ನವದೆಹಲಿ:ನಿಜವಾದ ಅಯೋಧ್ಯೆ ನೇಪಾಳದಲ್ಲಿದೆ. ಶ್ರೀರಾಮ ನೇಪಾಳದ ರಾಜಕುಮಾರ…. ಇಂಥದ್ದೊಂದು ಹೇಳಿಕೆ ಮೂಲಕ ಅಚ್ಚರಿ ಮೂಡಿಸಿದ್ದರು ನೇಪಾಳದ ಪ್ರಧಾನಿ ಕೆ.ಪಿ. ಶರ್ಮ.
ಈ ಹೇಳಿಕೆಗೆ ವಿಶ್ವದ ಬಹುತೇಕ ಕಡೆಗಳಿಂದ ಓಲಿ ವಿರೋಧ ಎದುರಿಸಬೇಕಾಯ್ತು. ಸದ್ಯ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದಲ್ಲಿ ಭಾಗಿಯಾಗಿರುವ ವಿಶ್ವ ಹಿಂದು ಪರಿಷದ್​ ಓಲಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದೆ.
ಇದನ್ನೂ ಓದಿ;ರಾಜಸ್ಥಾನ ಡಿಸಿಎಂ, ಪಿಸಿಸಿ ಅಧ್ಯಕ್ಷ ಸ್ಥಾನದಿಂದ ಸಚಿನ್​ ಪೈಲಟ್​ಗೆ ಕೊಕ್
ಭಾರತದೊಂದಿಗಿನ ನೇಪಾಳದ ಭಾವನಾತ್ಮಕ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸಂಬಂಧವನ್ನು ಹಾಳುಗಡೆವಲು ಪ್ರಧಾನಿ ಇಂಥ ವಿಚಿತ್ರ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವಿಎಚ್​ಪಿ ಅಧ್ಯಕ್ಷ ಅಲೋಕ್​ ಕುಮಾರ್​ ಹೇಳಿದ್ದಾರೆ.
ಓಲಿ ಭಾರತ ವಿರೋಧಿ ನಿಲುವು ತಮ್ಮದಾಗಿಸಿಕೊಂಡಿದ್ದಾರೆ. ಆದರೆ, ರಾಮನನ್ನು ನಂಬುವ ನೇಪಾಳದ ಭಕ್ತರು ಪ್ರಧಾನಿ ಹೇಳಿಕೆಯನ್ನು ಅಲ್ಲಗೆಳೆಯುತ್ತಾರೆ ಹಾಗೂ ಇಂಥ ಜಾಲದಲ್ಲಿ ಸಿಲುಕುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ;ಆಗಸ್ಟ್​ 15ಕ್ಕೆ ಬಳಕೆಗೆ ದೊರೆಯಲಿದೆ ಕರೊನಾ ಲಸಿಕೆ; ಆದರೆ ಭಾರತದ್ದಲ್ಲ…!
ಓಲಿ ಹೇಳಿಕೆಗೆ ನೇಪಾಳದ ಜನರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದೊಂದು ಅನಾರೋಗ್ಯಕರ ಚಿಂತನೆ. ಪ್ರಧಾನಿಗೆ ಯಾವುದೇ ನಿರ್ಬಂಧಗಳಿಲ್ಲದೆ ಬಿಡುವುದು ಅಪಾಯಕಾರಿ ಕೂಡ ಎಂದು ಮಾಜಿ ಪ್ರಧಾನಿ ಬಾಬುರಾಮ್​ ಭಟ್ಟಾರೈ ಹೇಳಿದ್ದಾರೆ. ಒಟ್ಟಾರೆ, ಚೀನಾದ ಕೈಗೊಂಬೆಯಂತೆ ವರ್ತಿಸುತ್ತಿರುವ ಓಲಿ, ಭಾರತ ವಿರೋಧಿ ನಿಲುವನ್ನು ಪ್ರದರ್ಶಿಸುತ್ತಲೇ ಇದ್ದಾರೆ.
ದಲಿತರಿಗೆ ಮೀಸಲಾಗಿದ್ದ ಜಾಗದಲ್ಲಿ 9 ಅಂತಸ್ತಿನ ಕಟ್ಟಡ ನಿರ್ಮಿಸಿದ ಗಾಂಧಿ ಕುಟುಂಬದ ಸಂಸ್ಥೆ; ಇಡಿಯಿಂದ ವಶಕ್ಕೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:6 + 3 =
Remember me
