ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್ ಪ್ರಖರ ಹೋರಾಟಗಾರರಷ್ಟೇ ಅಲ್ಲದೆ ಉತ್ತಮ ಲೇಖಕ, ಕವಿ, ಕಾದಂಬರಿಕಾರ, ನಾಟಕಕಾರ ಕೂಡ ಆಗಿದ್ದರು. ಅವರ ವಿಶಿಷ್ಟ ವ್ಯಕ್ತಿತ್ವದ ಕುರಿತಾದ ಸಂಕ್ಷಿಪ್ತ ಬರಹ ಇಲ್ಲಿದೆ.
ಸ್ವಾತಂತ್ರ್ಯುಜ್ಞದ ಜ್ವಾಲೆ ಧಗಧಗಿಸುವಂತೆ ಮಾಡಿದ ವಿನಾಯಕ ದಾಮೋದರ ಸಾವರ್ಕರ್ (1883-1966) ಜೀವನ ಭಾರತ ಸ್ವಾತಂತ್ರ್ಯ ಸಮರದ ರೋಮಾಂಚಕಾರಿ ಅಧ್ಯಾಯ. ಹುಟ್ಟಿನಿಂದ ದೇಹತ್ಯಾಗದವರೆಗೆ ಎಳ್ಳಷ್ಟೂ ಕಡಿಮೆಯಾಗದ ಪ್ರಖರ ರಾಷ್ಟ್ರಭಕ್ತಿ ಸಾವರ್ಕರ್ ವಿಶೇಷತೆ. ಸ್ವಾತಂತ್ರ ್ಯಳಿಕೆಗಾಗಿ ಯುವಕರನ್ನು ಪ್ರೇರೇಪಿಸಿದ ಅವರು ಸ್ವಾತಂತ್ರ ್ಯ ಉಳಿಕೆಗಾಗಿ, ಸೈನ್ಯದಲ್ಲಿ ಸೇರ್ಪಡೆಯಾಗುವಂತೆ ತರುಣರಿಗೆ ಕರೆ ನೀಡಿದ ವಾಸ್ತವವಾದಿ. ಬಾಲ್ಯದಲ್ಲಿ ಕವಿತೆಗಳಿಂದ, ಕಾಲೇಜು ದಿನಗಳಲ್ಲಿ ಮಿತ್ರಮಂಡಳಿಯಿಂದ, ತಾರುಣ್ಯದಲ್ಲಿ ಅಭಿನವ ಭಾರತದಿಂದ, ಲಂಡನ್​ನಲ್ಲಿ ಭಾರತ ಭವನದ ಮೂಲಕ, ನಂತರ ಹಿಂದೂ ಮಹಾಸಭಾದ ಮೂಲಕ ಅವರು ಸದಾ ಅರ್ಚಿಸಿದ್ದು ಭಾರತಮಾತೆಯನ್ನೇ; ಸ್ತುತಿಸಿದ್ದು ತಾಯಿ ಭಾರತಿಯನ್ನೇ; ಬಯಸಿದ್ದು ಸಶಕ್ತ ಭಾರತದ ನಿರ್ವಣವನ್ನೇ.
ಅಸ್ಪೃಶ್ಯತೆಯ ವಿರುದ್ಧ ಜಾಗೃತಿ ಮೂಡಿಸಿದಾಗ, ಪತಿತಪಾವನ ಮಂದಿರ ಸ್ಥಾಪನೆ ಮಾಡಿದಾಗ, ವಿದೇಶೀ ವಸ್ತುಗಳನ್ನು ಬಹಿರಂಗವಾಗಿ ಸುಟ್ಟುಹಾಕಿದಾಗ, ಭಾರತೀಯ ಭಾಷೆಗಳ ಬಳಕೆಗೆ ಆಗ್ರಹಪಡಿಸಿದಾಗ ಅವರ ದೃಷ್ಟಿಯಿದ್ದುದ್ದು ಹಿಂದೂ ಸಮಾಜದ ಏಳಿಗೆಯಲ್ಲಿಯೇ. ಈ ಕ್ರಾಂತಿವೀರ ಪ್ರಖರ ವಾಗ್ಮಿಯಾಗಿ, ಲೇಖಕನಾಗಿ ಹಾಗೂ ಆಧುನಿಕ ಚಿಂತಕನಾಗಿ ಸಮಾಜಕ್ಕೆ ನೀಡಿದ ಪ್ರಬೋಧನೆ ನಿಜಕ್ಕೂ ವಿಶಿಷ್ಟ.
