ವಾರಾಣಸಿ:ವೀರಶೈವ ಧರ್ಮವು ವಿಶ್ವವ್ಯಾಪಕವಾಗಿದ್ದು, ಇದರೊಳಗಿರುವ ವಿಶಾಲತತ್ವದ ಪ್ರಭಾವಕ್ಕೆ ವಿದೇಶಿಯರೂ ಒಳಗಾಗಿದ್ದಾರೆ ಎಂದು ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಶೀ ಜಂಗಮವಾಡಿ ಮಠದಲ್ಲಿ ಹಮ್ಮಿಕೊಂಡಿರುವ ಕಾಶೀ ಪೀಠದ ನೂತನ ಜಗದ್ಗುರು ಪಟ್ಟಾಭಿಷೇಕ ಮಹೋತ್ಸವದ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದರು. ಕಾಶೀ ಪೀಠದ ನೂತನ ಜಗದ್ಗುರು ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ 41 ದಿನಗಳ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಆ ಹಿನ್ನೆಲೆಯಲ್ಲಿ ಪ್ರಾಂತ್ಯವಾರು ವೀರಶೈವ ಮಹಾಸಮ್ಮೇಳನವನ್ನು ಆಯೋಜಿಸಲಾಗಿದೆ. ಅಂತಿಮವಾಗಿ ವಿಶ್ವ ವೀರಶೈವ ಮಹಾಸಮ್ಮೇಳನವನ್ನು ಮೇ.13ರಂದು ಹಮ್ಮಿಕೊಳ್ಳಲಾಗಿದ್ದು, ಅಂದು ನಡೆಯುವ ಕಾರ್ಯಕ್ರಮದಲ್ಲಿ ಜಗತ್ತಿನ ವಿವಿಧ ದೇಶಗಳಲ್ಲಿರುವ ವೀರಶೈವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಆಂಧ್ರ-ತೆಲಂಗಾಣ ಪ್ರಾಂತ್ಯದ ವೀರಶೈವ ಮಹಾ ಸಮ್ಮೇಳನವನ್ನು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವೀರಶೈವ ಧರ್ಮ ವಿಶ್ವವ್ಯಾಪಕವಾಗಿದ್ದು, ಇದರಲ್ಲಿನ ವಿಶಾಲತತ್ವ, ಸಂದೇಶಗಳನ್ನು ವಿಸ್ತಾರಗೊಳಿಸುವಲ್ಲಿ ಕಾಶೀ ಜಗದ್ಗುರುಗಳ ಪಾತ್ರ ಹಿರಿದು ಎಂದರು.
ಭಾರತದ ಸನಾತನ ಹಿಂದು ಧರ್ಮದ ಧಾರ್ವಿುಕ ರಾಜಧಾನಿಯಾಗಿರುವ ಕಾಶಿಯಲ್ಲಿ ಜಂಗಮವಾಡಿ ಮಠವು ಅತ್ಯಂತ ಪುರಾತನವಾಗಿದ್ದು, ಶ್ರೀಪೀಠದ ನೂತನ ಜಗದ್ಗುರುಗಳ ಪಟ್ಟಾಭಿಷೇಕವು ಪರಂಪರೆಯನ್ನು ಮುನ್ನಡೆಸುವ ಬಹುದೊಡ್ಡ ಧಾರ್ವಿುಕ ಉತ್ಸವ ಎಂದು ಬಣ್ಣಿಸಿದರು.
ಮಾಧ್ಯಮ ಕ್ಷೇತ್ರದ ಮೂಲಕ ಭಾರತದ ಉತ್ಕೃಷ್ಟ ಧರ್ಮ-ಸಂಸ್ಕೃತಿಯನ್ನು ಪ್ರಸಾರ ಮಾಡುತ್ತಿರುವ ಡಾ.ವಿಜಯ ಸಂಕೇಶ್ವರ ಅವರಿಗೆ ಕಾಶೀ ಜ್ಞಾನಸಿಂಹಾಸನ ಮಹಾಪೀಠದಿಂದ ಧರ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಭೂತಿಪುರ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮತ್ತು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರಿಗೆ ಶಿಷ್ಯಹೃತ್ಪದ್ಮ ಭಾಸ್ಕರ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಡಾ. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಶ್ರೀಮತಿ ಲಲಿತಾ ಸಂಕೇಶ್ವರ, ಬೇಬಿಮಠದ ಶ್ರೀಗಳು, ಆಂಧ್ರ ಮತ್ತು ತೆಲಂಗಾಣದ ವೀರಶೈವ ಮುಖಂಡರು ಉಪಸ್ಥಿತರಿದ್ದರು. ದಿಗ್ವಿಜಯ ನ್ಯೂಸ್ ಕಾರ್ಯಕ್ರಮ ನಿರ್ವಪಕ ಪ್ರಶಾಂತ ರಿಪ್ಪನ್ ಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬೇಸಿಗೆಯಲ್ಲಿ ವಾಹನದ ಪೆಟ್ರೋಲ್ ಟ್ಯಾಂಕ್ ಫುಲ್ ಮಾಡಿದ್ರೆ ಬ್ಲಾಸ್ಟ್​ ಆಗುತ್ತಾ?

ಕೋವಿಡ್ ಮುನ್ನೆಚ್ಚರಿಕೆ; ಆರೋಗ್ಯ ಇಲಾಖೆಯಿಂದ ಹೊಸ ಆದೇಶ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen − six =
Remember me
