ಹೈದ್ರಾಬಾದ್​:ತೆಲುಗು ಚಿತ್ರರಂಗದ ದಿಗ್ಗಜ, ನಟ ಕೈಕಲ ಸತ್ಯನಾರಾಯಣ ಅವರು ಇಂದು(ಶುಕ್ರವಾರ) ಮುಂಜಾನೆ ಹೈದರಾಬಾದ್‌ನ ತಮ್ಮ ನಿವಾಸದಲ್ಲಿ ನಿಧನರಾದರು.
ಕೈಕಲ ಸತ್ಯನಾರಾಯಣ 87 ವರ್ಷ ವಯಸ್ಸಾಗಿತ್ತು. ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. 6 ದಶಕಗಳ ಸಿನಿ ಜರ್ನಿಯಲ್ಲಿ 700ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಕನ್ನಡದಲ್ಲಿ ಡಾ.ರಾಜ್​ಕುಮಾರ್​ ಅವರೊಂದಿಗೂ ಅಭಿನಯಿಸಿದ್ದರು. ​ತೆಲುಗು ದೇಶಂ ಪಕ್ಷದ (ಟಿಡಿಪಿ) ಸಂಸದರಾಗಿಯೂ ಆಯ್ಕೆಯಾಗಿದ್ದರು.
ನೆಚ್ಚಿನ ಹಿರಿಯ ನಟ ಕೈಕಲ ಸತ್ಯನಾರಾಯಣ ಅವರು ಇನ್ನಿಲ್ಲ ಎಂಬ ಸುದ್ದಿ ಕೇಳಿ ಸಹಸ್ರಾರು ಅಭಿಮಾನಿಗಳು ಮತ್ತು ಸಿನಿರಂಗ ಕಂಬನಿ ಮಿಡಿದಿದೆ. ಸಾಮಾಜಿಕ ಜಾಲತಾಣದಲ್ಲಿ ನಟನ ಫೋಟೊ ಹಾಕಿ ಸಂತಾಪ ಸೂಚಿಸಿದ್ದಾರೆ.
ಕೈಕಲ ಸತ್ಯನಾರಾಯಣ ಅವರಿಗೆ ಪತ್ನಿ ನಾಗೇಶ್ವರಮ್ಮ, ಇಬ್ಬರು ಪುತ್ರಿಯರು ಹಾಗೂ ಇಬ್ಬರು ಪುತ್ರರು ಇದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ(ಡಿ.24) ಮಹಾಪ್ರಸ್ಥಾನದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
గొప్ప వ్యక్తిత్వం కలిగిన వ్యక్తి కైకాల సత్యనారాయణ గారు. నటునిగా సుదీర్ఘ కాలం సేవలందించి ఎన్నో మరపురాని పాత్రలతో మెప్పించారు. ఎంపీ గానూ ప్రజలకు మరింత దగ్గరయ్యారు. కైకాల మరణం తెలుగు ప్రజలకు తీరని లోటు. వారి కుటుంబానికి నా ప్రగాఢ సానుభూతి తెలియజేస్తున్నాను.pic.twitter.com/eJdUwqnINz
— YS Jagan Mohan Reddy (@ysjagan)December 23, 2022

Saddened to know about the passing of Kaikala Satyanarayana garu. An absolute legend who immortalised many characters on our Telugu silver screen.
Om Shanti
— Kalyanram Nandamuri (@NANDAMURIKALYAN)December 23, 2022

ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್​, ಆಂಧ್ರಪ್ರದೇಶ ಸಿಎಂ ವೈ.ಎಸ್​.ಜಗನ್​ ಮೋಹನ್​, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ನಟರಾದ ಚಿರಂಜೀವಿ, ರಾಮ್​ಚರಣ್​, ಮಹೇಶ್​ ಬಾಬು, ರವಿ ತೇಜ, ನಂದಮೂರಿ ಕಲ್ಯಾಣರಾಮ್… ಸೇರಿದಂತೆ ಹಲವು ಟ್ವೀಟ್​ ಮೂಲಕ ಸಂತಾಪ ಸೂಚಿಸಿದ್ದಾರೆ. ಅಂತಿಮದರ್ಶನ ಪಡೆಯಲು ತೆಲುಗು ಚಿತ್ರರಂಗವೇ ತೆರಳುತ್ತಿದೆ.
ಬಾಳಿ ಬದುಕಬೇಕಿದ್ದ ಮಗ-ಸೊಸೆ ಜತೆ ಸಾವಿನ ಮನೆಯ ಕದ ತಟ್ಟಿದ ತಾಯಿ! ಕಿರಿ ಮಗನ ತಪ್ಪಿಗೆ ನಡೆದೇ ಹೋಯ್ತು ಘೋರ ದುರಂತ

ಪ್ರವಾಸಕ್ಕೆ ಹೋಗಿದ್ದ ಪತ್ನಿ, ಮನೆಯಲ್ಲಿ ಕೊಲೆಯಾಗಿ ಬಿದ್ದಿದ್ದ ಪತಿ, ಅಪ್ಪನ‌ ಶವ ಕಂಡು ಬೆಚ್ಚಿಬಿದ್ದ ಮಗಳು… ಕೊಳ್ಳೇಗಾಲದಲ್ಲಿ ಭೀಕರ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
