ವಾರಣಾಸಿ:ಟೊಮ್ಯಾಟೊ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ರಾತ್ರೋರಾತ್ರಿ ಟೊಮ್ಯಾಟೊ ಕದ್ದೊಯ್ಯುತ್ತಿದ್ದಾರೆ. ಹೀಗಾಗಿ ಇಲ್ಲೊಬ್ಬ ತರಕಾರಿ ವ್ಯಾಪಾರಿ ಮಾಸ್ಟರ್​ ಪ್ಲ್ಯಾನ್​​ ಮಾಡಿರುವ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.
ಇದನ್ನೂ ಓದಿ:ಇದು ಬಂಪರ್ ಆಫರ್​..!; ಮೊಬೈಲ್ ಖರೀದಿಸಿದರೆ ಎರಡು ಕೆಜಿ ಟೊಮ್ಯಾಟೊ ಉಚಿತ..
ಉತ್ತರ ಪ್ರದೇಶದ ವಾರಣಸಿಯ ತರಕಾರಿ ವ್ಯಾಪಾರಿ ಅಜಯ್ ಫೌಜಿ ಟೊಮ್ಯಾಟೊ ಕಾಯಲು ಇಬ್ಬರು ಬೌನ್ಸರ್ ನೇಮಿಸಿದ್ದಾರೆ. ಟೊಮ್ಯಾಟೊ ಬೆಲೆ ಗಗನಕ್ಕೇರಿದೆ. ಹಲವೆಡೆ ಟೊಮ್ಯಾಟೊ  ಕಳ್ಳತನ ನಡೆದ ಘಟನೆಗಳು ನಡೆದಿದೆ. ಹೀಗಾಗಿ ಈ ಸಮಸ್ಯೆ ಇಲ್ಲಿ ಆಗಬಾರದು ಎಂದು ಇಬ್ಬರು ಬೌನ್ಸರ್ ನೇಮಕ ಮಾಡಿದ್ದೇನೆ ಎಂದು ಅಜಯ್ ಫೌಜಿ ಹೇಳಿದ್ದಾರೆ.
https://twitter.com/PTI_News/status/1677975663125340161
ಇದನ್ನೂ ಓದಿ:ಮಾನ್ಸೂನ್ ಆರೋಗ್ಯ ಸಲಹೆಗಳನ್ನು ಪಾಲಿಸಿ, ಮಳೆಗಾಲದ ಅನಾರೋಗ್ಯಕ್ಕೆ ಹೇಳಿ ಗುಡ್​ ಬೈ …
ಟೊಮ್ಯಾಟೊ ಪಕ್ಕದಲ್ಲೇ ನಿಂತುಕೊಂಡಿರುವ ಇಬ್ಬರು ಬೌನ್ಸರ್ ಗ್ರಾಹಕರನ್ನು ಎಚ್ಚರಿಸುತ್ತಿದ್ದಾರೆ. ಗ್ರಾಹಕರನ್ನು ಟೊಮ್ಯಾಟೊ ಮುಟ್ಟಲು ಈ ಬೌನ್ಸರ್ ಬಿಡುತ್ತಿಲ್ಲ. ನಿಮಗೆ ಎಷ್ಟು ಟೊಮ್ಯಾಟೊ ಬೇಕು ಅಷ್ಟನ್ನು ಮಾಲೀಕರ ಬಳಿ ಕೇಳಿ. ಟೊಮ್ಯಾಟೊ ಮುಟ್ಟಿ ಹಾಳುಮಾಡಬೇಡಿ ಎಂದು ಬೌನ್ಸರ್ ಗದರಿಸುತ್ತಿರುವ ದೃಶ್ಯ ವೈರಲ್ ಆಗಿದೆ.
ಇದನ್ನೂ ಓದಿ:ವೀರಶೈವ ಲಿಂಗಾಯತ ಸಮುದಾಯ ಒಬಿಸಿಗೆ ಸೇರಿಸಿ: ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡುವಂತೆ ಹಕ್ಕೊತ್ತಾಯ ಸಭೆ
ವಾರಣಾಸಿ ತರಕಾರಿ ವ್ಯಾಪಾರಿ ತನ್ನ ಅಂಗಡಿಯಲ್ಲಿ ಮಾರಾಟಕ್ಕಿಟ್ಟಿರುವ ಟೊಮ್ಯಾಟೊ ಕಾಯಲು ಇಬ್ಬರು ಬೌನ್ಸರ್ ನೇಮಕ ಮಾಡಿದ್ದಾನೆ. ವ್ಯಾಪಾರಿಯ ಈ ನಡೆ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್​ ಮಾಡುತ್ತಿದ್ದಾರೆ.
ನಿರ್ದೇಶಕರೊಬ್ಬರು ನಾನು ಉಟ್ಟ ಸೀರೆಯ ಪಿನ್​​ ತೆಗೆಯುವಂತೆ ಹೇಳಿದ್ದರು: ನಟಿ ಹೇಮಾ ಮಾಲಿನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
