ತಮಿಳುನಾಡು:ಅಪಘಾತವನ್ನು ತಡೆಯುವ ನಿಟ್ಟಿನಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು ಎಂದು ಕಾನೂನೇ ಇದೆ. ಆದರೆ ಇಲ್ಲೊಂದು ಕಡೆ ಮದ್ಯವನ್ನು ತುಂಬಿದ್ದ ವಾಹನವೇ ಪಲ್ಟಿಯಾಗಿದ್ದು, ಜನರು ಆಲ್ಕೋಹಾಲ್​ಗಾಗಿ ಮುಗಿಬಿದ್ದ ಪ್ರಕರಣವೂ ನಡೆದಿದೆ.
ಹೀಗೆ ಅಪಘಾತಕ್ಕೆ ಒಳಗಾದ ವಾಹನದಲ್ಲಿ ಸುಮಾರು ಹತ್ತು ಲಕ್ಷ ರೂಪಾಯಿ ಮೌಲ್ಯದ ಮದ್ಯದ ಬಾಟಲ್​ಗಳು ಇದ್ದವು. ತಮಿಳುನಾಡಿನ ಮದುರೈ ಪ್ರದೇಶದ ವಿರಗನೂರು ಎಂಬಲ್ಲಿ ಈ ಅಪಘಾತ ಸಂಭವಿಸಿದೆ.
ಕೇರಳದ ಮನಲೂರ್ ಎಂಬಲ್ಲಿ ಆಲ್ಕೋಹಾಲ್ ಲೋಡ್ ಮಾಡಿಸಲಾಗಿದ್ದು, ಅಲ್ಲಿಂದ ಹೊರಟಿದ್ದ ವಾಹನ ಮದುರೈ ಬಳಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದ್ದು, ಮಗುಚಿ ಬಿದ್ದಿದೆ. ಈ ವೇಳೆ ವಾಹನದಲ್ಲಿದ್ದ ಮದ್ಯದ ಬಾಟಲ್​ಗಳು ಬಿದ್ದು ರಸ್ತೆಯಲ್ಲಿ ಚೆಲ್ಲಾಪಿಲ್ಲಿ ಆಗಿವೆ.
ಹೆದ್ದಾರಿ ತುಂಬಾ ಚೆಲ್ಲಾಪಿಲ್ಲಿ ಆಗಿದ್ದ ಮದ್ಯದ ಬಾಟಲ್​ಗಳನ್ನು ಎತ್ತಿಕೊಳ್ಳಲು ಜನರು ಮುಗಿಬಿದ್ದ ಪರಿಣಾಮವಾಗಿ ಸ್ಥಳದಲ್ಲಿ ಕೆಲಕಾಲ ಜನಜಂಗುಳಿ ಜತೆಗೆ ತಳ್ಳಾಟವೂ ನಡೆಯಿತು. ಅಲ್ಲದೆ ಕೆಲವು ಸಮಯ ಸಂಚಾರಕ್ಕೆ ಅಡ್ಡಿ ಕೂಡ ಉಂಟಾಯಿತು.

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 + 12 =
Remember me
