ಹೈದರಾಬಾದ್​:ಟಾಲಿವುಡ್​ ಸಿನಿಮಾಗಳು ಉಭಯ ತೆಲುಗು ರಾಜ್ಯಗಳ ಗಡಿಯಿಂದಾಚೆ ಸಹಸ್ರಾರು ಕಿಮೀ ದೂರದ ದೇಶಗಳಲ್ಲಿ ಹವಾ ಸೃಷ್ಟಿ ಸುತ್ತಿರುವುದನ್ನು ಇತ್ತೀಚಿನ ದಿನಗಳಲ್ಲಿ ಕಾಣಬಹುದು. ಅದೇ ರೀತಿ ತೆಲುಗು ಹೀರೋಗಳು ಅಂತರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿ ಪಡೆದಿದ್ದಾರೆ. ಈ ನಿಟ್ಟಿನಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ಕೂಡ ಒಬ್ಬರು. ಬಿಗ್ ಬಜೆಟ್ ಚಿತ್ರಗಳ ಸರಣಿಯಲ್ಲಿ ನಟಿಸುತ್ತಿರುವ ಇವರು.. ಚಿತ್ರದಿಂದ ಚಿತ್ರಕ್ಕೆ ತಮ್ಮ ರೇಂಜ್ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಆದಾಗ್ಯೂ, ಅವರು ಕೆಲವು ಏರಿಳಿತಗಳನ್ನು ಎದುರಿಸುತ್ತಿದ್ದಾರೆ.
ಇದನ್ನೂ ಓದಿ:ಬಾಲೆಯನ್ನು ರಕ್ಷಿಸಲು ನಾಯಿಯ ವೆರೈಟಿ ಪ್ಲಾನ್..ಶ್ವಾನದ ಬುದ್ಧಿವಂತಿಕೆಗೆ ನೆಟ್ಟಿಗರು ಫಿದಾ..!
ಇಂತಹ ಸಂದರ್ಭದಲ್ಲಿ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಪ್ರಭಾಸ್ ಅವರ ಜಾತಕ ಚೆನ್ನಾಗಿಲ್ಲ ಎಂದು ಪ್ರತಿಕ್ರಿಯಿಸಿದ್ದರು. ಇದೀಗ ಮತ್ತೊಮ್ಮೆ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಭಾಸ್ ಹಿಟ್ ಟ್ರ್ಯಾಕ್: ‘ಬಾಹುಬಲಿ’ ಸರಣಿಯ ನಂತರ ಪ್ರಭಾಸ್ ‘ಸಾಹೋ’, ‘ರಾಧೆ ಶ್ಯಾಮ್’, ‘ಆದಿಪುರುಷ’ ಚಿತ್ರಗಳನ್ನು ಮಾಡಿದ್ದಾರೆ. ಆದರೆ, ಯಾವುದೂ ಅವರಿಗೆ ಯಶಸ್ಸನ್ನು ತಂದುಕೊಡಲಿಲ್ಲ. ಹೀಗಿರುವಾಗ ಕಳೆದ ವರ್ಷ ‘ಸಲಾರ್: ಕದನ ವಿರಾಮ’ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಚಿತ್ರಕ್ಕೆ ಭಾರೀ ಪ್ರತಿಕ್ರಿಯೆ ಸಿಕ್ಕಿದೆ. ಪರಿಣಾಮವಾಗಿ, ಇದು ಕಲೆಕ್ಷನ್​ ಸುನಾಮಿಯನ್ನು ಸೃಷ್ಟಿಸಿತು. ಪ್ರಭಾಸ್​ರನ್ನು ಮತ್ತೆ ಹಿಟ್ ಟ್ರ್ಯಾಕ್‌ಗೆ ಕೊಂಡೊಯ್ಯಿತು.
ಪ್ರಭಾಸ್ ಕೈ ತುಂಬಾ ಪ್ರಾಜೆಕ್ಟ್ ಗಳಿದ್ದು, ಬ್ಯುಸಿಯಾಗಿದ್ದಾರೆ. ಪ್ರಸ್ತುತ ಅವರು ‘ಕಲ್ಕಿ 2898 ಎಡಿ’, ‘ಸಾಲಾರ್ ಭಾಗ 2’, ‘ದಿ ರಾಜಾ ಸಾಬ್’ ಮತ್ತು ‘ಸ್ಪಿರಿಟ್’ ಮುಂತಾದ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇವುಗಳ ಜೊತೆಗೆ ಹನು ರಾಘವಪುಡಿ ನಿರ್ದೇಶನದಲ್ಲಿ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೂಡ ಸಿಕ್ಕಿದೆ ಎಂದು ಗೊತ್ತಾಗಿದೆ.
