ನವದೆಹಲಿ:ಪ್ರಾಣಿಗಳೇ ಹಾಗೆ. ಯಾರಾದರೂ ಒಂದು ತುತ್ತು ಅನ್ನ ಕೊಟ್ಟರೆ, ಪ್ರೀತಿಯಿಂದ ತಲೆ ನೇವರಿಸಿದರೆ ಅವರನ್ನು ತುಂಬಾ ಹಚ್ಚಿಕೊಂಡು ಬಿಡುತ್ತವೆ. ಜತೆಗೆ ಪದೇಪದೆ ಅವರ ಬಳಿ ಹೋಗಿ ಕೇಳಿ ಊಟ ಇಸಿದುಕೊಂಡು ತಿನ್ನುತ್ತವೆ.
ಇಲ್ಲಿಯೂ ಹಾಗೆಯೇ. ರಾಜಸ್ಥಾನದಲ್ಲಿ ಮಾರುಕಟ್ಟೆಯೊಂದರಲ್ಲಿ ತರಕಾರಿ ಮಾರುವ ಮಹಿಳೆಯ ಬಳಿಗೆ ದಿನವೂ ಬರುವ ನವಿಲೊಂದು ಆಕೆಯ ಕೈಯಲ್ಲಿ ಕಾಳುಕಡಿಗಳನ್ನು ಪಡೆದು ತಿಂದು ಹೋಗುತ್ತದೆ. ಒಂದು ಕೈಯಲ್ಲಿ ತರಕಾರಿ ಮಾರುತ್ತಿದ್ದರೂ ಮತ್ತೊಂದು ಕೈಯಲ್ಲಿ ಆಕೆ ನವಿಲಿಗೆ ಕಾಳು ತಿನ್ನಿಸುತ್ತಾಳೆ.ಟಿಂಕು ವೆಂಕಟೇಶ್​ ಎಂಬುವರು ಮಹಿಳೆ ನವಿಲಿಗೆ ಕಾಳು ತಿನ್ನಿಸುತ್ತಿರುವ ವಿಡಿಯೋವನ್ನು ಚಿತ್ರೀಕರಿಸಿಕೊಂಡು ಟ್ವಿಟ್ಟರ್​ನಲ್ಲಿ ಪೋಸ್ಟ್​ ಮಾಡಿದ್ದು, ಮಿಗಿಲಿಲ್ಲದ ಹೃದಯ ಶ್ರೀಮಂತಿಕೆ ಎಂಬ ಸಂದೇಶದೊಂದಿಗೆ ಟ್ವೀಟ್​ ಮಾಡಿದ್ದಾರೆ.
ಇದನ್ನೂ ಓದಿ:ತುಮಕೂರು ಜಿಲ್ಲೆಯಲ್ಲಿ ಹೊಸದಾಗಿ 63 ಮಂದಿಗೆ ಸೋಂಕು ; ಸಾವಿರ ಸನಿಹಕ್ಕೆ ಗುಣಮುಖರು
ಅನುಕಂಪ ಮತ್ತು ಕಕ್ಕುಲತೆಗಳು ತುಂಬಾ ದೂರದವರೆಗೆ ಸಾಗಬಲ್ಲವು. ಇಂಥ ಘಟನೆಗಳು ಜಾಗತಿಕವಾಗಿ ಎಲ್ಲೆಡೆ ಸಾಮಾನ್ಯವಾಗಿದ್ದು, ಇಂಥ ದೃಶ್ಯಗಳು ಬೇಗನೆ ಗಮನಸೆಳೆಯಲ್ಪಡುತ್ತವೆ. ಇಂಥ ದೃಶ್ಯಗಳು ಮನುಷ್ಯನಲ್ಲಿ ಭರವಸೆ ಮತ್ತು ಧನಾತ್ಮಕ ಚಿಂತನೆಗಳನ್ನು ಸೃಷ್ಟಿಸುತ್ತವೆ.
She is rich by heart ❤️pic.twitter.com/q1bOLbdXO0
— Tinku | ಟಿಂಕು (@tweets_tinku)August 1, 2020

ಇಲ್ಲಿಯೂ ಹಾಗೆಯೆ. ನವಿಲಿಗೆ ಈ ಮಹಿಳೆ ಕಾಳು ತಿನ್ನಿಸುವ ದೃಶ್ಯ ಎಲ್ಲರ ಮನಗೆದ್ದಿದೆ. ಆಕೆಯ ಅನುಕಂಪ ಮತ್ತು ಕಕ್ಕುಲತೆಗಳನ್ನು ವರ್ಣಿಸಲು ಪದಗಳೇ ಇಲ್ಲವಾಗಿವೆ. ಲಕ್ಷಾಂತರ ಜನರು ಈ ವಿಡಿಯೋವನ್ನು ನೋಡಿ, ಮೆಚ್ಚಿಕೊಂಡು ಶೇರ್​ ಮಾಡಿದ್ದಾರೆ.
ನಿಮ್ಮ ಬುದ್ಧಿ ಸಾಮರ್ಥ್ಯಕ್ಕೊಂದು ಸವಾಲು… ಈ ಚಿತ್ರದಲ್ಲೊಂದು ನಾಯಿ ಇದೆ.. ಗುರುತಿಸಲು ಟ್ರೈ ಮಾಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
