ಮುಂಬೈ:ವರುಣ್ ತೇಜ್, ಲಾವಣ್ಯ ತ್ರಿಪಾಠಿ ನವೆಂಬರ್ 1ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಹಾಗೂ ಸೆಲೆಬ್ರೆಟಿಗಳು ವರುಣ್​ ಜೋಡಿಗೆ ಶುಭ ಹಾರೈಸಿದ್ದಾರೆ.
ಇಟಲಿಯ ಅದ್ದೂರಿ ರೆಸಾರ್ಟ್‌ನಲ್ಲಿ ವಿವಾಹವಾದರು ಮತ್ತು ರಾತ್ರಿ 8.30 ರ ಸುಮಾರಿಗೆ ಅತಿಥಿಗಳಿಗಾಗಿ ಆರತಕ್ಷತೆಯನ್ನು ಆಯೋಜಿಸಿದ್ದರು. ಇಟಲಿಯಲ್ಲಿ ವರುಣ್ & ಲಾವಣ್ಯಾ ಮದುವೆಯು ಶಾಸ್ತ್ರೋಕ್ತವಾಗಿ ನಡೆದಿದ್ದು, ಎರಡೂ ಕುಟುಂಬದ ಸದಸ್ಯರ, ಸಂಬಂಧಿಕರ, ಸ್ನೇಹಿತರ ಸಮ್ಮುಖದಲ್ಲಿ ಲಾವಣ್ಯ ತ್ರಿಪಾಠಿ ಜತೆಗೆ ವರುಣ್ ತೇಜ್ ಸಪ್ತಪದಿ ತುಳಿದಿದ್ದಾರೆ. ವರುಣ್- ಲಾವಣ್ಯಾ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಸಮಾರಂಭದಲ್ಲಿ ಟಾಲಿವುಡ್ ಸೆಲೆಬ್ರಿಟಿಗಳು ಮತ್ತು ಕುಟುಂಬದವರು ಮತ್ತು ಸಂಬಂಧಿಕರು ಭಾಗವಹಿಸಿದ್ದರು. ವರುಣ್ ಲವ್ ಮದುವೆಯಲ್ಲಿ ರಾಮ್ ಚರಣ್, ಅಲ್ಲು ಅರ್ಜುನ್ ಮತ್ತು ನಿತಿನ್ ತಡಿತಾರೆ ಸೆಲೆಬ್ರಿಟಿ ಜೋಡಿಗಳ ವಿಶೇಷ ಆಕರ್ಷಣೆ.
Your blessings are earnestly sought for the newly married couple, Varun Tej Konidela and Lavanya Konidela.@IAmVarunTej@Itslavanyapic.twitter.com/UZLD8lulr4
— Naga Babu Konidela (@NagaBabuOffl)November 1, 2023

ಒಂದು ವಾರದ ಹಿಂದೆ ಮೆಗಾ ಫ್ಯಾಮಿಲಿ ಸದಸ್ಯರು ಮದುವೆಗಾಗಿ ಇಟಲಿಗೆ ತೆರಳಿದ್ದರು. ಇದೀಗ ಮದುವೆ ಮುಕ್ತಾಯವಾಗಿದ್ದು, ಒಂದೆರಡು ದಿನಗಳಲ್ಲಿ ಕುಟುಂಬಸ್ಥರು ಭಾರತಕ್ಕೆ ಮರಳಲಿದ್ದಾರೆ. ಆದರೆ ವರುಣ್ ಮತ್ತು ಲಾವಣ್ಯಾ ಅವರು ಹನಿಮೂನ್‌ಗೂ ಇಟಲಿಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಅವರು ಯುರೋಪ್‌ ಪ್ರವಾಸ ಮುಗಿಸಿ, ನಂತರ ಭಾರತಕ್ಕೆ ವಾಪಸ್ ಆಗಲಿದ್ದಾರೆ ಎನ್ನಲಾಗಿದೆ.

ಮಿಸ್ಟರ್ ಸಿನಿಮಾದಲ್ಲಿ ವರುಣ್ ತೇಜ್ , ಲಾವಣ್ಯ ಜೋಡಿಯಾಗಿ ನಟಿಸಿದ್ದರು. ಈ ಚಲನಚಿತ್ರವು 2017 ರಲ್ಲಿ ಬಿಡುಗಡೆಯಾಯಿತು. ಈ ಸಿನಿಮಾದ ಶೂಟಿಂಗ್ ವೇಳೆ ಇವರಿಬ್ಬರ ಸ್ನೇಹ ಶುರುವಾಗಿದೆ. ಈ ಚಿತ್ರದ ಶೂಟಿಂಗ್ ಕೂಡ ಇಟಲಿಯಲ್ಲಿ ನಡೆದಿದೆ. ಅಲ್ಲಿ ಅವರ ಪ್ರೀತಿಯ ಬೀಜ ಬಿತ್ತಿತು. ಇವರಿಬ್ಬರ ಪ್ರೀತಿಗೆ ಎರಡೂ ಕುಟುಂಬಗಳು ಗ್ರೀನ್ ಸಿಗ್ನಲ್ ನೀಡಿ ಮದುವೆಯಾದರು.
ಹುಲಿ ಉಗುರು ಅಷ್ಟು ಪವರ್​​ಫುಲ್ಲಾ?; ಯಾಕೆ ಧರಿಸುತ್ತಾರೆ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
