ನವದೆಹಲಿ:ಕರೊನಾ ಪಿಡುಗಿನಿಂದಾಗಿ ಆಗಿರುವ ಆರ್ಥಿಕ ನಷ್ಟವನ್ನು ತುಂಬಿಕೊಳ್ಳಲು ಸರ್ಕಾರಗಳು ಪೆಟ್ರೋಲ್​ ಮತ್ತು ಡೀಸೆಲ್​ ಮೇಲಿನ ಕರಗಳನ್ನು ಹೆಚ್ಚಿಸಲು ಮುಂದಾಗಿವೆ. ಸದ್ಯ ಜಾಗತಿಕವಾಗಿ ಕಚ್ಚಾ ತೈಲದ ಬೆಲೆ ಕುಸಿದಿರುವ ಕಾರಣ, ಆದಾಯ ಹೆಚ್ಚಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಇದು ಬಹುದೊಡ್ಡ ಅವಕಾಶವಾಗಿ ಪರಿಣಮಿಸಿದೆ.
ಈ ಅವಕಾಶವನ್ನು ಬಳಸಿಕೊಂಡು ದೆಹಲಿ ಸರ್ಕಾರ ಪೆಟ್ರೋಲ್​ ಮತ್ತು ಡೀಸೆಲ್​ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್​) ಶೇ.30 ಹೆಚ್ಚಳ ಮಾಡಿ ಮಂಗಳವಾರ ಆದೇಶ ಹೊರಡಿಸಿದೆ. ಇದರಿಂದಾಗಿ ಪೆಟ್ರೋಲ್​ ಬೆಲೆ ಲೀಟರ್​ಗೆ ರೂ.1.67 ಮತ್ತು ಡೀಸೆಲ್​ ಬೆಲೆ ಲೀಟರ್​ಗೆ ರೂ.7.10 ಹೆಚ್ಚಳವಾಗಿವೆ.
ಇದನ್ನೂ ಓದಿ:ಯುವ ಪತ್ರಕರ್ತೆ ಆತ್ಮಹತ್ಯೆ…ರಾಜಕೀಯ ಮುಖಂಡ ಅರೆಸ್ಟ್​..
ವ್ಯಾಟ್​ ಹೆಚ್ಚಳಕ್ಕೂ ಮುನ್ನ ದೆಹಲಿಯಲ್ಲಿ ಪೆಟ್ರೋಲ್​ ಲೀಟರ್​ಗೆ ರೂ.69.59ನಂತೆ ಮಾರಾಟವಾಗುತ್ತಿತ್ತು. ಈಗ ಅದು ರೂ.71.26 ಆಗಿದೆ. ಅದರಂತೆ ವ್ಯಾಟ್​ ಹೆಚ್ಚಳಕ್ಕೂ ಮುನ್ನ ಲೀಟರ್​ಗೆ ರೂ.62.29ರಂತೆ ಮಾರಾಟವಾಗುತ್ತಿದ್ದ ಡೀಸೆಲ್​ ಬೆಲೆ ಈಗ ರೂ.69.39ಕ್ಕೆ ತಲುಪಿದೆ.
ಈ ಸುತ್ತಿನ ವ್ಯಾಟ್​ ಹೆಚ್ಚಳಕ್ಕೂ ಮುನ್ನ ದೆಹಲಿಯಲ್ಲಿ ಪೆಟ್ರೋಲ್​ ಮೇಲೆ ಶೇ.27 ಮತ್ತು ಡೀಸೆಲ್​ ಮೇಲೆ ಶೇ.16 ವ್ಯಾಟ್​ ಅನ್ನು ವಿಧಿಸಲಾಗುತ್ತಿತ್ತು. ಇದರ ಜತೆಗೆ ಪ್ರತಿ ಕಿಲೋಲೀಟರ್​ಗೆ 250 ರೂ. ಏರ್​ ಏಂಬಿಯೆನ್ಸ್​ ದರವನ್ನು ವಿಧಿಸಲಾಗುತ್ತಿತ್ತು ಎಂದು ದೆಹಲಿ ಸರ್ಕಾರದ ಪ್ರಕಟಣೆ ತಿಳಿಸಿದೆ.
ಹೆಂಡಕ್ಕೆ ಡಬಲ್​ ರೇಟ್​- ಡೋಂಟ್​ ಕೇರ್​, ನಮ್ದು ದೇಶ ಸೇವೆ ಎಂದರು ಮದ್ಯ ಪ್ರೇಮಿಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − twelve =
Remember me
