|ರಾಘವ ಶರ್ಮ ನಿಡ್ಲೆನವದೆಹಲಿ
ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದ ಧರ್ಮಸ್ಥಳದ ಧರ್ವ ಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಗುರುವಾರ ಬೆಳಗ್ಗೆ 11 ಗಂಟೆಗೆ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಾ.ಹೆಗ್ಗಡೆ, ನಂತರ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಿದ್ದಕ್ಕಾಗಿ ಧನ್ಯವಾದ ತಿಳಿಸಿದರು. ಇದೇ ವೇಳೆ ಧರ್ಮಸ್ಥಳ ದೇಗುಲದ ಪ್ರಸಾದವನ್ನೂ ನೀಡಿದರು. ಬಳಿಕ ವಿಜಯವಾಣಿ ಜತೆಗೆ ಮಾತನಾಡಿದ ಡಾ.ಹೆಗ್ಗಡೆ, ಮುಂದಿನ ಕರ್ತವ್ಯ, ಗೌರವ ಸದಸ್ಯತ್ವ ಸೇರಿ ಹಲವು ವಿಷಯಗಳ ಬಗ್ಗೆ ಅನಿಸಿಕೆ ಹಂಚಿಕೊಂಡರು.
ಕಾರ್ಯಕರ್ತರಿಗೆ, ಕ್ಷೇತ್ರ ಹಾಗೂ ನನಗೆ ಸಿಕ್ಕ ದೊಡ್ಡ ಗೌರವ ಎಂದು ಭಾವಿಸುತ್ತೇನೆ. ದೇಶಕ್ಕೆ ಹಿತ ಎನಿಸುವ ವಿಷಯಗಳ ಬಗ್ಗೆ ರ್ಚಚಿಸಿ, ಮಂಡಿಸುವ ಉದ್ದೇಶವಿದೆ. ರಾಷ್ಟ್ರದ ರಾಜಧಾನಿಗೆ ಬಂದು, ಸಂಸತ್ತಿನಲ್ಲಿ ಅಮೂಲ್ಯವಾದ ಸಮಯ ಕಳೆದಿದ್ದೇನೆ. ಕರ್ತವ್ಯಗಳ ಬಗ್ಗೆ ಸದಾ ಜಾಗೃತನಾಗಿರಬೇಕು ಎಂದನಿಸುತ್ತದೆ.
ಪ್ರಧಾನ ಮಂತ್ರಿ ನಮ್ಮನ್ನೆಲ್ಲ ಇಷ್ಟು ಸೂಕ್ಷ್ಮವಾಗಿ ಗಮನಿಸುತ್ತಾರಾ ಎಂದು ಆಶ್ಚರ್ಯವಾಗುತ್ತದೆ. ಗುರುತಿಸಿ ಗೌರವ ನೀಡಿರುವುದು ಹೆಮ್ಮೆ ಎನಿಸಿದೆ.
ಖಂಡಿತವಾಗಿ. ಮೊದಲ ದಿನವೇ ಈಶಾನ್ಯ ಭಾರತ, ಬಿಹಾರ, ಒಡಿಶಾ ಸೇರಿ ಹಲವು ರಾಜ್ಯಗಳ ಸಂಸದರು ಸಿಕ್ಕಿದರು ಮತ್ತು ಅಲ್ಲಿ ರುಡ್​ಸೆಟ್ ಸಂಸ್ಥೆ ಚೆನ್ನಾಗಿ ಕೆಲಸ ಮಾಡುತ್ತಿರುವ ಬಗ್ಗೆ ತಿಳಿಸಿದರು. ಈ ಕಾರ್ಯಕ್ರಮಗಳ ವಿಸ್ತರಣೆಯಾಗಬೇಕು ಎಂಬ ಆಶಯವಿದೆ. ಈ ಮಾದರಿಯನ್ನು ಬೇರೆಯವರಿಗೆ ನೀಡದಿದ್ದರೆ ನಾವು ಸ್ವಾರ್ಥಿಗಳಾಗುತ್ತೇವೆ. ನನಗಿನ್ನೂ ಸಂಸತ್ತು ಹೊಸತು. ರಾಜ್ಯಸಭೆ ಮೂಲಕ ಬಂದಿದ್ದೇನಷ್ಟೇ. ಹೀಗಾಗಿ, ಇವೆಲ್ಲವನ್ನು ಹೇಗೆ ಸಾಧಿಸಬೇಕು ಎನ್ನುವುದನ್ನು ಇಲ್ಲಿ ಅನುಭವ ಸಿಕ್ಕ ಬಳಿಕ ವಿವರಣೆ ನೀಡಬಲ್ಲೆ.
