ಪಟ್ನ :ಮದುವೆಯ ಮೊದಲ ಶಾಸ್ತ್ರವಾದ ವರನಿಗೆ ‘ತಿಲಕ್​’ ಹಚ್ಚುವ ಶಾಸ್ತ್ರ ಮುಗಿಸಿ ವಾಪಸಾಗುತ್ತಿದ್ದಾಗ ವಾಹನವು ಗಂಗಾ ನದಿಗೆ ಬಿದ್ದು, ಎಂಟು ಜನ ಮಸಣದ ಹಾದಿ ಹಿಡಿದಿರುವ ಘಟನೆ ಬಿಹಾರದಿಂದ ವರದಿಯಾಗಿದೆ. ಒಟ್ಟು 25 ಜನ ಪ್ರಯಾಣ ಮಾಡುತ್ತಿದ್ದ ವಾಹನವು ಸೇತುವೆಯ ಮೇಲಿನಿಂದ ಆಯತಪ್ಪಿ ನೀರಿಗೆ ಬಿದ್ದಿದ್ದು, ಉಳಿದ ಪ್ರಯಾಣಿಕರ ಪತ್ತೆ ಕಾರ್ಯ ನಡೆಯುತ್ತಿದೆ.
ಇಂದು ಬೆಳಿಗ್ಗೆ 25 ಜನರು ಪ್ರಯಾಣಿಸುತ್ತಿದ್ದ ಪ್ಯಾಸೆಂಜರ್ ವಾಹನವೊಂದು ಪಟ್ನಾದ ದಾನಾಪುರದಲ್ಲಿ ಪೀಪಾ ಸೇತುವೆ ದಾಟುತ್ತಿದ್ದಾಗ ಈ ದುರಂತ ನಡೆದಿದೆ. ನೀರುಪಾಲಾಗಿ ಸಾವಪ್ಪಿದ ಮೂವರು ಮಕ್ಕಳೂ ಸೇರಿದಂತೆ ಎಂಟು ಜನರ ಮೃತದೇಹಗಳನ್ನು ಈವರೆಗೆ ಹೊರತೆಗೆಯಲಾಗಿದೆ.
ಇದನ್ನೂ ಓದಿ:ಮಗ ಚೇತರಿಸಿಕೊಳ್ಳಲಿಲ್ಲ ಅಂತ ಮಗಳಿಗೂ ವಿಷವುಣಿಸಿದಳು… ಮನ ಕಲಕುತ್ತೆ ಈ ಘಟನೆ
ಮೃತರನ್ನು ರಮಾಕಾಂತ್ ಸಿಂಗ್ (75), ಗೀತಾ ದೇವಿ (60), ಅರವಿಂದ್ ಸಿಂಗ್ (50), ಸರೋಜ್ ದೇವಿ (65), ಅನುರಾಧಾ ದೇವಿ (75) ಮತ್ತು ಆಶಿಶ್ (8) ಎಂದು ಗುರುತಿಸಲಾಗಿದೆ. 12 ಮತ್ತು 14 ವರ್ಷ ವಯಸ್ಸಿನ ಇತರ ಇಬ್ಬರು ಮಕ್ಕಳ ಶವಗಳನ್ನು ಇನ್ನೂ ಗುರುತಿಸಲಾಗಿಲ್ಲ. ನೀರಿಗೆ ಬಿದ್ದ ಇತರರ ಪತ್ತೆ ಕಾರ್ಯ ಮುಂದುವರಿದಿದೆ.(ಏಜೆನ್ಸೀಸ್)
ರಾಜ್ಯದಲ್ಲಿ ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧವಿಲ್ಲ : ಸಚಿವ ಬಿ.ಸಿ.ಪಾಟೀಲ್

ಹೋಂ ಕ್ವಾರಂಟೈನ್​​ನಲ್ಲಿ ನಟ ಮಹೇಶ್​ ಬಾಬು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 13 =
Remember me
