ನವದೆಹಲಿ:ಸರ್ಕಾರದ ನಗರೀಕರಣ ಅಂಕಿಅಂಶಕ್ಕೂ ವಾಸ್ತವಕ್ಕೂ ವ್ಯತ್ಯಾಸ ಇದೆ ಎಂದು ವಿಶ್ವಬ್ಯಾಂಕ್ ಹೇಳಿದೆ. ಭಾರತ 2011ರ ನಗರೀಕರಣ ಪ್ರಮಾಣ ಶೇಕಡಾ 31.2 ಎಂದು ಸರ್ಕಾರ ಅಂದಾಜಿಸಿದೆ. ಆದರೆ, ಇದರ ಪ್ರಮಾಣ ಶೇಕಡಾ 29.9 ಎಂದು ವಿಶ್ವಬ್ಯಾಂಕ್​ನ ವರದಿ ತಿಳಿಸಿದೆ. ಅಲ್ಲದೆ, ಭಾರತದ ಜನಸಂಖ್ಯೆ ಅಂದಾಜಿಗೂ ವಿಶ್ವಬ್ಯಾಂಕ್​ನ ಅಂಕಿಅಂಶಕ್ಕೂ ಗಮನಾರ್ಹ ವ್ಯತ್ಯಾಸವಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಒಡಿಶಾ, ಗುಜರಾತ್ ಮತ್ತು ರಾಜಸ್ಥಾನಗಳ ನಗರ ಜನಸಂಖ್ಯೆಯಲ್ಲಿ ಅಧಿಕೃತ ಅಂದಾಜಿಗಿಂತ ಸುಮಾರು 15 ಲಕ್ಷ ಕಡಿಮೆ ಇದೆ. ಈ ಅಂತರ ತಮಿಳುನಾಡಿನಲ್ಲಿ 66 ಲಕ್ಷ ಇದ್ದು, ಮಧ್ಯಪ್ರದೇಶದಲ್ಲಿ 39 ಲಕ್ಷ ಇದೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ.
ಭಾರತದಲ್ಲಿ ನಗರಾಭಿವೃದ್ಧಿ ಆಡಳಿತ ರಾಜ್ಯ ಸರ್ಕಾರಗಳ ವ್ಯಪ್ತಿಯಲ್ಲಿದ್ದು ಕಾನೂನು ಪ್ರಕ್ರಿಯೆಗಳ ಪ್ರಕಾರ ಸರ್ಕಾರಗಳು ನಗರ ಪ್ರದೇಶವನ್ನು ಘೋಷಿಸುತ್ತವೆ. ಅಲ್ಲದೇ ಯಾವುದೇ ಪ್ರದೇಶಗಳನ್ನು ನಗರಗಳಾಗಿ ಪರಿಗಣಿಸಲು ಇರುವ ಮಾನದಂಡಗಳೂ ಸಹ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸ ಹೊಂದಿವೆ. ಉದಾಹರಣೆಗೆ ತಮಿಳುನಾಡಿನಲ್ಲಿ ನಗರದ ಸ್ಥಾನಮಾನ ಹೊಂದಬೇಕಾದರೆ ಅಲ್ಲಿನ ಜನಸಂಖ್ಯೆ 2 ಸಾವಿರ ಇದ್ದು, ಇದೇ ಪ್ರಮಾಣ ಕೇರಳದಲ್ಲಿ 20 ಸಾವಿರವಿದೆ. ಆಂಧ್ರಪ್ರದೇಶದಲ್ಲಿ 30 ಸಾವಿರಕ್ಕಿಂತ ಹೆಚ್ಚಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ವಿಶ್ವಬ್ಯಾಂಕ್ ಅಧ್ಯಯನ ಹೇಗೆ?
ಹೆಚ್ಚಿನ ನಿಖರತೆಗಾಗಿ ರ್ಯಾಂಡಮ್ ಫಾರೆಸ್ಟ್ ಪದ್ಧತಿ ಮೂಲಕ ವಿಶ್ವಬ್ಯಾಂಕ್ ಈ ಅಧ್ಯಯನ ನಡೆಸಿದೆ. ಇದರ ಮೂಲಕ ಯಾವುದೇ ಪ್ರದೇಶಗಳು ನಗರವಾಗುವ ಸಾಧ್ಯತೆ 0.5ಕ್ಕಿಂತ ಹೆಚ್ಚಿದ್ದರೆ ಅದನ್ನು ನಗರ ಎಂದು ವರ್ಗೀಕರಿಸಲಾಗುತ್ತದೆ, ಇಲ್ಲದಿದ್ದರೆ ಗ್ರಾಮೀಣ ಪ್ರದೇಶಗಳ ಪಟ್ಟಿಗೆ ಸೇರಿಸಲಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − two =
Remember me
