ಕೊಯಂಬತೂರ್ :ಚುನಾವಣಾ ಪ್ರಚಾರದಲ್ಲಿ ಹೊಸ ಹೊಸ ತಂತ್ರಗಳನ್ನು ಉಪಯೋಗಿಸುವುದರಲ್ಲಿ ತಮಿಳುನಾಡು ಎತ್ತಿದ ಕೈ. ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ರಾಜ್ಯದಲ್ಲಿ ಇತ್ತೀಚೆಗಷ್ಟೇ ಅಭ್ಯರ್ಥಿಗಳು ರಸ್ತೆ ಬದಿ ಹೊಟೆಲ್​ಗಳಲ್ಲಿ ದೋಸೆ ಹಾಕಿ ಜನರ ಗಮನ ಸೆಳೆದಿದ್ದರು. ಇದೀಗ ಕಲಾವಿದನೊಬ್ಬ ಬುಗುರಿಗಳನ್ನು ಆಡಿಸಿ ಎಐಎಡಿಎಂಕೆ ಪರ ಪ್ರಚಾರ ಮಾಡಿದ್ದಾನೆ.
ಎಐಎಡಿಎಂಕೆ ಪಕ್ಷವು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ತಮಿಳುನಾಡಿನಲ್ಲಿ 234 ವಿಧಾನಸಭಾ ಕ್ಷೇತ್ರಗಳಿದ್ದು, ಏಪ್ರಿಲ್ 6 ರಂದು ಮೊದಲ ಹಂತದ ಮತದಾನ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ನಿನ್ನೆ ಕೊಯಂಬತೂರ್​ನಲ್ಲಿ, ಮಿನಿಯೇಚರ್ ಆರ್ಟಿಸ್ಟ್ ಆದ ರಾಜಾ ಎಂಬುವರು, 7 ನಿಮಿಷಗಳಲ್ಲಿ 234 ಬುಗುರಿಗಳನ್ನು ಎರಡು ಬೆರಳುಗಳನ್ನು ಮಾತ್ರ ಬಳಸಿ ತಿರುಗಿಸಿದ್ದಾರೆ. ಈ ಮರದ ಬುಗುರಿಗಳಿಗೆ ಎಐಎಡಿಎಂಕೆ ಬಾವುಟದ ರೀತಿ ಬಣ್ಣ ಹಚ್ಚಿರುವುದು ವಿಶೇಷ.
#WATCHCoimbatore: A miniature artist rotated 234 peg-tops in apparently seven minutes using just two fingers to campaign for AIADMK, yesterday#TamilNaduElectionspic.twitter.com/AvXohUa9rO— ANI (@ANI)April 1, 2021
#WATCHCoimbatore: A miniature artist rotated 234 peg-tops in apparently seven minutes using just two fingers to campaign for AIADMK, yesterday#TamilNaduElectionspic.twitter.com/AvXohUa9rO

“ಎಐಎಡಿಎಂಕೆಯ ಎರಡು ಎಲೆಗಳ ಚಿಹ್ನೆಯನ್ನು ಮತ್ತು ವಿಕ್ಟರಿ ಚಿಹ್ನೆಯನ್ನು ಬಿಂಬಿಸಲು ನಾನು ಎರಡು ಬೆರಳುಗಳಿಂದ ಬುಗುರಿಗಳನ್ನು ತಿರುಗಿಸಿದ್ದೇನೆ. ಪಕ್ಷದ ಎಲ್ಲಾ ಕಾರ್ಯಕರ್ತರು ಬುಗುರಿಗಳಂತೆ ಕೆಲಸ ಮಾಡಿ ಪಕ್ಷವನ್ನು ತಮಿಳುನಾಡು ಚುನಾವಣೆಯಲ್ಲಿ ಗೆಲ್ಲಿಸಬೇಕೆಂದು ಕೋರುತ್ತೇನೆ ” ಎಂದು ರಾಜಾ ಹೇಳಿದ್ದಾರೆ.(ಏಜೆನ್ಸೀಸ್)
ಜಮ್ಮುವಿನಲ್ಲಿ ತಿಮ್ಮಪ್ಪನ ದೇವಾಲಯ ! 25 ಹೆಕ್ಟೇರ್ ಭೂಮಿ ಮಂಜೂರು
ಈ ಅಪರೂಪದ ತರಕಾರಿಯ ಬೆಲೆ ಕೇಳಿದರೆ ತಲೆ ಸುತ್ತುವುದು ಗ್ಯಾರಂಟಿ!
ಮೂರನೇ ಹಂತ ಆರಂಭ : ಈ ತಿಂಗಳು ರಜಾ ದಿನಗಳಲ್ಲೂ ಲಸಿಕೆ ಲಭ್ಯ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − three =
Remember me
