ಉತ್ತರಪ್ರದೇಶ:ಎಳನೀರು ಹಲವಾರು ಪೋಷಕಾಂಶಗಳನ್ನು ಹೊಂದಿರುವ ಪಾನೀಯವಾಗಿದೆ. ಎಳನೀರಿನಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಹಾಗೂ ಖನಿಜಾಂಶಗಳನ್ನು ಹೊಂದಿದೆ.
ರಸ್ತೆಯಲ್ಲಿ ಹೋಗುತ್ತಲಿದ್ದರೆ, ಆಗ ಕೆಲವು ವ್ಯಾಪಾರಿಗಳು ಗಾಡಿಗಳಲ್ಲಿ ಎಳನೀರು ಮಾರಾಟ ಮಾಡುವವರು ನಮಗೆ ಸಿಗುತ್ತಾರೆ. ನೈಸರ್ಗಿಕವಾಗಿ ಸಿಗುವ ತಂಪುಪಾನಿಯ ಎಂದು ನಾಲಿಗೆ ಚಪ್ಪರಿಸಿ ಕುಡಿಯುವ ನಾವು ಇನ್ಮುಂದೆ ಸ್ವಲ್ಪ ಯೋಚನೆ ಮಾಡುವಂತೆ ಮಾಡುವ ವಿಡಿಯೋವೊಂದು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.
Shudh Taaza Nariyal Pani 🤲
Refreshing and Hygienic Coconut Water sprinkled with ‘Aab-e-Zim Zim’ and Sold in Shree Radha Krishna Sky Garden Society in Greater Noida.pic.twitter.com/PumE5uMBNE
— Surender Singh Rana (@Surende05060255)June 6, 2023
ಉತ್ತರ ಪ್ರದೇಶದ ನೊಯ್ಡಾದಲ್ಲಿ ಎಳೆ​ನೀ​ರು ವ್ಯಾಪಾರಿಯೊಬ್ಬ ಎಳೆ​ನೀ​ರಿನ ಕಾಯಿಗಳಿಗೆ ಚರಂಡಿಯ ನೀರು ಚುಮುಕಿಸಿದ್ದಾನೆ. ಈ ವಿಡಿಯೋ ವೈರಲ್‌ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಪ್ಯಾಪಾರಿ ವಿರುದ್ಧವಾಗಿ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಕೆ.ಜಿ.ಗಟ್ಟಲೆ ಬಂಗಾರ ಧರಿಸಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುವುದು ಈ ಕುಟುಂಬದ ಸಂಪ್ರದಾಯವಂತೆ!
ಈ ವಿಡಿಯೋವನ್ನು ಶ್ರೀ ರಾಧಾ ಸ್ಕೈ ಗಾರ್ಡನ್ ಬಳಿ ಸೆರೆ ಹಿಡಿದಿರುವ ವಿಡಿಯೋ ಆಗಿದೆ. ಜಾಗೃತಗೊಂಡು, ಮಾರಾಟಗಾರರನ್ನು ಗುರುತಿಸಿ ಅದೇ ದಿನ ಸ್ಥಳದಲ್ಲಿ ಬಂಧಿಸಲಾಯಿತು. ಎಳನೀರು ವ್ಯಾಪಾರಿ ಸಮೀರ್‌(28) ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸಮೀರ್, ಉತ್ತರ ಪ್ರದೇಶದ ಬರೇಲಿ ಜಿಲ್ಲೆಯವನು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸ್ಥಳೀಯ ಬಿಸ್ರಖ್ ಪೊಲೀಸ್ ಠಾಣೆಯ ಉಸ್ತುವಾರಿ ಅನಿಲ್ ಕುಮಾರ್ ರಜಪೂತ್ ಮಾತನಾಡಿ, ‘ಆರೋಪಿಯನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 270 (ಜೀವಕ್ಕೆ ಅಪಾಯಕಾರಿ ಕಾಯಿಲೆಯ ಸೋಂಕನ್ನು ಹರಡುವ ಮಾರಣಾಂತಿಕ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಅವರು ಹೇಳಿದರು.
ಉಗುರುಗಳು ಪದೇ ಪದೇ ಕಟ್​ ಆಗ್ತಿದ್ರೆ ಈ ಟಿಪ್ಸ್​​ ಆ್ಯಂಡ್​ ಟ್ರಿಕ್ಸ್​​ ನಿಮಗಾಗಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + thirteen =
Remember me
