ಹೈದರಾಬಾದ್‌:ಟಾಲಿವುಡ್ ನಟ ವರುಣ್ ತೇಜ್ ಮತ್ತು ಮೋಹಕ ನಟಿ ಲಾವಣ್ಯ ತ್ರಿಪಾಠಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ಶುಕ್ರವಾರದಂದು ನಡೆದ ಖಾಸಗಿ ಸಮಾರಂಭದಲ್ಲಿ ಈ ಜೋಡಿಯು ಪರಸ್ಪರ ಉಂಗುರಗಳನ್ನು ಬದಲಾಯಿಸಿಕೊಂಡಿದ್ದಾರೆ.
ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ವರುಣ್ ತಂದೆ-ತಾಯಿ ಸೇರಿದಂತೆ ನಾಗಬಾಬು ಮತ್ತು ಪದ್ಮಜಾ, ಸಹೋದರಿ ನಿಹಾರಿಕಾ, ಚಿಕ್ಕಪ್ಪ ಚಿರಂಜೀವಿ ಮತ್ತು ಪವನ್ ಕಲ್ಯಾಣ್, ರಾಮ್ ಚರಣ್, ಅಲ್ಲು ಅರ್ಜುನ್, ಸಾಯಿ ಧರಮ್ ತೇಜ್, ಪಂಜಾ ವೈಷ್ಣವ್ ತೇಜ್ ಸೇರಿದಂತೆ ಆಪ್ತರು ಮತ್ತು ಕುಟುಂಬ ಸದಸ್ಯರು ಭಾಗವಹಿಸಿದ್ದರು.
ಇದನ್ನೂ ಓದಿ:ಸಿಎಂ ಸಿದ್ದು ಮಾತಿನ ಎಫೆಕ್ಟ್​! ಸಾಲ ಮರುಪಾವತಿಗಾಗಿ ಧರಣಿ ಕುಳಿತ ಬ್ಯಾಂಕ್​ ಸಿಬ್ಬಂದಿ
ವರುಣ್ ತೇಜ್ ಮತ್ತು ಲಾವಣ್ಯ ಲವ್ ಸ್ಟೋರಿ ಶುರುವಾಗಿದ್ದು ಹೇಗೆ?2017ರಲ್ಲಿ ಮಿಸ್ಟರ್ ಚಿತ್ರದ ಸೆಟ್‌ನಲ್ಲಿ ನಟ ವರುಣ್ ತೇಜ್ ಮೊದಲ ಬಾರಿಗೆ ಲಾವಣ್ಯ ತ್ರಿಪಾಠಿಯನ್ನು ಭೇಟಿಯಾದರು. ಚಿತ್ರದ ಶೂಟಿಂಗ್ ಸಮಯದಲ್ಲಿ ಆಪ್ತರಾದ ಇವರಿಬ್ಬರ ನಡುವೆ ಸ್ನೇಹವು ಬೆಳೆದಿತ್ತು. ಅಂತಿಮವಾಗಿ, ಸ್ನೇಹವು ಪ್ರೀತಿಯಾಗಿ ಅರಳಿ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದರು. ಆದರೆ, ಇಬ್ಬರೂ ತಮ್ಮ ಸಂಬಂಧವನ್ನು ರಹಸ್ಯವಾಗಿಟ್ಟಿದ್ದರು.
ಈ ಜೋಡಿಯ ಎರಡನೇ ಚಿತ್ರವಾದ ಅಂತರಿಕ್ಷಂ 9000 KMPH ಚಿತ್ರೀಕರಣದ ಸಮಯದಲ್ಲಿ ಈ ಜೋಡಿಯ ಸಂಬಂಧದ ಸುದ್ದಿ ಅಂತಿಮವಾಗಿ ಹೊರಬಿದ್ದಿತ್ತು. ಅಂದಿನಿಂದ ಈ ಜೋಡಿಯು ಸಾರ್ವಜನಿಕವಾಗಿ ಪಾರ್ಟಿ ಹಾಗೂ ಹಲವಾರು ಕಾರ್ಯಕ್ರಮಗಳಿಗೆ ಹಾಜರಾಗಲು ಪ್ರಾರಂಭಿಸಿದ್ದರು. ವರುಣ್ ತೇಜ್ ಅವರ ಸಹೋದರಿ ಮತ್ತು ನಟಿ ನಿಹಾರಿಕಾ ಕೊನಿಡೇಲಾ 2020ರಲ್ಲಿ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ ಕೆಲವೇ ಸೆಲೆಬ್ರಿಟಿಗಳಲ್ಲಿ ಲಾವಣ್ಯ ಕೂಡ ಒಬ್ಬರಾಗಿದ್ದರು.ಇವರಿಬ್ಬರ ನಿಶ್ಚಿತಾರ್ಥ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ವರುಣ್ ಮತ್ತು ಲಾವಣ್ಯ ಇನ್ನು ಮದುವೆಯ ದಿನಾಂಕವನ್ನು ಘೋಷಿಸಿಲ್ಲ. ಆದರೆ ಅವರ ಅದ್ದೂರಿ ವಿವಾಹವು ಶೀಘ್ರದಲ್ಲೇ ನಡೆಯಲಿದೆ ಎಂದು ತೆಲುಗು ಚಿತ್ರರಂಗದಲ್ಲಿ ಹೇಳಲಾಗುತ್ತಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 2 =
Remember me
