ಬೆಂಗಳೂರು:ತೆಲುಗು ಸಿನಿ ರಂಗದ ಘಟಾನುಘಟಿಗಳ ಭವಿಷ್ಯ ಹೇಳಿ ಸುದ್ದಿಯಾಗಿದ್ದ ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಕ್ಷಮೆ ಕೇಳಿದ್ದಾರೆ. ಇನ್ನುಮುಂದೆ ಸಿನಿಮಾ ನಟರ ವೈಯಕ್ತಿಕ ವಿಷಯಗಳ ಬಗ್ಗೆ ಹಾಗೂ ರಾಜಕಾರಣಿಗಳ ಬಗ್ಗೆ ಭವಿಷ್ಯ ನುಡಿಯುವುದಿಲ್ಲ ಎಂದು ವೇಣುಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ:ಜನರ ಆಶೋತ್ತರಗಳನ್ನು ಈಡೇರಿಸುವ ದಿಸೆಯಲ್ಲಿ ಉತ್ತಮ ಆಡಳಿತ ನೀಡುತ್ತೇವೆ: ದೇಶದ ಜನತೆಗೆ ಮೋದಿ ಸಂದೇಶ
ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಗೆ ಮುನ್ನ, ಜಗನ್​ ಮೋಹನ ರೆಡ್ಡಿ ಪಕ್ಷ ಮತ್ತೆ ಗೆಲ್ಲುತ್ತದೆ, 2024, 2029ರಲ್ಲಿ ಮತ್ತೆ ಜಗನ್ ಮೋಹನ್​ ರೆಡ್ಡಿ ಮುಖ್ಯಮಂತ್ರಿ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಅವರ ಭವಿಷ್ಯ ಸುಳ್ಳಾಗಿದೆ. ಜಗನ್​ ಮೋಹನ ರೆಡ್ಡಿ ವೈಸಿಪಿ ಪಕ್ಷ ಹೀನಾಯ ಸೋಲು ಕಂಡಿದ್ದು, ಕೇವಲ 10 ಸ್ಥಾನಗಳನ್ನು ಗೆದ್ದಿದೆ. ಟಿಡಿಪಿ ಪಕ್ಷ ಭಾರಿ ವಿಜಯ ದಾಖಲಿಸಿದೆ.
A post shared by Venu Swamy Parankusham (@parankushamvenu)

ಟಿಡಿಪಿ ಪಕ್ಷ ಭಾರಿ ವಿಜಯ ದಾಖಲಿಸಿದ ಬೆನ್ನಲ್ಲೇ ಖ್ಯಾತ ಜ್ಯೋತಿಷಿ ವೇಣುಸ್ವಾಮಿ ವಿಡಿಯೋ ಮೂಲಕ ಕ್ಷಮೆ ಕೇಳಿದ್ದಾರೆ. ರಾಜಕೀಯ ಮತ್ತು ಚಿತ್ರರಂಗದ ಗಣ್ಯರ ವೈಯಕ್ತಿಕ ಜೀವನದ ಬಗ್ಗೆ ಇನ್ನು ಮುಂದೆ ಭವಿಷ್ಯ ಹೇಳುವುದಿಲ್ಲ ಎಂದು ಜ್ಯೋತಿಷಿ ವೇಣು ಸ್ವಾಮಿ ವಿಡಿಯೊ ಮೂಲಕ ಹೇಳಿಕೊಂಡಿದ್ದಾರೆ.
ವಿಡಿಯೋ ಮೂಲಕ ಮಾತನಾಡಿರುವ ವೇಣುಸ್ವಾಮಿ, ಜಗನ್ ಮತ್ತೆ ಗೆಲ್ಲುತ್ತಾರೆ ಎಂದಿದ್ದೆ. ನಾನು ಕಲಿತ ವಿದ್ಯೆಗಳ ಆಧಾರದಲ್ಲಿ ಈ ಭವಿಷ್ಯವನ್ನು ನಾನು ನುಡಿದಿದ್ದೆ. ನನ್ನ ಭವಿಷ್ಯದಲ್ಲಿ ಮೊದಲನೆಯದು ನಿಜವಾಗಿದೆ. ಮೋದಿಯವರ ಫ್ರಭಾವ ತಗ್ಗಿರುವುದು ಫಲಿತಾಂಶದಿಂದ ಗೊತ್ತಾಗುತ್ತಿದೆ. ನಾನು ಹೇಳಿದ ಭವಿಷ್ಯ ಈ ಬಾರಿ ತಪ್ಪಾಗಿದೆ. ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ನಾನು ಆಂಧ್ರ ರಾಜಕೀಯದ ಬಗ್ಗೆ ಹೇಳಿರುವ ಭವಿಷ್ಯ ತಪ್ಪಾಗಿರುವ ಕಾರಣ, ಇಂದಿನಿಂದ ರಾಜಕೀಯ ಹಾಗೂ ಸಿನಿಮಾ ವ್ಯಕ್ತಿಗಳ ಬಗ್ಗೆ ಎಲ್ಲಿಯೂ ಭವಿಷ್ಯ ನುಡಿಯುವುದಿಲ್ಲ ಎಂದು ನಿರ್ಧಾರ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.
