ಉತ್ತಪ್ರದೇಶ:ಶ್ರೀರಾಮ ಮಂದಿರ ದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪಣೆ ವಿಧಿವಿಧಾನ ನೆರವೇರಿಸಿದ್ದ ವಾರಣಾಸಿಯ ಅರ್ಚಕ ಪಂಡಿತ್‌ ಲಕ್ಷ್ಮೀಕಾಂತ್‌ ಮಧುರಾನಾಥ್‌ ದೀಕ್ಷಿತ್‌ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ದೀಕ್ಷಿತ್ ಅವರು ವೈದಿಕ ಪರಂಪರೆಯ ವಿಧಿಬದ್ಧ ಆಚರಣೆಗೆ ಹೆಸರುವಾಸಿಯಾದವರು. ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗಿಯಾದ 121 ವಿದ್ವಾಂಸರ ತಂಡವನ್ನು ಇವರು ಮುನ್ನಡೆಸಿದವರು. ಅವರಿಗೆ 86 ವರ್ಷ ವಯಸ್ಸಾಗಿದ್ದು, ವಯೋಸಹಜ ಖಾಯಿಲೆಯಿಂದ ವಿಧಿವಶರಾಗಿದ್ದಾರೆ.
ಪಂಡಿತ್ ಲಕ್ಷ್ಮೀಕಾಂತ್ ಮಥುರಾನಾಥ್ ದೀಕ್ಷಿತ್ ಅವರಿಗೆ 86 ವರ್ಷ ವಯಸ್ಸು. ವೈದಿಕ ಪಂಡಿತರಾದ ದೀಕ್ಷಿತ್ ಅವರು ಮೂಲತಃ ಉತ್ತರ ಪ್ರದೇಶದ ವಾರಣಾಸಿಯವರು.
देश के मूर्धन्य विद्वान और साङ्गवेद विद्यालय के यजुर्वेदाध्यापक लक्ष्मीकान्त दीक्षित जी के निधन का दुःखद समाचार मिला। दीक्षित जी काशी की विद्वत् परंपरा के यशपुरुष थे। काशी विश्वनाथ धाम और राम मंदिर के लोकार्पण पर्व पर मुझे उनका सान्निध्य मिला। उनका निधन समाज के लिए अपूरणीय क्षति…
— Narendra Modi (@narendramodi)June 22, 2024

ದೀಕ್ಷಿತ್‌ ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್‌ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ದೇಶದ ಖ್ಯಾತ ವಿದ್ವಾಂಸ ಮತ್ತು ಸಾಂಗ್ವೇದ ವಿದ್ಯಾಲಯದ ಯಜುರ್ವೇದ ಶಿಕ್ಷಕ ಲಕ್ಷ್ಮೀಕಾಂತ್ ದೀಕ್ಷಿತ್ ಜಿ ಅವರ ನಿಧನದ ದುಃಖದ ಸುದ್ದಿ ತಿಳಿದು ಅತೀವ ದುಃಖ ಆಗಿದೆ. ದೀಕ್ಷಿತ್ ಜಿ ಕಾಶಿಯ ವಿದ್ವತ್ ಪರಂಪರೆಯ ಹೆಸರಾಂತ ವ್ಯಕ್ತಿ. ಕಾಶಿ ವಿಶ್ವನಾಥ ಧಾಮ ಮತ್ತು ರಾಮಮಂದಿರದ ಉದ್ಘಾಟನಾ ದಿನದಂದು ನನಗೆ ಅವರ ಜೊತೆ ಕಾಲ ಕಳೆಯುವ ಅವಕಾಶ ಸಿಕ್ಕಿತು. ಅವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 9 =
Remember me
