ಅಹಮದಾಬಾದ್:ಪ್ರಧಾನಿ ಮೋದಿ ಎರಡು ದಿನಗಳ ಕಾಲ ಗುಜರಾತ್ ಪ್ರವಾಸದಲ್ಲಿದ್ದು, ಇಂದು (ಸೆಪ್ಟೆಂಬರ್ 27) ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ. ಇದಲ್ಲದೆ, ಉದಯಪುರದ ಬೊಡೆಲಿಯಲ್ಲಿ 5 ಸಾವಿರ ಕೋಟಿ ರೂ.ಗೂ ಹೆಚ್ಚು ಮೊತ್ತದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯ 20 ವರ್ಷಗಳ ಸ್ಮರಣಾರ್ಥ ಆಯೋಜಿಸಲಾದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಇದು ಕೇವಲ ಬ್ರ್ಯಾಂಡಿಂಗ್‌ನ  ಈವೆಂಟ್​  ಅಲ್ಲ, ಆದರೆ ಬಾಂಡಿಂಗ್ (ಬಾಂಧವ್ಯ)ದ ಈವೆಂಟ್​​ ಆಗಿದೆ. ನನಗಿದು ಬಲವಾದ ಬಾಂಧವ್ಯದ ಸಂಕೇತವಾಗಿದೆ. ಇದು ಅದ್ಭುತವಾಗಿದ್ದು, ನನ್ನ ಮತ್ತು ಇದು ಗುಜರಾತ್‌ನ ಏಳು ಕೋಟಿ ನಾಗರಿಕರ ಸಾಮರ್ಥ್ಯದೊಂದಿಗೆ ಸಂಬಂಧ ಹೊಂದಿದೆ” ಎಂದರು.
ವೈಬ್ರೆಂಟ್ ಗುಜರಾತ್ ಆಲದ ಮರವಾಗಿದೆ. ನಾನು ಈ ಶೃಂಗಸಭೆಯನ್ನು ಪ್ರಾರಂಭಿಸಿದಾಗ ಕೇಂದ್ರ ಸಚಿವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸಲಿಲ್ಲ. ಹೂಡಿಕೆಗೆ ಸಂಬಂಧಿಸಿದಂತೆ ಪರಿಸ್ಥಿತಿಯನ್ನು ಹಾಳು ಮಾಡುವ ಪ್ರಯತ್ನವೂ ನಡೆದಿದೆ. ಆ ಅವಧಿಯಲ್ಲಿ ಗುಜರಾತ್ ಅನ್ನು ಅಸ್ಥಿರಗೊಳಿಸುವ ಪ್ರಯತ್ನಗಳು ನಡೆದವು. ಆ ಅವಧಿಯಲ್ಲಿ ನಾನು ದೇಶದ ಇತರ ರಾಜ್ಯಗಳನ್ನು ಆಹ್ವಾನಿಸಿದೆ ಎಂದು ಮೋದಿ ಹೇಳಿದರು.
ರಾಜ್ಯಗಳು ತಮ್ಮ ರಾಜ್ಯ ಮಳಿಗೆಗಳನ್ನು ಸ್ಥಾಪಿಸುವ ಮೂಲಕ ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳಲು ನಾವು ಹೇಳಿದ್ದೇವೆ. ಹರಿಯಾಣ, ಒಡಿಶಾ ಮತ್ತು ಹಲವು ರಾಜ್ಯಗಳು ಇದರ ಲಾಭ ಪಡೆದವು ಎಂದು ತಿಳಿಸಿದರು.
2003ರಲ್ಲಿ ಶೃಂಗಸಭೆ ಆರಂಭಅಹಮದಾಬಾದ್‌ನ ಸೈನ್ಸ್ ಸಿಟಿಯಲ್ಲಿ ರೋಬೋಟ್ ಪ್ರದರ್ಶನ ನೋಡಲು ಪ್ರಧಾನಿ ಮೋದಿ ಭೇಟಿ ನೀಡಿದ್ದು, ಭೇಟಿಯ ಸಮಯದಲ್ಲಿ ಅವರು ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯನ್ನು ಉದ್ಘಾಟಿಸಿದರು. ಅವರೊಂದಿಗೆ ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಮತ್ತು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕೂಡ ಉಪಸ್ಥಿತರಿದ್ದರು. ಇಂದು ಪ್ರಧಾನಿ ಮೋದಿ ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಛೋಟೌದೇಪುರ್ ಜಿಲ್ಲೆಯ ಬೋಡೆಲಿ ಪಟ್ಟಣದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 2003ರಲ್ಲಿ ಪ್ರಧಾನಿ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆ ಆರಂಭಿಸಲಾಗಿತ್ತು.
10 ನೇ ಆವೃತ್ತಿಗೆ ತಯಾರಿಮಾಹಿತಿಯ ಪ್ರಕಾರ, ಗುಜರಾತ್ ಸರ್ಕಾರವು ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯ 10 ನೇ ಆವೃತ್ತಿಗೆ ತಯಾರಿ ನಡೆಸುತ್ತಿದೆ, ಇದನ್ನು ಮುಂದಿನ ವರ್ಷ ಜನವರಿ 10 ರಿಂದ 12 ರವರೆಗೆ ಗಾಂಧಿನಗರದಲ್ಲಿ ‘ಭವಿಷ್ಯದ ಹೆಬ್ಬಾಗಿಲು’ ಎಂಬ ವಿಷಯದ ಮೇಲೆ ಆಯೋಜಿಸಲಾಗಿದೆ.
ಬಿಜೆಪಿ ಮಹಿಳಾ ಘಟಕದಿಂದ ಮೋದಿಗೆ ಸನ್ಮಾನಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಹಿಳಾ ಘಟಕ ವಡೋದರಾದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರನ್ನು ಸನ್ಮಾನಿಸಲಾಗುವುದು.
World Tourism Day 2023: ಪ್ರವಾಸೋದ್ಯಮದಲ್ಲಿ ಸರ್ಕಾರಿ ಉದ್ಯೋಗಗಳು: ಎಲ್ಲಿ, ಹೇಗೆ ನೇಮಕಾತಿ ನಡೆಯಲಿದೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 5 =
Remember me
