ರಾಯ್ಪುರ:‘ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ…’ ಎಂಬ ಗೀತೆ ಕೇಳಿದಂತೆಯೇ ಕನ್ನಡಪ್ರೇಮಿಗಳಲ್ಲಿ ರೋಮಾಂಚನವಾಗುವುದುಂಟು. ಕರ್ನಾಟಕದ ನಾಡಗೀತೆಯಾದ ಈ ಹಾಡಿನ ಮಾದರಿಯಲ್ಲಿ ದೇಶದ ಇತರ ರಾಜ್ಯಗಳಿಗೂ ರಾಜ್ಯಗೀತೆಗಳಿರುವುದು ಸರಿಯಷ್ಟೆ. ನವರಾಜ್ಯವಾದ ಛತ್ತೀಸಗಡದ ‘ರಾಜ್​ ಗೀತ್​’ಅನ್ನು ಕೇಳುವ ಅವಕಾಶ ಇದೀಗ ಜಗತ್ತಿನ ವಿವಿಧೆಡೆಯ ನೆಟ್ಟಿಗರಿಗೆ ಸಿಕ್ಕಿದೆ.
ಛತ್ತೀಸಗಡದ ಸಿಎಂ ಭೂಪೇಶ್​ ಬಘೇಲ್​ ಅವರು ಬಾಲಕನೊಬ್ಬ ರಾಜ್ಯಗೀತೆಯನ್ನು ಹಾಡಿರುವ ವಿಡಿಯೋ ತುಣುಕನ್ನು ಇತ್ತೀಚೆಗೆ ತಮ್ಮ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ಇದರಲ್ಲಿ “ಅರ್ಪಾ ಪೈರೀ ಕೆ ಧಾರ್​, ಮಹಾನದೀ ಹೇ ಅಪಾರ್​…’ ಎಂಬ ಸುಮಧುರ ನಾದವುಳ್ಳ ಗೀತೆಯನ್ನು ಅಂಧ ಬಾಲಕನೊಬ್ಬ ಹಾಡಿರುವುದು ವಿಶೇಷ. “ಈ ಬಾಲಕನ ಹಾಡನ್ನು ಕೇಳುತ್ತಲೇ ಇರೋಣ ಎನ್ನಿಸುತ್ತಿದೆ” ಎಂದು ಬರೆದಿರುವ ಸಿಎಂ ಭೂಪೇಶ್​ ಬಘೇಲ್​ ಅವನಿಗೆ ಶುಭ ಹಾರೈಸಿದ್ದಾರೆ.
"माई सेल्फ धर्मेंद्र दास महंत"…सुनिए, ये छत्तीसगढ़ का राजगीत गा रहे हैं। मुझे लगा कि सुनता ही रहूं।
खूब आशीष और प्यार.pic.twitter.com/nG2XFnPz5e
— Bhupesh Baghel (@bhupeshbaghel)November 23, 2021

“ಮೈಸೆಲ್ಫ್​ ಧರ್ಮೇಂದ್ರ ದಾಸ್​ ಮಹಂತ್​” ಎಂದು ಪರಿಚಯ ಮಾಡಿಕೊಂಡು ಸುಶ್ರಾವ್ಯವಾಗಿ ಹಾಡುವ ಈ ಬಾಲಕ, ರಾಜ್ಯದ ಜಂಜ್​ಗೀರ್-ಚಂಪಾ ಜಿಲ್ಲೆಯ ಅಂಧರ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದಾನೆ. ವೈರಲ್​ ಆಗಿ ಸಹಸ್ರಾರು ವೀಕ್ಷಣೆಗಳನ್ನು ಪಡೆದಿರುವ ಈ ವಿಡಿಯೋ ತುಣುಕು ನೆಟ್ಟಿಗರ ಮೆಚ್ಚುಗೆ ಗಳಿಸಿದೆ.(ಏಜೆನ್ಸೀಸ್)
ಮನೇಲಿ ಬಾಡಿ ಸೂಟ್​ ಹಾಕ್ಕೊಂಡು ಓಡಾಡ್ತಿದ್ದೆ: ‘ಛೋರೀ’ ನಟಿ ನುಸ್ರತ್​

ಬಿಟ್​ಕಾಯಿನ್​ಗೆ ಭಾರತದಲ್ಲಿ ಸಿಗುವುದೇ ಮಾನ್ಯತೆ? ವಿತ್ತ ಸಚಿವಾಲಯ ಹೇಳಿದ್ದೇನು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × 2 =
Remember me