ಅದ್ಭುತ ವಾಗ್ಮಿ: ಸಾವರ್ಕರ್ ಅದ್ಭುತ ಮಾತುಗಾರರು. ಸುಮ್ಮನಿದ್ದರೆ ಅವರಷ್ಟು ಸೌಮ್ಯವಾದಿ ಯಾರೂ ಇಲ್ಲ. ಕೆಣಕಿದರೆ ಅದು ಉರಿಯುವ ಬೆಂಕಿ. ಅಂಡಮಾನ್​ನಲ್ಲಿ ತಿಂಗಳುಗಟ್ಟಲೆ ಅವರು ಅಕ್ಷರಶಃ ಮಾತಾಡಿರಲಿಲ್ಲ. ಜೇಲರ್ ಕೆಣಕಿದಾಗ-ಭಾರತವನ್ನು ಹಳಿದಾಗ ಮಾತ್ರ ಅವರ ಉಗ್ರ ರಾಷ್ಟ್ರಭಕ್ತಿಯ ಕಾವು ಸುಟ್ಟುಬಿಡುವಷ್ಟಾಗುತ್ತಿತ್ತು. ಅದೇ ಸಾವರ್ಕರ್ ಬಿಡುಗಡೆಯಾಗಿ ಜನರತ್ತ ತೆರಳಿದಾಗ ಮಾತಾಡಿದರು, ಮನಸ್ಸು ಬಿಚ್ಚಿ ಮಾತಾಡಿದರು. ಅವರೊಬ್ಬ ಅದ್ಭುತ ವಾಗ್ಮಿ ಎಂಬ ಉದ್ಗಾರ ಹೊರಬರುವಷ್ಟು. ಅವರು ನಾಯಕನಂತೆ ಜನಸಾಗರವನ್ನು ತಳ್ಳಿಕೊಂಡು ವೇದಿಕೆಗೆ ಬರುತ್ತಿದ್ದರು. ಅವರು ಮಾತಿನಲ್ಲಿಯೇ ಮುಖವಾಡಗಳನ್ನು ಕಳಚಿ ನಗ್ನಸತ್ಯಗಳನ್ನು ಸಭಿಕರ ಎದುರಿನಲ್ಲಿ ಮಂಡಿಸುತ್ತಿದ್ದರು. ಅದು ಮರಾಠಿ ಕವಿ ಸಮ್ಮೇಳನದ ಸಂದರ್ಭ. ‘ಒಂದಷ್ಟು ಕಾಲ ಪ್ರಣಯಸಾಹಿತ್ಯವನ್ನು ಪಕ್ಕಕಿಡಿ. ದೇಶಕಟ್ಟಲು ಬನ್ನಿ. ಪೆನ್ನುಗಳನ್ನು ಚೆಲ್ಲಿ ಗನ್ನುಗಳನ್ನು ಹಿಡಿಯಿರಿ’ ಎಂಬ ಖಾರವಾದ ಮಾತುಗಳನ್ನಾಡಿದರು. ಹಾಗೆಂದು ಅವರು ಕವಿಗಳನ್ನು ತುಚ್ಛೀಕರಿಸಿದರೆಂದಲ್ಲ.
ಪ್ರಖರ ವಿಚಾರವಾದಿ: ಮಾನವನ ಒಳಿತಿಗೆ ಸಹಾಯ ಮಾಡುವಂತಹುದೆಲ್ಲ ಒಳಿತಾದುದೇ, ಅವನ ಮುನ್ನಡೆಗೆ ತಡೆಯಾದುದೆಲ್ಲ ಕೆಟ್ಟದ್ದು ಎಂದು ವಾದಿಸುತ್ತಿದ್ದ ಸಾರ್ವಕರ್ ವಿಜ್ಞಾನವನ್ನು ಅಪ್ಪಿಕೊಂಡಿದ್ದರು ಹಾಗೂ ಮೂಢನಂಬಿಕೆಗಳ ಬದ್ಧವೈರಿಯಾಗಿದ್ದರು. ‘ಬ್ರಿಟಿಷರು ಎಲ್ಲವನ್ನೂ ಪುಡಿಪುಡಿ ಮಾಡಲು ನಾವು ಅವಕಾಶ ಮಾಡಿಕೊಟ್ಟಿದ್ದೇವೆ, ಆದರೆ ನಮ್ಮಲ್ಲಿನ ಮೂಢನಂಬಿಕೆಗಳನ್ನು ಮಾತ್ರ ಪುಡಿಮಾಡಲು ಅವರಿಗೆ ಬಿಟ್ಟುಕೊಟ್ಟಿಲ್ಲ!’ ಎಂದು ವ್ಯಂಗ್ಯವಾಡುತ್ತಿದ್ದರು. ‘ಭೂಕಂಪವಾದರೆ ಸಾರ್ವಜನಿಕ ಪ್ರಾರ್ಥನೆ ಮಾಡುತ್ತೇವೆ, ದೇಶಭಕ್ತನೊಬ್ಬ ಸಾವು-ಬದುಕಿನ ನಡುವೆ ಹೋರಾಡುತ್ತಿರಲಿ ಉರುಳುಸೇವೆ ಮಾಡುತ್ತೇವೆ. ವಿದೇಶೀ ಆಕ್ರಮಣಗಳು ನಮ್ಮ ಮೇಲಾದರೂ ಕುರಿಯನ್ನು ಬಲಿಕೊಡುತ್ತೇವೆ. ಇವುಗಳಿಂದಲೇ ಎಲ್ಲ ಪರಿಹಾರವಾಗಿಬಿಡುತ್ತದೆಂದು ಭಾವಿಸಿಬಿಡುತ್ತೇವೆ’ ಎಂದು ತರಾಟೆಗೆ ತೆಗೆದುಕೊಳ್ಳುತ್ತಿದ್ದರು.
