ಭೋಪಾಲ್ :ಹೆದ್ದಾರಿಯನ್ನು ದಾಟುತ್ತಿದ್ದ ಹುಲಿಯು ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಮಧ್ಯಪ್ರದೇಶದ ಉಮಾರಿಯ ಜಿಲ್ಲೆ ವ್ಯಾಪ್ತಿಯ ಗುನ್​ಘುಟ್ಟಿ ಅರಣ್ಯ ವಲಯದಲ್ಲಿ ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರದಿಂದ 35 ಕಿಲೋಮೀಟರ್​ ದೂರದಲ್ಲಿ, ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 43 ರಲ್ಲಿ ನಡೆದಿರುವ ದುರ್ಘಟನೆಯಲ್ಲಿ, ಮೃತಪಟ್ಟಿರುವ ಹುಲಿಯು ಸಮೀಪದ ಬಂಧವಗಡ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಸೇರಿದ್ದಲ್ಲ. ಅದರ ವಯಸ್ಸು ಮತ್ತಿತರ ವಿವರಗಳನ್ನು ತಿಳಿಯಲು ಫೊರೆನ್ಸಿಕ್​ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಉಮಾರಿಯ ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್​​ಒ) ಮೋಹಿತ್​ ಸೂದ್ ಹೇಳಿದ್ದಾರೆ.
ಇದನ್ನೂ ಓದಿ:ಸೋಂಕು ಕಡಿಮೆಯಾದ್ರೆ ಲಾಕ್‌ಡೌನ್ ಸಡಿಲ ; ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸುಳಿವು
“ಈ ರೀತಿಯ ಅಪಘಾತಗಳು ಮುಂದೆ ನಡೆಯದಂತೆ ರಸ್ತೆಬದಿಗಳಲ್ಲಿ ಸೈನ್​ಬೋರ್ಡ್​ಗಳನ್ನು ಹಾಕಲು ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದೇನೆ. ಹೆದ್ದಾರಿಯ ವಾಹನ ಚಾಲಕರು ಎಚ್ಚರಿಕೆ ವಹಿಸುವಂತೆ ಜಾಗೃತಿ ಮೂಡಿಸಲಾಗುವುದು” ಎಂದಿರುವ ಡಿಎಫ್​ಒ ಸೂದ್​, ಹೆದ್ದಾರಿಯಲ್ಲಿ ಸ್ಪೀಡ್​ಬ್ರೇಕರ್​ಗಳನ್ನು ಅಳವಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನೂ ಮನವಿ ಮಾಡಲಾಗುವುದು ಎಂದು ಹೇಳಿದ್ದಾರೆ.(ಏಜೆನ್ಸೀಸ್)
ನಾಯಕತ್ವ ವಿಚಾರದಲ್ಲಿ ಗೊಂದಲವಿಲ್ಲ… ಅಪಸ್ವರ ಎತ್ತಿದವರ ವಿರುದ್ಧ ಕ್ರಮ : ಸಿಎಂ ಯಡಿಯೂರಪ್ಪ

ಮೂರನೇ ಅಲೆ ಬೇಗ ಅಪ್ಪಳಿಸುತ್ತೆ : ಸರ್ಕಾರಕ್ಕೆ ಹೈಕೋರ್ಟ್​ ಎಚ್ಚರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 20 =
Remember me