ವೇಣು ಸ್ವಾಮಿಯು ಇತ್ತೀಚೆಗೆ ಪ್ರಭಾಸ್​ ಜಾತಕದಲ್ಲಿ ದೋಷಗಳಿದ್ದು, ಸಿನಿಮಾಗಳ ಜೊತೆಗೆ ವೈಯಕ್ತಿಕ ಜೀವನದಲ್ಲೂ ಸಮಸ್ಯೆಗಳು ಎದುರಾಗುತ್ತವೆ ಎಂದು ಇದೀಗ ಮತ್ತೊಮ್ಮೆ ಪ್ರಭಾಸ್ ಮದುವೆ ಮತ್ತು ಸಿನಿಮಾ ಪ್ರವೇಶದ ಬಗ್ಗೆ ಶಾಕಿಂಗ್ ಕಾಮೆಂಟ್ ಮಾಡಿದ್ದಾರೆ.
venu swamy, shocking comments, prabhas marriage, astrology,’ನಾನು ಹದಿಮೂರು ವರ್ಷದವನಿದ್ದಾಗ ಚಿತ್ರರಂಗಕ್ಕೆ ಬಂದೆ. ರೆಬೆಲ್ ಸ್ಟಾರ್ ಕೃಷ್ಣಂ ರಾಜು ನನಗೆ ತುಂಬಾ ಪರಿಚಿತರು. ಅವರ ಕುಟುಂಬದ ಪ್ರತಿಯೊಬ್ಬರ ಜಾತಕ ನನಗೆ ಚೆನ್ನಾಗಿ ಗೊತ್ತಿದೆ ಎಂದು ವೇಣು ಸ್ವಾಮಿ ಹೇಳಿದ್ದಾರೆ.
ಪ್ರಭಾಸ್ ಆರೋಗ್ಯ ಮತ್ತು ಚಿತ್ರಗಳ ಸೋಲಿನ ಬಗ್ಗೆ ಈಗಾಗಲೇ ಹಲವು ಬಾರಿ ಪ್ರತಿಕ್ರಿಯಿಸಿರುವ ವೇಣು ಸ್ವಾಮಿ, ಇತ್ತೀಚಿನ ಸಂದರ್ಶನದಲ್ಲಿ ಅವರ ಪ್ರವೇಶದ ಬಗ್ಗೆಯೂ ಮಾತನಾಡಿದ್ದಾರೆ. ‘ಪ್ರಭಾಸ್ ಅವರ ಮೊದಲ ಸಿನಿಮಾ ಈಶ್ವರ್ ಹೇಗೆ ಮಾಡಿದ್ರು ಅಂತ ನನಗೂ ಗೊತ್ತು. ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ನನ್ನನ್ನು ಟ್ರೋಲ್ ಮಾಡುತ್ತಾರೆ. ಆದರೆ, ಅವರ ಬಗ್ಗೆ ನನಗೆ ಹಲವು ವಿಷಯ ಗೊತ್ತಿದೆ’ ಎಂದು ವಿವರಿಸಿದರು.
‘ಪ್ರಭಾಸ್ ಇನ್ನೂ ಯಾಕೆ ಮದುವೆಯಾಗಿಲ್ಲ? ಇದು ನನಗೆ ಗೊತ್ತು’. ಜಾತಕದಲ್ಲಿ ಸಮಸ್ಯೆಗಳಿವೆ ಹಾಗಾಗಿ ಹೀಗಾಗುತ್ತಿದೆ ಎಂದು ವೇಣು ಸ್ವಾಮಿ ಬಹಿರಂಗಪಡಿಸಿದ್ದಾರೆ.
ಶಿವಸೇನಾ ಸಭೆ ವೇದಿಕೆಯಲ್ಲಿ ಕಪಿರಾಯ ಹಾಜರ್​!: ಮುಂದೇನಾಯಿತು? ವಿವರ ಇಲ್ಲಿದೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
