ನವದೆಹಲಿ:ಜೈಲಿನಲ್ಲಿರುವ ಕ್ರಾಂತಿಕಾರಿ ಬರಹಗಾರ-ಕವಿ ವರವರ ರಾವ್ ಜೀವಂತವಾಗಿದ್ದಾರೆ, ಆದರೆ ಅವರ ಆರೋಗ್ಯದ ಸ್ಥಿತಿಯಲ್ಲಿ ಏರುಪೇರಾಗಿದೆ ಎಂದು ಅವರ ಸೋದರ ಮಾವ ಎನ್ ವೇಣುಗೋಪಾಲ್ ಹೇಳಿದ್ದಾರೆ.ರಾವ್ ಸಾವಿನ ಕುರಿತ ವದಂತಿಗಳನ್ನು ತಳ್ಳಿ ಹಾಕಿದ ಅವರು, ಯಾರೋ ಕೆಲವರು ಕಿಡಿಗೇಡಿತನಗಳಿಂದ ಹರಡಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.ಆದರೆ, ತಲೋಜಾ ಕೇಂದ್ರ ಕಾರಾಗೃಹದಲ್ಲಿ ಅವರ ಆರೋಗ್ಯ ಹದಗೆಡುತ್ತಿದೆ ಎಂದು ಅವರು ಹೇಳಿದರು. ವಕೀಲರು ಮತ್ತು ಕುಟುಂಬದವರ ಮನವಿಯ ಹೊರತಾಗಿಯೂ, ಉತ್ತಮ ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿಸಲು ವಿಳಂಬ ಮಾಡುವ ಮೂಲಕ ಅಧಿಕಾರಿಗಳು ಅವರನ್ನು ಕೊಲ್ಲಲು ಬಯಸಿದಂತಿದೆ ಎಂದು ಅವರು ಬೇಸರಪಟ್ಟು ಹೇಳಿದ್ದಾರೆ.
ಇದನ್ನೂ ಓದಿ:ಕ್ರಾಂತಿಕಾರಿ ಬರಹಗಾರ ವರವರ ರಾವ್ ಆರೋಗ್ಯ ಸ್ಥಿತಿ ಏರು ಪೇರು.. ನಿಷ್ಕಾಳಜಿ ವಹಿಸಿದ ಕಾರಾಗೃಹ ಅಧಿಕಾರಿಗಳ ವಿರುದ್ಧ ಕುಟುಂಬದವರ ಆರೋಪ
ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಭಾಗವಹಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿರುವ 80 ವರ್ಷದ ರಾವ್ ಒಂದು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿದ್ದಾರೆ.ಮಧ್ಯರಾತ್ರಿ ಮಧ್ಯಾಹ್ನ 12:30 ರಷ್ಟೊತ್ತಿಗೆ ಅವರು ನಿಧನರಾಗಿದ್ದಾರೆ ಎಂದು ಯಾರೋ ಒಬ್ಬರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ನಮ್ಮ ವಕೀಲರು ತಕ್ಷಣ ಜೈಲು ಅಧಿಕಾರಿಗಳಿಗೆ ಕರೆ ಮಾಡಿ ಸುದ್ದಿ ನಿಜವಲ್ಲ ಎಂದು ದೃಢಪಡಿಸಿದರು. ಯಾರೋ ಮಾಡಿದ ಕಿಡಿಗೇಡಿತನದ ಈ ಸುದ್ದಿಯನ್ನು ಹತ್ತು ನಿಮಿಷಗಳಲ್ಲಿ ನೂರಾರು ಜನರು ಹಂಚಿಕೊಂಡಿದ್ದಾರೆ. ಅದು ಕಾಡ್ಗಿಚ್ಚಿನಂತೆ ಹರಡಿದೆ. ಹಾಗಾಗಿ ಬೆಳಿಗ್ಗೆ ನಾನು ಫೇಸ್​​ಬುಕ್​​ನಲ್ಲಿ ಈ ಕುರಿತು ಸ್ಪಷ್ಟನೆ ನೀಡಬೇಕಾಯಿತು ಎಂದು ವೇಣುಗೋಪಾಲ್ ಹೇಳಿದರು.ರಾವ್ ಅವರೊಂದಿಗೆ ಶನಿವಾರ ಸಂಜೆ ಕುಟುಂಬದವರು ಮಾತನಾಡಿದ್ದಾರೆ. ಅವರ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗಿರುವುದು ಗೊತ್ತಾಗುತ್ತಿದೆ. ಏನೇ ಕೇಳಿದರೂ ಅವರು ಅದಕ್ಕೆ ಸ್ಪಂದಿಸುತ್ತಿಲ್ಲ. ತುಂಬ ಹಳೆಯ ಘಟನೆಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅದು ಸೋಡಿಯಂ ಮತ್ತು ಪೊಟ್ಯಾಸಿಯಮ್ ಮಟ್ಟದಲ್ಲಿನ ಕುಸಿತದಿಂದಾಗಿರಬಹುದು ಎಂದು ವೇಣುಗೋಪಾಲ್ ಹೇಳಿದರು.
