ವಾರಾಣಸಿ:ಕೊರೊನಾ ವೈರಸ್​ ಭಾರತಕ್ಕೆ ಬಂದು ತನ್ನ ಯಮರೂಪವನ್ನು ತೋರಲಾರಂಭಿಸಿದೆ. ದೇಶದ ಜನತೆ ಕೊರೊನಾ ವೈರಸ್​ಗೆ ಹೆದರಿರುವಂತೆಯೇ ಜನರ ಕಾಯುವ ದೇವರೂ ಸಹ ವೈರಸ್​ನ ದಾಳಿಗೆ ಹೆದರಿದೆ. ವಾರಾಣಸಿಯ ವಿಶ್ವನಾಥ ದೇವಾಲಯದಲ್ಲಿ ವೈರಸ್​ನಿಂದ ದೇವರನ್ನು ರಕ್ಷಿಸಲು ಅದರ ಜತೆಯಲ್ಲಿ ವೈರಸ್​ನ ಕುರಿತಾಗಿ ಜನ ಜಾಗೃತಿ ಮೂಡಿಸಲು ಅಲ್ಲಿನ ಅರ್ಚಕರು ಮುಂದಾಗಿದ್ದು, ಶಿವಲಿಂಗಕ್ಕೂ ಸಹ ಮಾಸ್ಕ್​ ಹಾಕಿದ್ದಾರೆ.
ವಾರಾಣಸಿಯ ವಿಶ್ವನಾಥ ದೇವಾಲಯದ ಶಿವಲಿಂಗಕ್ಕೆ ಬೇಸಿಗೆಯಲ್ಲಿ ಫ್ಯಾನ್​, ಎಸಿ ವ್ಯವಸ್ಥೆ ಮಾಡಲಾಗುತ್ತದೆ. ಚಳಿಗಾಲದಲ್ಲಿ ಸ್ವೆಟರ್​, ಹೊದಿಕೆಯ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಅದೇ ರೀತಿಯಲ್ಲಿ ಈಗ ದೇಶದಲ್ಲಿ ಕಾಡಲಾರಂಭಿಸಿರುವ ಕೊರೊನಾ ವೈರಸ್​ನಿಂದ ಕಾಪಾಡುವುದಕ್ಕಾಗಿ ಮಾಸ್ಕ್​ ಹಾಕಲಾಗಿದೆ. ಇದರಿಂದಾಗಿ ಜನರಲ್ಲಿ ವೈರಸ್​ನ ಕುರಿತಾಗಿ ಅರಿವು ಮೂಡಲಿದೆ ಎಂದು ಅಲ್ಲಿನ ಅರ್ಚಕರು ತಿಳಿಸಿದ್ದಾರೆ.
ಭಕ್ತಾದಿಗಳು ಶಿವಲಿಂಗವನ್ನು ಮುಟ್ಟಿದರೆ ವೈರಸ್​ ಹೆಚ್ಚು ಹೆಚ್ಚು ಜನರಿಗೆ ತಗಲುವ ಸಾಧ್ಯತೆ ಇದೆ. ಹಾಗಾಗಿ ಮಾಸ್ಕ್​ ಹಾಕಲಾಗಿರುವ ದೇವರನ್ನು ಭಕ್ತಾದಿಗಳು ಮುಟ್ಟಬಾರದು ಎಂದು ಅರ್ಚಕರು ಕೇಳಿಕೊಂಡಿದ್ದಾರೆ.(ಏಜೆನ್ಸೀಸ್​)
ಕೊರೊನಾ ಪೀಡಿತ ಇರಾನ್​ನಿಂದ ಭಾರತಕ್ಕೆ ಬಂದಿಳಿದ 58 ಸ್ವದೇಶಿಗರು

ಹಿಂದೂ ಸಮುದಾಯಕ್ಕೆ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ರಿಂದ ಹೋಳಿ ಶುಭಾಶಯ; ಶಾಂತಿಯಿಂದ ಹಬ್ಬ ಆಚರಿಸುವಂತೆ ಟ್ವೀಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − four =
Remember me
