ವಾರಣಾಸಿ:ಸಾಕ್ಷಾತ್ ಶಿವನ ಅವತಾರವಾಗಿರುವ ಸದ್ಗುರುಗಳನ್ನು ಭಕ್ತರು ಭಗವಂತನಂತೆಯೇ ಪೂಜಿಸುವ ಸನಾತನ ಪದ್ಧತಿ ಇದ್ದು, ಈ ಹಿನ್ನೆಲೆಯಲ್ಲಿ ಶನಿವಾರ ಕಾಶಿ ಪಟ್ಟಣದಲ್ಲಿ ಐತಿಹಾಸಿಕ ಜಗದ್ಗುರು ಪಂಚ ಪೀಠಾಧೀಶ್ವರರ ಅಡ್ಡಪಲ್ಲಕ್ಕಿಯ ಶೋಭಾಯಾತ್ರೆ ವೈಭವದಿಂದ ಜರುಗಿದೆ ಎಂದು ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.
ಅಡ್ಡಪಲ್ಲಕ್ಕಿ ವಿಶೇಷ:ಜಗತ್ತಿನ ಮಾಯೆಯ ಕಾರಣಕ್ಕಾಗಿ ಅಪ್ರತ್ಯಕ್ಷನಾಗಿರುವ ಭಗವಂತ ಭಕ್ತರ ಭಕ್ತಿ ಸಿದ್ಧಿಗಾಗಿ ಗುರುವಿನ ರೂಪದಲ್ಲಿ ಈ ಭೂಮಿ ಮೇಲೆ ಅವತರಿಸಿದ್ದಾನೆ. ಆ ಕಾರಣಕ್ಕಾಗಿ ಜಗತ್ತಿನ ಎಲ್ಲ ಜಾತಿ, ಮತದವರು ಗುರುವಿಗೆ ಪೂಜ್ಯ ಸ್ಥಾನ ನೀಡಿದ್ದಾರೆ. ಅದರಲ್ಲೂ ವಿಶೇಷವಾಗಿ ವೀರಶೈವ ಧರ್ಮದಲ್ಲಿ ಶಿವನಿಗಿಂತ ಗುರುವೇ ಶ್ರೇಷ್ಠವೆಂದು ಅಷ್ಟಾವರಣದಲ್ಲಿ ಗುರುವಿಗೆ ಪ್ರಸನ್ನ ಸ್ಥಾನ ನೀಡಲಾಗಿದೆ. ಅಂತಹ ಗುರುವನ್ನು ಪೂಜಿಸುವ ವಿವಿಧ ಪದ್ಧತಿಗಳಲ್ಲಿ ಅಡ್ಡಪಲ್ಲಕ್ಕಿ ಮಹೋತ್ಸವ ವಿಶೇಷವಾಗಿದೆ. 1918ರಲ್ಲಿ ಕಾಶಿ ಕ್ಷೇತ್ರದಲ್ಲಿ ಜಗದ್ಗುರು ಪಂಚ ಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ನಡೆದಿತ್ತು. 102 ವರ್ಷಗಳ ಬಳಿಕ ಐತಿಹಾಸಿಕ ಕಾರ್ಯಕ್ರಮ ಇದೀಗ ಜರುಗಿದೆ. ವಿಶೇಷವಾಗಿ ಕಲಬುರಗಿ ಜಿಲ್ಲೆ ಶಾಖಾಪುರ ಹಿರೇಮಠದ ಶ್ರೀ ಷಟಸ್ಥಲ ಬ್ರಹ್ಮಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ವಿಶೇಷ ರೈಲಿನ ಮೂಲಕ 2500 ಕರ ಸೇವಕರು ಆಗಮಿಸಿ ಪಂಚ ಪೀಠಗಳ ಪಂಚ ಬಣ್ಣದ ವಸ್ತ್ರಧಾರಣೆ ಮಾಡಿಕೊಂಡು ಈ ಬಾರಿ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. ಸುಮಾರು 4 ಕಿ.ಮೀ. ದೂರ ಸಾಗಿದ ಯಾತ್ರೆಯಲ್ಲಿ 10 ಸಾವಿರಕ್ಕೂ ಹೆಚ್ಚು ಭಕ್ತರು, 100ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಿದ್ದವು. 1918ರಲ್ಲಿ ನಡೆದ ಅಡ್ಡಪಲ್ಲಕ್ಕಿ ಮಹೋತ್ಸವ ಸಂದರ್ಭ ಕಾಶಿ ಗುರುಕುಲಕ್ಕೆ ಶ್ರೀ ಜಗದ್ಗುರು ವಿಶ್ವಾರಾಧ್ಯ ಗುರುಕುಲ ಎಂದು ನಾಮಕರಣ ಮಾಡಲಾಗಿತ್ತು. ಅದರ ಶತಮಾನೋತ್ಸವ ನಿಮಿತ್ತವಾಗಿ ಕಳೆದ ಮಕರ ಸಂಕ್ರಾಂತಿಯಿಂದ ಮಹಾಶಿವರಾತ್ರಿವರೆಗೆ 36 ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ‘ವೀರಶೈವ ಮಹಾಕುಂಭ’ ಎಂಬ ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳು ನಿತ್ಯ ನಡೆಯುತ್ತಿವೆ. ಭಾನುವಾರ ಸಮಾರೋಪ ಜರುಗಲಿದ್ದು, ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸಿದ್ದಾರೆ.
ಮೊಬೈಲ್ ಆಪ್ ಬಿಡುಗಡೆ
ವೀರಶೈವ ಮಹಾಕುಂಭದ ಸಮಾರೋಪ ಭಾನುವಾರ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಕರ್ನಾಟಕ ಸಿಎಂ ಯಡಿಯೂರಪ್ಪ, ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಸಿಎಂ ಯೋಗಿ ಆದಿತ್ಯನಾಥ್ ಪಾಲ್ಗೊಳ್ಳಲಿದ್ದಾರೆ. ವೀರಶೈವ ಧರ್ಮ ಗ್ರಂಥ ‘ಸಿದ್ಧಾಂತ ಶಿಖಾಮಣಿ’ಯನ್ನು 19 ಭಾಷೆಗಳಿಗೆ ಅನುವಾದಿಸಿರುವ ನೂತನ ಮೊಬೈಲ್ ಆಪ್ ಅನ್ನು ಪ್ರಧಾನಿ ಬಿಡುಗಡೆ ಮಾಡಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 7 =
Remember me