ಸವಾಲುಗಳು ಸಮಸ್ಯೆ ಎನಿಸಲಿಲ್ಲ. ಗುರುನಾನಕ್, ಪೈಗಂಬರ, ಬುದ್ಧ, ಮಹಾವೀರ ಎಲ್ಲರೂ ಹಲವು ರೀತಿಯ ಹಿಂಸೆಗೊಳಪಟ್ಟಿದ್ದಾರೆ. ಹಿಂಸೆಗೊಳಪಡದೆ ಅವರ್ಯಾರು ಪ್ರಖ್ಯಾತರಾಗಿಲ್ಲ. ಚಿನ್ನ ಬೆಂಕಿಗೆ ಹಾಕಿದಾಗ ಅದು ಮತ್ತಷ್ಟು ಶುದ್ಧವಾಯ್ತೇ ಹೊರತು ಸುಟ್ಟು ಹೋಗಲಿಲ್ಲ. ಹಾಗಾಗಿ, ಇವೆಲ್ಲ ನಗಣ್ಯ. ನೀವು ಹೇಳಿದಂತೆ, ಇದು ಕಿರೀಟಕ್ಕೆ ಸಿಕ್ಕ ಗರಿ ಎಂದೇ ಭಾವಿಸುತ್ತೇನೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಜನಪರ ಯೋಜನೆಗಳನ್ನು ಜಾರಿ ಮಾಡಿದ್ದರೂ ಅವುಗಳ ಬಗ್ಗೆ ಜನರು ಸರಿಯಾದ ಮಾಹಿತಿ ಪಡೆದುಕೊಳ್ಳುತ್ತಿಲ್ಲ. ಈ ಬೇಸರ ನನ್ನನ್ನು ಅನೇಕ ಬಾರಿ ಕಾಡುತ್ತದೆ. ಸರ್ಕಾರಿ ಕಾರ್ಯಕ್ರಮಗಳ ಪರಿಚಯ ಮಾಡಿಕೊಳ್ಳುವ ಜತೆಗೆ ಬಡತನ ನಿಮೂಲನೆಗೆ ಸರ್ಕಾರವನ್ನು ಮಾತ್ರ ಅವಲಂಬಿಸುವುದಲ್ಲ. ನಾವೂ ಅದರಲ್ಲಿ ಭಾಗಿದಾರರಾಗಿ ಇದನ್ನು ಹೋಗಲಾಡಿಸಬೇಕು.
ನೇರವಾಗಿ ನಡೆದ ಆಯ್ಕೆ. ಪೂರ್ವ ಮಾಹಿತಿ ಇರಲಿಲ್ಲ. ನಮ್ಮನ್ನು ಆಯ್ಕೆ ಮಾಡಿದ್ದಾರೆ ಎಂಬ ಸಂದೇಶ ಬಂದಾಗಲೇ ವಿಷಯ ಗೊತ್ತಾಯ್ತು. ನಾವು ಯಾವತ್ತೂ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ. ಪಕ್ಷೇತರರಾಗಿ ಗೌರವ ಸದಸ್ಯತ್ವ ಪಡೆದುಕೊಂಡಿದ್ದೇನೆ ಮತ್ತು ಈ ಗೌರವ ಸದಸ್ಯತ್ವಕ್ಕೆ ಸಾಕಷ್ಟು ಸ್ವಾತಂತ್ರ್ಯವಿರುತ್ತದೆ ಎಂದು ಸದಸ್ಯತ್ವ ಸ್ವೀಕರಿಸಿದ್ದೇನೆ.
ಮೊದಲು ಅರ್ಜಿ ಹಾಕಿ ಪ್ರಶಸ್ತಿಗಳು ಬರುತ್ತಿದ್ದವು. ಐದಾರು ವರ್ಷ ವ್ಯಾಪಕ ಪ್ರಯತ್ನವನ್ನೂ ಮಾಡುತ್ತಿದ್ದರು. ಕಳೆದ ಐದಾರು ವರ್ಷಗಳಲ್ಲಿ ಆಯ್ಕೆಯ ಮಾನದಂಡ ಬದಲಾಗಿದೆ. ಅಂತಸ್ತು, ಜಾತಿ-ಮತ, ಸಂಪ್ರದಾಯದ ಹಂಗಿಲ್ಲದೆ ಆಯ್ಕೆ ಮಾಡಲಾಗುತ್ತಿದೆ. ಎಷ್ಟೋ ಜನರಿಗೆ ಇದರಿಂದ ಸಂತೋಷವಾಗಿದೆ, ಮತ್ತೆ ಕೆಲವರಿಗೆ ದುಃಖವೂ ಆಗಿದೆ. ಆಕಸ್ಮಿಕವಾಗಿ ಇಂತಹ ಮಾನ್ಯತೆ ಪಡೆದ ನನ್ನಂಥವರಿಗೆ ಸಂತೋಷ ಸಹಜ.
ಇದೊಂದು ಸಣ್ಣ ಭೇಟಿ. ದೇವರ ಪ್ರಸಾದ ನೀಡಿ, ದೇಶಸೇವೆಯ ಅವಕಾಶ ನೀಡಿದ್ದಕ್ಕೆ ಧನ್ಯವಾದ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