ಭಿನ್ನ ಚಿಂತನೆಯ ಲೇಖಕ: ಲೇಖಕರಾಗಿಯೂ ಸಾವರ್ಕರರ ಸಾಧನೆ ಅಪ್ರತಿಮ. ಖಜಛಿ Mಚ್ಚಜಜ್ಞಿಛಿ, ಎಟಛ ಟ್ಟ ಎ್ಞಟಡಿಛಛ್ಟಿ, ಎಟಛ ಟ್ಛ Mಚ್ಞ ಚ್ಞಛ ಔಟ್ಟಛ ಟ್ಛ ಖ್ಞಿಜಿಡಛ್ಟಿಠಛಿ, ಗಟಞಛ್ಞಿ’ಠ ಕ್ಝಚ್ಚಛಿ ಜ್ಞಿ Mಚ್ಞ್ಠಞ್ಟ್ಠಜಿ, ಗಟಞಛ್ಞಿ’ಠ ಆಛಿಚ್ಠಠಿಢ ಚ್ಞಛ ಈಠಿಢ, ಖಜಛಿ ಇಟಡಿ ನಂತಹ ಅವರ ಲೇಖನಗಳು ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದವು. ರತ್ನಾಗಿರಿಯ ಜೈಲಿನಲ್ಲಿದ್ದಾಗ ಬರೆದ ‘ಹಿಂದೂ ಪದ ಪಾದಶಾಹಿ’ ಶಿವಾಜಿಯ ನಂತರ ಮರಾಠಾ ಇತಿಹಾಸವೇ ಇಲ್ಲ ಎಂದವರಿಗೆ ತೀಕ್ಷ್ಣ ಉತ್ತರವಾಗಿತ್ತು. ‘ಶಿವಾಜಿಯ ನಂತರ ಮರಾಠಾ ಇತಿಹಾಸ ಆರಂಭವಾಗಿದೆ’ ಎಂದು ಗಟ್ಟಿಧ್ವನಿಯಲ್ಲಿ ಹೇಳಿದ ಸಾವರ್ಕರ್ ಅದನ್ನು ಕೃತಿಯಲ್ಲಿ ಬಿಂಬಿಸಿದ್ದರು. ಸಾವರ್ಕರರ ‘ನನ್ನ ಜೀವಾವಧಿಯ ಶಿಕ್ಷೆ’ಯಂತೂ ಅದ್ಭುತ ಕೃತಿ. ಕೈದಿಗಳು ಅನುಭವಿಸುತ್ತಿದ್ದ ಯಮಯಾತನೆಗಳು, ತಾವು ಸ್ವತಃ ಅವುಗಳನ್ನು ಅನುಭವಿಸಿದ್ದು, ರಕ್ತದ ಕಣ್ಣೀರನ್ನು ಹರಿಸಿದ್ದು, ಮೊಳೆಯಿಂದ ಮಹಾಕಾವ್ಯವನ್ನು ಗೋಡೆಯ ಮೇಲೆ ಕೆತ್ತಿದ್ದು, ಇವೆಲ್ಲ ಮಹಾಕೃತಿಯ ಸುಧೆ! ಸಾವರ್ಕರ್ ಕಾದಂಬರಿಕಾರರೂ ಆಗಿದ್ದರು. ‘ಮೋಪ್ಲಾ ದಂಗೆ’ ಮತ್ತು ‘ಯಾತ್ರೆ’ ಎಂಬ ಎರಡು ಕಾದಂಬರಿಗಳನ್ನು ಅವರು ಬರೆದಿದ್ದಾರೆ. ಮೊದಲನೆಯದು ಮೋಪ್ಲಾಗಳ ದಂಗೆಯ ಎಳೆ-ಎಳೆಯನ್ನು ವಿವರಿಸಿದ್ದರೆ, ಎರಡನೆಯದು ಅಂಡಮಾನ್ ಯಾತ್ರೆಯ ಮೈನವಿರೇಳಿಸುವ ವಿವರಗಳನ್ನು ಒಳಗೊಂಡಿತ್ತು. ಸಾವರ್ಕರ ರ ಪ್ರಸಿದ್ಧ ‘ಕಮಲಾ’ ಕಾವ್ಯವನ್ನೊಳಗೊಂಡ ರಣಫೂಲ್-ಕಾಡಿನ ಹೂವುಗಳು-ಕವನ ಸಂಕಲನವೂ ಪ್ರಕಟವಾಗಿತ್ತು.

