಿಧಿಸುವ ಪ್ರಧಾನಿ ಮೋದಿ ಅವರ ಸಂಸತ್​ ಸದಸ್ಯರ ಕಚೇರಿ ಮೂಲಕ ಈ ರಾಖಿಗಳು ರವಾನೆಗೊಂಡಿವೆ.
ಶಾಲಿನಿ, ವಂದನಾ, ರೀಟಾ, ಪುಷ್ಪಾ, ಸೀತಾ ಎಂಬ ಮಹಿಳಾ ಕರಕುಶಲಕರ್ಮಿಗಳಲ್ಲದೆ ವೀರೇಂದ್ರ, ರಾಜ್​ಕುಮಾರ್​ ಮತ್ತು ರಾಮೇಶ್ವರ್​ ಸಿಂಗ್​ ಎಂಬ ಕರಕುಲಕರ್ಮಿಗಳ ಗುಂಪು ಈ ರಾಖಿಗಳನ್ನು ತಯಾರಿಸಿದೆ. ವಾರಾಣಸಿಯಲ್ಲಿರುವ ನರೇಂದ್ರ ಮೋದಿ ಅವರ ಸಂಸತ್​ ಸದಸ್ಯರ ಕಚೇರಿಗೆ ಈ ಗುಂಪು ತಲುಪಿಸಿದ ಮರದ ರಾಖಿಗಳನ್ನು ಕಚೇರಿಯ ಉಸ್ತುವಾರಿ ಶಿವ್​ ಶರಣ್​ ಪಾಠಕ್​ ಪಡೆದುಕೊಂಡು ಮಂಗಳವಾರವೇ ಅವನ್ನು ಪ್ರಧಾನಿ ಮೋದಿ ಅವರಿಗೆ ರವಾನಿಸುವುದಾಗಿ ಭರವಸೆ ನೀಡಿದರು ಎನ್ನಲಾಗಿದೆ.
ಜಿಯಾಗ್ರಫಿಕಲ್​ ಇಂಡಿಕೇಷನ್​ (ಜಿಐ) ತಜ್ಞ ಮತ್ತು ಪದ್ಮಶ್ರೀ ರಜನೀಕಾಂತ್​ ಅವರು ಮರದ ರಾಖಿಗಳನ್ನು ವಿನ್ಯಾಸಗೊಳಿಸಿ, ಅವುಗಳನ್ನು ತಯಾರಿಸಲು ಕರಕುಶಲಕರ್ಮಿಗಳ ಗುಂಪಿಗೆ ಸಹಕರಿಸಿದ್ದಾರೆ. ರಾಖಿಗಳ ಜತೆಗೆ ಪ್ರಧಾನಿ ಮೋದಿ ಅವರಿಗೆ ಪತ್ರವನ್ನು ರವಾನಿಸಿರುವ ಈ ತಂಡ, ರಕ್ಷಾಬಂಧನದ ಹಬ್ಬದ ದಿನ ಮರದ ಒಂದು ರಾಖಿಯನ್ನು ತಮ್ಮ ಕೈಗೆ ಕಟ್ಟಿಕೊಳ್ಳುವುದಲ್ಲದೆ, ಉಳಿದ ರಾಖಿಗಳನ್ನು ಗಲ್ವಾನ್​ ಕಣಿವೆಯಲ್ಲಿ ನಿಯೋಜನೆಗೊಂಡಿರುವ ಯೋಧರಿಗೆ ರವಾನಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಅಕ್ಷಯ್​ ಕುಮಾರ್ ಜತೆ ಸೂರ್ಯವಂಶಿ ಚಿತ್ರದಲ್ಲಿ ನಟಿಸಿದ ಕಲಾವಿದ ಇದೀಗ ತರಕಾರಿ ವ್ಯಾಪಾರಿ!
ನಿಮ್ಮ ಆಶೀರ್ವಾದಗಳೊಂದಿಗೆ ಮತ್ತು ಆತ್ಮನಿರ್ಭರ ಭಾರತದಿಂದ ಸ್ಫೂರ್ತಿಗೊಂಡು ಮೊದಲ ಬಾರಿಗೆ ಕಾಶಿಯ ಜಿಐ ನೋಂದಾಯಿತ ಕರಕುಶಲ ವುಡನ್​ ಲ್ಯಾಕೀರ್​ವೇರ್​ ಆ್ಯಂಟ್​ ಟಾಯ್ಸ್​ ಮೂಲಕ ರಾಜ್ಯ ಪ್ರಶಸ್ತಿ ವಿಜೇತ ಕರಕುಶಲಕರ್ಮಿ ರಾಮೇಶ್ವರ್​ ಸಿಂಗ್​ ಸಹಕಾರದಲ್ಲಿ ಮರದ ರಾಖಿಗಳನ್ನು ತಯಾರಿಸಿದ್ದೇವೆ. ರಕ್ಷಾಬಂಧನದ ಹಬ್ಬದ ಸಂದರ್ಭದಲ್ಲಿ ಗಲ್ವಾನ್​ ಕಣಿವೆಯಲ್ಲಿ ದೇಶದ ಗಡಿಕಾಯುತ್ತಿರುವ ಧೀರ ಯೋಧರಿಗಾಗಿ ಇವನ್ನು ರವಾನಿಸುತ್ತಿದ್ದೇವೆ ಎಂದು ಕರಕುಶಲಕರ್ಮಿಗಳು ಪತ್ರದಲ್ಲಿ ಬರೆದಿದ್ದಾರೆ.
ವಾರಣಾಸಿಯ ಜಿಐ ಕರಕುಶಲದಡಿ ಕರಕುಶಲಕರ್ಮಿಗಳು 50 ಸಾವಿರ ಮರದ ರಾಖಿಗಳನ್ನು ತಯಾರಿಸಿದ್ದಾರೆ. ಇವುಗಳನ್ನು ವಿತರಿಸುವ ಮೂಲಕ ನೂರಾರು ಕರಕುಶಲಕರ್ಮಿಗಳಿಗೆ ಉದ್ಯೋಗವನ್ನೂ ನೀಡಿದ್ದಾರೆ. ಕೋವಿಡ್​-19 ಪಿಡುಗಿನ ಹಿನ್ನೆಲೆಯಲ್ಲಿ ಅವರ ಈ ಕಾರ್ಯ ಶ್ಲಾಘನೀಯವಾಗಿದೆ.
ಅರ್ಜುನ್​ ಸರ್ಜಾ ಪುತ್ರಿ ಐಶ್ವರ್ಯಾ ಕರೊನಾ ವರದಿ ನೆಗೆಟಿವ್​; ಆಸ್ಪತ್ರೆಯಿಂದ ಡಿಸ್ಚಾರ್ಜ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + sixteen =
Remember me
