ಜೈಪುರ:ರಾಜಸ್ಥಾನದ ಕಾಂಗ್ರೆಸ್​ ಸರ್ಕಾರ ಇಬ್ಭಾಗವಾಗಿದೆ. ಅಶೋಕ್​ ಗೆಹ್ಲೋಟ್​ ಮತ್ತು ಸಚಿನ್ ಪೈಲಟ್​ ನಡುವೆ ನೇರ ಜಿದ್ದಾಜಿದ್ದಿ ಶುರುವಾಗಿದೆ. ಸದ್ಯ ಈ ಹೈಡ್ರಾಮಾ ಹೈಕೋರ್ಟ್​ ಮೆಟ್ಟಿಲೇರಿದೆ.
ಇದರ ಬೆನ್ನಲ್ಲೇ ಬಿಜೆಪಿ ಪ್ರಮುಖ ನಾಯಕಿ ವಸುಂಧರಾ ರಾಜೆ ವಿರುದ್ಧ ಆರೋಪವೊಂದು ಕೇಳಿಬಂದಿತ್ತು. ಅಶೋಕ್​ ಗೆಹ್ಲೋಟ್ ಸರ್ಕಾರವನ್ನು ಉಳಿಸಲು ವಸುಂಧರಾ ರಾಜೆ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ಶಾಸಕರನ್ನು ಅವರು ಕರೆದು, ಯಾವ ಕಾರಣಕ್ಕೂ ಸಚಿನ್​ ಪೈಲಟ್​ಗೆ ಸಹಕಾರ ನೀಡಬೇಡಿ ಎಂದು ಹೇಳುತ್ತಿದ್ದಾರೆ ಎಂದು ಬಿಜೆಪಿ ಮೈತ್ರಿ ಪಕ್ಷವಾದ ರಾಷ್ಟ್ರೀಯ ಲೋಕತಾಂತ್ರಿಕ್​ನ ಅಧ್ಯಕ್ಷ ಹನುಮಾನ್​ ಬೇನಿವಾಲ್​ ಅವರು ಆರೋಪಿಸಿದ್ದರು.
ರಾಜಸ್ಥಾನದಲ್ಲಿ ಇಷ್ಟೆಲ್ಲ ಬೆಳವಣಿಗೆಗಳಾದರೂ ಒಂದೂ ಪ್ರತಿಕ್ರಿಯೆ ನೀಡಿರದಿದ್ದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಇದೀಗ ಟ್ವೀಟ್​ ಮೂಲಕ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ:ರಾಮ ಮಂದಿರಕ್ಕೆ ಆಗಸ್ಟ್​ 5ರಂದು ಭೂಮಿಪೂಜೆ; ಟ್ರಸ್ಟ್​ನ ಸಭೆಯಲ್ಲಿ ಪಾಲ್ಗೊಂಡ ಪೇಜಾವರ ಶ್ರೀ ವಿಶ್ವಪ್ರಸನ್ನ ಶ್ರೀಪಾದರು
ಕಾಂಗ್ರೆಸ್​ ಒಳಗೆ ಎದ್ದಿರುವ ವೈಷಮ್ಯದಿಂದಾಗಿ ರಾಜಸ್ಥಾನದ ಜನರು ಕಷ್ಟಪಡುವಂತಾಗಿದೆ. ರಾಜ್ಯದಲ್ಲಿ ಕೊವಿಡ್​-19 ಮಿತಿಮೀರಿದೆ. ಈಗಾಗಲೇ 500 ಜನರು ಸಾವನ್ನಪ್ಪಿದ್ದಾರೆ. 28,000ಕ್ಕೂ ಅಧಿಕ ಪ್ರಕರಣಗಳು ಇವೆ. ಇನ್ನೊಂದೆಡೆ ಮಿಡತೆಗಳು ರೈತರ ಹೊಲಗಳಿಗೆ ದಾಳಿಯಿಟ್ಟು ಬೆಳೆ ನಾಶ ಮಾಡುತ್ತಿವೆ. ಮಹಿಳೆಯರ ವಿರುದ್ಧದ ಹಿಂಸೆ, ದೌರ್ಜನ್ಯ ಅಪರಾಧಗಳು ಹೆಚ್ಚುತ್ತಿವೆ. ರಾಜಸ್ಥಾನ ರಾಜ್ಯಾದ್ಯಂತ ವಿದ್ಯುತ್​ ಸಮಸ್ಯೆ ವಿಪರೀತವಾಗಿದೆ. ಹೀಗಿರುವಾಗ ಕಾಂಗ್ರೆಸ್ ತನ್ನೊಳಗಿನ ದ್ವೇಷದಿಂದ, ಇಡೀ ರಾಜ್ಯದ ಜನರನ್ನು ಸಮಸ್ಯೆಗೆ ಈಡುಮಾಡಿದೆ ಎಂದು ವಸುಂಧರಾ ರಾಜೆ ಆರೋಪಿಸಿದ್ದಾರೆ.
ಅಷ್ಟೇ ಅಲ್ಲ, ಕಾಂಗ್ರೆಸ್​ ತನ್ನೊಳಗೆ ನಡೆಸುತ್ತಿರುವ ಕೆಸರೆರೆಚಾಟಕ್ಕೆ ಬಿಜೆಪಿ ಪಕ್ಷ ಮತ್ತು ಬಿಜೆಪಿ ನಾಯಕರ ಹೆಸರನ್ನು ಎಳೆದು ತರುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್​)
ದಿನಕ್ಕೆ 5 ಕಿ.ಮೀ ಚಲಿಸುವ ಟ್ರಕ್​ ಕೇರಳ ತಲುಪಲು ತೆಗೆದುಕೊಂಡು ಸಮಯ ಕೇಳಿದ್ರೆ ಬೆರಗಾಗ್ತೀರಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
