ಮುಂಬೈ:ಇತ್ತೀಚಿನ ವರ್ಷಗಳಲ್ಲಿ ಯುವ ಪೀಳಿಗೆಯೂ ಮೊಬೈಲ್​ ಗೀಳಿಗೆ ಹೆಚ್ಚು ದಾಸರಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುವ ಭರದಲ್ಲಿ ಇನ್ನಿಲ್ಲದ ಕೆಲಸಕ್ಕೆ ಕೈ ಹಾಕಿ ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಾರೆ. ಇದೀಗ ಇದಕ್ಕೆ ಸಂಬಂಧಿಸಿದಂತೆ ಯುವತಿಯೊಬ್ಬಳು ರೀಲ್ಸ್​ ಮಾಡುವಾಗ 300 ಅಡಿ ಆಳದ ಕಂದಕಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಘಟನೆಯು ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಹನುಮಾನ್​ನಗರದಲ್ಲಿ ನಡೆದಿದ್ದು, ಮೃತರನ್ನು ಶ್ವೇತಾ ದೀಪಕ್​ ಸುರ್ವಾಸೆ (23) ಎಂದು ಗುರುತಿಸಲಾಗಿದೆ. ಇವರು ರೀಲ್ಸ್​ ಮಾಡುವಾಗ ಕಾರನ್ನು ರಿವರ್ಸ್​ ತೆಗೆಯುವಾಗ ಈ ದುರ್ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು.
On Camera, Woman Reverses Car Off#MaharashtraCliff, Falls 300 Feet, DiesRead Here:https://t.co/KRKKoWvbkhpic.twitter.com/lk2L3BtZHW
ಇದನ್ನೂ ಓದಿ:ಮೋದಿ ಪ್ರಧಾನಿಯಾಗಿ ಆಯ್ಕೆಯಾಗಿದ್ದಕ್ಕೆ ಉರುಳು ಸೇವೆ ಮಾಡಿ ಹರಕೆ ತೀರಿಸಿದ ಅಭಿಮಾನಿ
ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ, ರೀಲ್ಸ್​ ಮಾಡುವಾದ ಯುವತಿ ಕಾರನ್ನು ರಿವರ್ಸ್​ ತೆಗೆಯುತ್ತ ರೀಲ್ಸ್​ ಮಾಡಲು ಶುರು ಮಾಡುತ್ತಾರೆ. ಈ ವೇಳೆ ಆಕೆಯ ಗೆಳೆಯ ಕಾರನ್ನು ನಿಧಾನವಾಗಿ ರಿವರ್ಸ್​ ತೆಗೆಯುವಂತೆ ಸೂಚಿಸುತ್ತಾನೆ. ಇದಕ್ಕೆ ಕೇರ್​ ಮಾಡದ ಆಕೆ ವೇಗವಾಗಿ ರಿವರ್ಸ್​ ತೆಗೆಯುತ್ತಾಳೆ. ಈ ವೇಳೆ ನಿಯಂತ್ರಣ ತಪ್ಪಿ ಕಾರು 300 ಅಡಿ ಆಳದ ಕಂದಕಕ್ಕೆ ಉರುಳುತ್ತದೆ.
ಕಾರಿ ಕಂದಕಕ್ಕೆ ಉರುಳಿದ ರಭಸಕ್ಕೆ ಜಖಂಗೊಂಡಿದ್ದು, ಕಾರಿನೊಳಗಡೆ ಯುವತಿ ಕಾರು ಬಿದ್ದ ರಭಸಕ್ಕೆ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ. ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡದ ಸದಸ್ಯರು ಕಂದಕಕ್ಕೆ ಉರುಳಿದ್ದ ಕಾರು ಹಾಗೂ ಮೃತದೇಹವನ್ನು ಹೊರತೆಗೆದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + one =
Remember me
