ಚೆನ್ನೈ:ತಮಿಳು ಚಿತ್ರರಂಗದ ಹಿರಿಯ ನಟ ಹಾಗೂ ಬಾಹುಬಲಿಯ ಕಟ್ಟಪ್ಪ ಪಾತ್ರದಿಂದ ಜಾಗತಿಕವಾಗಿ ಗುರುತಿಸಲ್ಪಟ್ಟ ನಟ ಸತ್ಯರಾಜ್​ ಅವರಿಗೆ ಮಾತೃ ವಿಯೋಗವಾಗಿದೆ.
ಸತ್ಯರಾಜ್​ ಅವರ ತಾಯಿ ನಾಥಂಬಳ್ ಕಾಳಿಂಗರಾಯರ್​ 94ನೇ ವಯಸ್ಸಿನಲ್ಲಿ ವಯೋ ಸಹಜ ಕಾಯಿಲೆಯಿಂದ ಇಹಲೋಕ ತ್ಯಹಿಸಿದ್ದಾರೆ. ಶುಕ್ರವಾರ 4 ಗಂಟೆಗೆ ಕೊಯಮತ್ತೂರಿನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ನಾಥಂಬಾಳ್‌ ಅವರಿಗೆ ಕಲ್ಪನಾ ಮಂದ್ರಡಿಯರ್ ಮತ್ತು ರೂಪಾ ಸೇನಾಪತಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಹೈದರಾಬಾದ್​ನಲ್ಲಿ ಶೂಟಿಂಗ್​ನಲ್ಲಿದ್ದ ಸತ್ಯರಾಜ್ ಸುದ್ದಿ ತಿಳಿದ ತಕ್ಷಣ ಅರ್ಧಕ್ಕೆ ಶೂಟಿಂಗ್​ ನಿಲ್ಲಿಸಿ ಕೋವಿಗೆ ಧಾವಿಸಿದರು. ಚಿತ್ರರಂಗದ ಗಣ್ಯರು ಹಿರಿಯ ನಟನ ತಾಯಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇಂದು ಸಂತ್ಯ ಸಂಸ್ಕಾರ ನಡೆಯಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಅಪರಾಧ ಕಾನೂನಿಗೆ ಭೀಮಬಲ: ದೇಶದ್ರೋಹ ಕಾನೂನು ರದ್ದು, ಸೆಕ್ಷನ್ 150 ಪರ್ಯಾಯ; 3 ಮಸೂದೆಗಳ ಮಂಡನೆ
ಸತ್ಯರಾಜ್​ ಅವರು ತಮಿಳು, ತೆಲುಗು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ 240ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಆರಂಭದಲ್ಲಿ ಖಳನಾಯಕನಾಗಿ ಎಂಟ್ರಿ ಕೊಟ್ಟ ಸತ್ಯರಾಜ್​, ನಂತರದಲ್ಲಿ ನಾಯಕನಾಗಿ ಅನೇಕ ಸಿನಿಮಾಗಳಲ್ಲಿ ನಟಿಸಿದರು ಮತ್ತು ಹಲವು ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ.
ಪ್ರಸ್ತುತ ಸತ್ಯರಾಜ್​ ಅವರು ‘ವೆಪನ್’ ಸಿನಿಮಾದಲ್ಲಿ ನಟ ವಸಂತ ರವಿ ಜತೆ ನಟಿಸುತ್ತಿದ್ದಾರೆ. ತೆಲುಗು ಮತ್ತು ಮಲಯಾಳಂನ ಸಾಕಷ್ಟು ಸಿನಿಮಾಗಳಲ್ಲಿಯೂ ಸತ್ಯರಾಜ್​ ನಟಿಸಲಿದ್ದಾರೆ.(ಏಜೆನ್ಸೀಸ್​)
ಚಂದ್ರನ ದಕ್ಷಿಣ ಧ್ರುವ ಯಾನದಲ್ಲಿ ಭಾರತ-ರಷ್ಯಾ ಸ್ಪರ್ಧೆ: ಇಸ್ರೊ ನೌಕೆಗಿಂತ ತಿಂಗಳು ತಡವಾಗಿ ಉಡಾವಣೆ; 2 ದಿನ ಮೊದಲೇ ಲೂನಾ-25 ಲ್ಯಾಂಡಿಂಗ್ ಸಾಧ್ಯತೆ

ಅಪರಾಧ ಕಾನೂನಿಗೆ ಭೀಮಬಲ: ದೇಶದ್ರೋಹ ಕಾನೂನು ರದ್ದು, ಸೆಕ್ಷನ್ 150 ಪರ್ಯಾಯ; 3 ಮಸೂದೆಗಳ ಮಂಡನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 10 =
Remember me