‘ನಾನು ನಂಬುವ ವೆಂಕಟೇಶ್ವರ ಸ್ವಾಮಿ ಮತ್ತು ಕಾಮಾಕ್ಯ ದೇವಿಯ ಕ್ಷಮೆ ಕೇಳುತ್ತೇನೆ. ನಾನು ಹೇಳಿರುವುದು ಸುಳ್ಳಾಗಿದೆಯಾದ್ದರಿಂದ ನಾನು ಕ್ಷಮೆ ಕೇಳುತ್ತಿದ್ದೇನೆ. ನನ್ನ ಭವಿಷ್ಯ ಸುಳ್ಳಾಗಿದ್ದರಿಂದ ಜನ ನನ್ನನ್ನು ಟ್ರೋಲ್ ಮಾಡುತ್ತಿದ್ದಾರೆ, ಅವರಿಗೆ ನಾನು ಏನೂ ಹೇಳುವುದಿಲ್ಲ. ನನ್ನನ್ನು ಮೊದಲಿನಿಂದಲೂ ಟಾರ್ಗೆಟ್ ಮಾಡಲಾಗಿತ್ತು, ಈಗಂತೂ ಟ್ರೋಲಿಂಗ್ ಹೆಚ್ಚಾಗಿದೆ’ ಎಂದಿದ್ದಾರೆ.
ವೇಣುಸ್ವಾಮಿ, ಟಾಲಿವುಡ್​ನ ಹಲವು ಸ್ಟಾರ್ ನಟ-ನಟಿಯರ ಭವಿಷ್ಯ ಹೇಳಿದ್ದರು. ಸಮಂತಾ-ನಾಗಚೈತನ್ಯ ಬೇರೆಯಾಗುತ್ತಾರೆ ಎಂದು ಸಹ ಭವಿಷ್ಯ ನುಡಿದಿದ್ದರು. ‘ಕಿರಿಕ್ ಪಾರ್ಟಿ’ ಸಿನಿಮಾದ ಬಳಿಕ ರಶ್ಮಿಕಾ ಮಂದಣ್ಣ ವೇಣುಸ್ವಾಮಿ ಬಳಿ ವಿಶೇಷ ಪೂಜೆ ಮಾಡಿಸಿದ್ದರು. ಅದರ ಬಳಿಕ ಅವರು ಸ್ಟಾರ್ ನಟಿ ಆದರು. ಹಲವು ತೆಲುಗು ನಟಿ-ನಟರುಗಳು ವೇಣುಸ್ವಾಮಿ ಬಳಿ ವಿಶೇಷ ಪೂಜೆಗಳನ್ನು ಮಾಡಿಸಿದ್ದರು. ಕೆಲವು ದಿನಗಳ ಹಿಂದೆ ನಟಿ ಶ್ರೀಲೀಲಾ ಬಗ್ಗೆ ಭವಿಷ್ಯ ನುಡಿದಿದ್ದರು. ಟಾಲಿವುಡ್ ಟಾಪ್ ನಟಿಯರಾಗಿ ಗುರುತಿಸಿಕೊಂಡಿರುವ ಸಮಂತಾ, ಪೂಜಾ ಹೆಗ್ಡೆ ಅವರಂತೆ ಶ್ರೀಲೀಲಾ ಅವರಿಗೂ ಒಳ್ಳೆಯ ಹೆಸರು ಬರಲಿದೆ. ಆದರೆ ಸೌತ್ ಸಿನಿಮಾಗಳಲ್ಲಿ ಶ್ರೀಲೀಲಾ ನಂಬರ್ 1 ನಟಿಯಾಗುತ್ತಾರೆ ಎಂದು ವೇಣುಸ್ವಾಮಿ ಜ್ಯೋತಿಷ್ಯ ಹೇಳಿದ್ದರು.
ಮೋದಿ ಜನಪ್ರಿಯತೆ ಕುಗ್ಗಿರುವುದು ಸಾಬೀತು, ಕಾಂಗ್ರೆಸ್‌ ವೋಟ್‌ ಶೇರ್ ಹೆಚ್ಚಾಗಿದೆ ಎಂದ ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × five =
Remember me