ವಿಶಿಷ್ಟ ವ್ಯಕ್ತಿತ್ವ: ನಾಟಕಕಾರರಾಗಿಯೂ ಸಾವರ್ಕರರದ್ದು ಅಪ್ರತಿಮ ಸಾಧನೆ. ಮೊದಲ ನಾಟಕ ‘ವಿಶ್ವಾಸ’- ದಲಿತ ವರ್ಗದವರ ಸಮಸ್ಯೆಗಳು, ಮುಖ್ಯವಾಹಿನಿಯಲ್ಲಿ ಅವರು ಸೇರುವ ಬಗೆ ಇವುಗಳ ಮೇಲೆ ಕೇಂದ್ರೀಕರಿಸಿದ್ದಾಗಿತ್ತು. ಭಗವಾನ್ ಬುದ್ಧನ ಹಿನ್ನೆಲೆಯಲ್ಲಿ ರಚಿಸಿದ ನಾಟಕದಲ್ಲಿ ಅವರು ಅಹಿಂಸೆಯ ಜಾಲವನ್ನು ತೊಡೆದುಹಾಕಿ, ದೇಶದ ರಕ್ಷಣೆ ಖಡ್ಗ ಹಿಡಿದ ವೀರರಿಂದ ಎಂಬುದನ್ನು ತೋರಿಸಿದ್ದಾರೆ. ಈ ನಾಟಕ ಸಾಕಷ್ಟು ಪ್ರಸಿದ್ಧಿ ಪಡೆದಿತ್ತು. ಪಾಣಿಪತ್ ಕದನದ ನಂತರ ಮರಾಠಾ ಇತಿಹಾಸದ ‘ಉತ್ತರ ಕ್ರಿಯಾ’ ನಾಟಕವನ್ನೂ ಬರೆದಿದ್ದರು. ಪ್ರಖರ ವಾಗ್ಮಿಯಾಗಿ, ಚತುರ ನಾಟಕಕಾರರಾಗಿ, ತೀಕ್ಷ ್ಣ ಚಿಂತಕರಾಗಿ, ಆಳವಾದ ಚಿಂತನೆಗಳ ಕೃತಿ ರಚಿಸಿದ ಸಾವರ್ಕರ್ ತಾಯಿ ಭಾರತಿಗೆ ಸುಗಂಧ ಪುಷ್ಪಗಳನ್ನು ಅರ್ಪಿಸಿದ ಧ್ಯೇಯಜೀವಿ. ಅವರ ತ್ಯಾಗ ಹಾಗೂ ಸಮರ್ಪಣೆಯನ್ನು ಸ್ಮರಿಸಿಕೊಂಡು ಇಂದಿನ ಪೀಳಿಗೆ ರಾಷ್ಟ್ರನಿಷ್ಠರಾಗುವ, ದೇಶಸೇವೆಗಾಗಿ ಜೀವನದ ಒಂದಿಷ್ಟು ಭಾಗ ಮೀಸಲಿಡುವ ಅಗತ್ಯವಿದೆ.
(ಸೌಜನ್ಯ: ಚಕ್ರವರ್ತಿ ಸೂಲಿಬೆಲೆಯವರ ‘ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯ ವೀರ ಸಾವರ್ಕರ್’ ಕೃತಿ)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
