ಅಹಮದಾಬಾದ್​:“ಅವರು ತರಕಾರಿ ತಿನ್ನುವುದನ್ನು ಎಂದೂ ನೋಡಿರಲಿಲ್ಲ” ಎಂದು ಯುಎಸ್ ಅಧಿಕಾರಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಟ್ರಂಪ್ ಆಹಾರದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ ಆ ಅಧಿಕಾರಿ!
ಟ್ರಂಪ್ ಅವರು ಸಾಮಾನ್ಯವಾಗಿ ಊಟದೊಂದಿಗೆ ಸಲಾಡ್ ಸೇವಿಸುತ್ತಾರೆ. ಆದರೆ, ಅದನ್ನು ಹೊರತುಪಡಿಸಿ, ಅವರು ತರಕಾರಿ ತಿನ್ನುವುದನ್ನು ನಾನು ನೋಡಿರಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
ಭಾರತಕ್ಕೆ ಭೇಟಿ ನೀಡಿರುವ ಟ್ರಂಪ್​ ಅವರ ಆಹಾರ ಪದ್ಧತಿ ಏರುಪೇರಾಗುವ ಸಾಧ್ಯತೆ ಬಗ್ಗೆ ಮಾಹಿತಿ ನೀಡಿದ ಅಧಿಕಾರಿ, ಟ್ರಂಪ್​ ಅವರ ಆಹಾರದಲ್ಲಿ ಸಾಮಾನ್ಯವಾಗಿ ಸ್ಟೀಕ್ಸ್, ಬರ್ಗರ್ ಮತ್ತು ಮಾಂಸದ ತುಂಡುಗಳಿರುವುದು ಸಾಮಾನ್ಯ. ಆದರೆ ಅವರು ತರಕಾರಿ ಸೇವಿಸಿದರು ಎಂದಿದ್ದಾರೆ.
ಮೋದಿ ಹಾಗೂ ಟ್ರಂಪ್​ ಅವರು ಮಂಗಳವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ಜತೆಗೂಡಿ ಊಟ ಮಾಡಲಿದ್ದಾರೆ. ಈ ಮೊದಲು ಟ್ರಂಪ್ ಭೇಟಿ ನೀಡಿದ ದೇಶಗಳು ಅವರ ಆಹಾರಕ್ರಮಕ್ಕೆ ಅನುಗುಣವಾಗಿದ್ದವು. ಆದರೆ ಭಾರತದಲ್ಲಿ ಹಾಗಿಲ್ಲ.
ಹೇಳಿಕೇಳಿ ಪ್ರಧಾನಿ ನರೇಂದ್ರ ಮೋದಿ ಅವರು ಸಸ್ಯಾಹಾರಿ. ಅವರ ಜತೆ ಊಟ ಮಾಡಲಿರುವ ಟ್ರಂಪ್​ ಅವರಿಗೆ ಸಸ್ಯಾಹಾರದ ತಿನಿಸುಗಳಾದ ವೆಜ್ ಬರ್ಗರ್​, ಧಾನ್ಯ ರೋಟಿ, ಕೋಸುಗಡ್ಡೆ ಸಮೋಸಾ ಮತ್ತು ಎಳನೀರನ್ನು ಯುಎಸ್ ಅಧ್ಯಕ್ಷ ಟ್ರಂಪ್​ ಅವರಿಗೆ ಬಡಿಸಲು ಮೋದಿ ಯೋಚಿಸಿದ್ದಾರೆ.
ಟ್ರಂಪ್​ ಅವರ ಮೆಚ್ಚಿನ ಆಹಾರ ಗೋಮಾಂಸ. ಆದರೆ ರಾಷ್ಟ್ರಪತಿ ಭವನದಲ್ಲಿ ಅದನ್ನು ಪೂರೈಸಲಾಗುತ್ತಿಲ್ಲ. ಅದರ ಬದಲಿಗೆ ಚಿಕನ್​ ಬರ್ಗರ್​, ಹುರಿದ ಪನ್ನೀರ್​ ಮುಂತಾದ ಆಹಾರಗಳಿರುತ್ತವೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