ಇದನ್ನು ಓದಿ:ಹೋಮ್‌ ಕ್ವಾರಂಟೈನ್‌ ಬದಲು ಅಮಿತಾಭ್‌ ಆಸ್ಪತ್ರೆಯನ್ನೇ ಆಯ್ಕೆ ಮಾಡಿಕೊಂಡಿದ್ದೇಕೆ?
ದೂರವಾಣಿ ಮೂಲಕ ಅವರ ಕುಟುಂಬದೊಂದಿಗೆ ಮಾತನಾಡಿದ ಅವರ ಸಹ-ಖೈದಿ ವೆರ್ನಾನ್ ಗೊನ್ಸಾಲ್ವೆಸ್, ರಾವ್ ಅವರ ಸ್ಥಿತಿ ಹದಗೆಟ್ಟಿದೆ ಮತ್ತು ಅವರು ನಡೆಯಲು ಮತ್ತು ಹಲ್ಲುಜ್ಜಲು ಸಹ ಬೇರೆಯವರನ್ನು ಅವಲಂಬಿಸುವಂತಾಗಿದ್ದು, ತಕ್ಷಣ ಆಸ್ಪತ್ರೆಗೆ ಸೇರಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.ವಿಶೇಷ ನ್ಯಾಯಾಲಯವು ಕಳೆದ ತಿಂಗಳು ರಾವ್ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ಸದ್ಯ ಬಾಂಬೆ ಹೈಕೋರ್ಟ್ ಮುಂದೆ ಅವರ ಮೇಲ್ಮನವಿ ಇನ್ನೂ ಬಾಕಿ ಇದೆ.2018 ರ ಜನವರಿಯಲ್ಲಿ ಭೀಮಾ-ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಒಂಬತ್ತು ಮಾನವ ಹಕ್ಕುಗಳ ಕಾರ್ಯಕರ್ತರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲ್ಲಲು ಕಾರ್ಯಕರ್ತರು ಸಂಚು ರೂಪಿಸುತ್ತಿದ್ದಾರೆ ಎಂದು ಪೊಲೀಸರು ತಮ್ಮ ಚಾರ್ಜ್‌ಶೀಟ್‌ನಲ್ಲಿ ಆರೋಪಿಸಿದ್ದರು. ಆದರೆ, ಪೊಲೀಸರು ಇನ್ನೂ ಯಾವುದೇ ನಿರ್ಣಾಯಕ ಪುರಾವೆಗಳನ್ನು ನೀಡಿಲ್ಲ ಮತ್ತು ಅವರಿಗೆ ಜಾಮೀನು ನೀಡುವಲ್ಲಿ ಅನಗತ್ಯ ವಿಳಂಬವಾಗಿದೆ ಎಂದು ಕಾರ್ಯಕರ್ತರು ಹೇಳುತ್ತಾರೆ.
ರಾಜಸ್ಥಾನ ರಾಜಕೀಯ ನಾಟಕದಲ್ಲಿ ಕ್ಷಣಕ್ಕೊಂದು ತಿರುವು; ಪತನದ ಅಂಚಿನಲ್ಲಿ ಗೆಹ್ಲೋಟ್​ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
