ನವದೆಹಲಿ:ಸಂಸತ್ತಿನ ಕ್ಯಾಂಟೀನ್​ ಶೀಘ್ರವೇ ಪೂರ್ತಿ ಸಸ್ಯಾಹಾರಿ ಕ್ಯಾಂಟೀನ್​ ಆಗಿ ಬದಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇಷ್ಟುದಿನ ಭಾರತೀಯ ರೈಲ್ವೆಯ ಅಂಗಸಂಸ್ಥೆಯಾದ ಇಂಡಿಯನ್​ ರೈಲ್ವೆ ಕ್ಯಾಟರಿಂಗ್​ ಮತ್ತು ಟೂರಿಸಂ ಕಾರ್ಪೋರೇಶನ್​ (ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ-ಐಆರ್​ಟಿಸಿ) ಈ ಕ್ಯಾಂಟೀನ್ ನಡೆಸುತ್ತಿತ್ತು. ಹಾಗಾಗಿ ಇಲ್ಲಿ ಸಸ್ಯಾಹಾರಿ, ಮಾಂಸಾಹಾರಿ ಆಹಾರಗಳು, ತಿನಿಸುಗಳು ಸಿಗುತ್ತಿದ್ದವು. ಆದರೆ ಇನ್ನೇನು ಕೆಲವೇ ದಿನಗಳಲ್ಲಿ ಕ್ಯಾಂಟೀನ್​ ಗುತ್ತಿಗೆ ಐಆರ್​ಟಿಸಿ ಕೈತಪ್ಪಲಿದ್ದು ಹಳ್ದಿರಾಮ್​ ​ ಅಥವಾ ಬಿಕಾನೇರ್​ವಾಲಾ ಪಾಲಾಗಲಿದೆ ಎಂದು ಹೇಳಲಾಗುತ್ತಿದೆ.
ಬಿಕಾನೇರ್​ವಾಲಾ ಹಾಗೂ ಹಳ್ದಿರಾಮ್ ​ ಸಂಸ್ಥೆಗಳು ಖಾಸಗಿಯಾಗಿದ್ದು ಇವು ಬರೀ ಸಸ್ಯಾಹಾರವನ್ನು ಮಾತ್ರ ಪೂರೈಸುತ್ತವೆ. ಇವೆರಡರಲ್ಲಿ ಕ್ಯಾಂಟೀನ್​ ನಡೆಸಲು ಯಾವುದೇ ಸಂಸ್ಥೆಯನ್ನೂ ಆಯ್ಕೆ ಮಾಡಿಕೊಂಡರೂ ಸಂಸದರಿಗೆ, ಸಂಸತ್ತಿನ ಸಿಬ್ಬಂದಿಗೆ ನಾನ್​ ವೆಜ್​ ಸಿಗುವುದಿಲ್ಲ ಎನ್ನಲಾಗಿದೆ.
ಇವೆರಡರೊಟ್ಟಿಗೆ ಇನ್ನೊಂದು ಸರ್ಕಾರಿ ಸಂಸ್ಥೆಯೊಂದು ಕೂಡ ಕ್ಯಾಂಟೀನ್ ನಡೆಸುವ ರೇಸ್​ನಲ್ಲಿ ಇದೆ.ಐಆರ್​ಟಿಸಿ ಕ್ಯಾಂಟೀನ್​ನಲ್ಲಿ ನೀಡುತ್ತಿದ್ದ ಆಹಾರದ ಗುಣಮಟ್ಟ ಸರಿಯಿಲ್ಲ ಎಂದು ಹಲವು ದೂರುಗಳು ಹೋದ ಹಿನ್ನೆಲೆಯಲ್ಲಿ ಅದರ ಗುತ್ತಿಗೆಯನ್ನು ರದ್ದುಪಡಿಸುವ ನಿರ್ಧಾರವನ್ನು ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ತೆಗೆದುಕೊಂಡಿದ್ದಾರೆ. ಹಾಗೇ ಹಳ್ದಿರಾಮ್​ಗೆ ವಹಿಸಬೇಕೋ ಅಥವಾ ಬಿಕಾನೇರ್​ವಾಲಾಗೋ ಎಂಬುದನ್ನೂ ಸ್ಪೀಕರ್​ ಅವರೇ ತೀರ್ಮಾನಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಯಾಕೆಂದರೆ ಓಂ ಬಿರ್ಲಾ ಅವರೂ ಕೂಡ ಇದೆರಡು ಸಂಸ್ಥೆಗಳ ಮೇಲೆಯೇ ಒಲವು ಹೊಂದಿದ್ದಾರೆ ಎನ್ನಲಾಗಿದೆ.
ಇಷ್ಟುದಿನ ಈ ಕ್ಯಾಂಟೀನ್​ನಲ್ಲಿ ಬಿರ್ಯಾನಿ, ಚಿಕನ್​ ಕಟ್ಲೆಟ್​, ಮೀನು ಸೇರಿ ಕೆಲವು ನಾನ್​ವೆಜ್​ ತಿನಿಸುಗಳೇ ಹೆಚ್ಚು ಮಾರಾಟವಾಗುತ್ತಿದ್ದವು. ಅಧಿಕ ಜನರ ಆದ್ಯತೆ ಅದೇ ಆಗಿತ್ತು. ಈಗ ಒಂದೊಮ್ಮೆ ಸಂಸತ್ತಿನ ಕ್ಯಾಂಟೀನ್ ಪೂರ್ತಿ ಸಸ್ಯಾಹಾರಿಯಾಗಿ ಪರಿವರ್ತನೆಯಾದರೆ ನಾನ್​ ವೆಜ್​ ಪ್ರಿಯರಿಗೆ ತೊಂದರೆಯಾಗುವುದು ಸಹಜ.
ಕಳೆದ ಕೆಲವು ತಿಂಗಳಿಂದಲೂ ಐಆರ್​ಸಿಟಿಸಿ ವಿರುದ್ಧ ದೂರುಗಳನ್ನು ನೀಡಲಾಗುತ್ತಿತ್ತು. ಕಳಪೆ ಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಸಂಸದರು, ಅಲ್ಲಿನ ಸಿಬ್ಬಂದಿ ಆರೋಪಿಸಿದ್ದರು.
ಅಷ್ಟೇ ಅಲ್ಲದೆ ಕ್ಯಾಂಟೀನ್​ ತಮಗೆ ನೀಡುವ ಸಬ್ಸಿಡಿಯನ್ನು ತ್ಯಜಿಸಲು ಬಹುತೇಕ ಸದಸ್ಯರು ಕಳೆದ ಚಳಿಗಾಲದ ಅಧಿವೇಶನದಲ್ಲಿ ಒಮ್ಮತದಿಂದ ನಿರ್ಧರಿಸಿದ್ದರು. ಈ ಎಲ್ಲ ಕಾರಣಕ್ಕೆ ಕ್ಯಾಂಟೀನ್​ ಗುತ್ತಿಗೆಯನ್ನು ಬದಲಿಸಲು ಸ್ಪೀಕರ್​ ನಿರ್ಧರಿಸಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 9 =
Remember me
